ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಶುರುವಾಗುತ್ತಿದೆ ಬಹಳ ಅಪರೂಪದ ಸಂಯೋಗ: ಸೂರ್ಯ ಹಾಗೂ ಶುಕ್ರನ ಕೃಪೆಯಿಂದ ಈ ರಾಶಿಯವರಿಗೆ ಭರ್ಜರಿ ಲಾಭ. ಯಾರಿಗೆ ಗೊತ್ತೇ??

2,275

Get real time updates directly on you device, subscribe now.

ಶುಕ್ರ ಮತ್ತು ಸೂರ್ಯ ಬಹಳ ವಿಶೇಷವಾದ ಗ್ರಹಗಳು. ಈ ಎರಡಕ್ಕೂ ಬಹಳ ಮಹತ್ವ ಇದೆ. ಶುಕ್ರನನ್ನು ಅಸುರರ ರಾಜ ಎಂದು ಕರೆಯುತ್ತಾರೆ. ಶುಕ್ರ ಗ್ರಹವು ಒಬ್ಬ ಮನುಷ್ಯನ ಜೀವನದ ಸಂತೋಷ ಮತ್ತು ಸಮೃದ್ಧಿಗೆ ಕಾರಣ. ಹಾಗೂ ಒಬ್ಬ ವ್ಯಕ್ತಿಯ ಪ್ರೀತಿ ವಿಚಾರ ಸೌಕರ್ಯ, ಸಂಬಂಧ, ಫ್ಯಾಶನ್, ಸೌಂದರ್ಯ ಇದೆಲ್ಲದರ ಅಂಶ ಎಂದು ಹೇಳಲಾಗುತ್ತದೆ. ಆಗಸ್ಟ್ 31ರಂದು ಈ ಶುಕ್ರ ಗ್ರಹವು ಸಿಂಹ ರಾಶಿಗೆ ಪ್ರವೇಶಿಸಲಿದೆ, ಸಿಂಹ ರಾಶಿಯಲ್ಲಿ ಈಗಾಗಲೇ ಸೂರ್ಯ ಗ್ರಹವಿದೆ, ಇಲ್ಲಿ ಸೂರ್ಯ ಮತ್ತು ಶುಕ್ರರ ಸಂಯೋಗ ನಡೆಯಲಿದೆ. ಸೆಪ್ಟೆಂಬರ್ 17ರ ವರೆಗೂ ಶುಕ್ರ ಸಿಂಹ ರಾಶಿಯಲ್ಲಿ ಇರಲಿದ್ದಾನೆ. ಈ ಎರಡು ರಾಶಿಗಳನ್ನು ವೈರಿಗಳು ಎಂದು ಕರೆಯುತ್ತಾರೆ. ಇವರ ಸಂಯೋಗ ಆದಾಗ, ಕೆಲವು ರಾಶಿಗಳ ಮೇಲೆ ಸುಷ್ಪರಿಣಾಮ ಬೀರಿದರೆ, ಇನ್ನು ಕೆಲವು ರಾಶಿಗಳ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ. ಆ ರಾಶಿಗಳು ಯಾವುವು ಎಂದು ನೋಡೋಣ..

ವೃಷಭ ರಾಶಿ :- ಸೂರ್ಯ ಶುಕ್ರರ ಸಂಯೋಗ ವೃಷಭ ರಾಶಿಯವರ ಜೀವನಕ್ಕೆ ಸಂತೋಷ ಮತ್ತು ಸಮೃದ್ಧಿ ತರುತ್ತದೆ. ನಿಮ್ಮ ಜೀವನದಲ್ಲಿ ಐಶಾರಮಿತನ ಹೆಚ್ಚಾಗುತ್ತದೆ. ಈ ಸಮಯದಲ್ಲಿ ಐಷಾರಾಮಿ ವಸ್ತು ಖರೀದಿ ಮಾಡುತ್ತೀರಿ, ಕೌಟುಂಬಿಕ ಜೀವನ ಚೆನ್ನಾಗಿರುತ್ತದೆ. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ ಒಳ್ಳೆಯ ಫಲ ಸಿಗುತ್ತದೆ.

ಮಿಥುನ ರಾಶಿ :- ಈ ರಾಶಿಯವರಿಗೆ ಸಂವಹನ ಕೌಶಲ್ಯ ಹೆಚ್ಚಾಗುತ್ತದೆ. ಒಡಹುಟ್ಟಿದವರ ಜೊತೆಗಿನ ಸಂಬಂಧ ಗಟ್ಟಿಯಾಗುತ್ತದೆ. ದುಬಾರಿ ಪ್ರವಾಸ ಕೈಗೊಳ್ಳುವ ನಿರ್ಧಾರ ನೀವು ಮಾಡಬಹುದು, ಇದರಿಂದ ಮನೆಯವರ ಜೊತೆಗೆ ನಿಮ್ಮ ಸಂಬಂಧ ಬಲವಾಗುತ್ತದೆ. ತಂದೆಯ ಜೊತೆಗೆ ಚೆನ್ನಾಗಿರಲಿದ್ದೀರಿ. ಮಾರ್ಕೆಟಿಂಗ್ ಹಾಗೂ ಸೋಷಿಯಲ್ ಮೀಡಿಯಾಗೆ ಸಂಬಂಧಿಸಿದವರಿಗೆ ಒಳ್ಳೆಯ ಫಲಿತಾಂಶ ಸಿಗಲಿದೆ.

ಕರ್ಕಾಟಕ ರಾಶಿ :- ಈ ಸಮಯದಲ್ಲಿ ಕರ್ಕಾಟಕ ರಾಶಿಯವರ ಆರ್ಥಿಕ ಸ್ಥಿತಿ ಅದ್ಭುತವಾಗಿರುತ್ತದೆ. ಹೆಚ್ಚು ಮೂಲಗಳಿಂದ ಹಣ ಬರುತ್ತದೆ. ಜೀವನಕ್ಕೆ ಹೆಚ್ಚು ಹಣ ಪ್ರಾಪ್ತಿಯಾಗುತ್ತದೆ, ನಿಮಗಾಗಿ ಹಣ ಖರ್ಚು ಮಾಡುತ್ತೀರಿ. ವಿದ್ಯಾರ್ಥಿಗಳಿಗೆ ಇದು ಒಳ್ಳೆಯ ಸಮಯ. ದೂರದ ಪ್ರಯಾಣಕ್ಕೆ ನೀವು ಹೋಗಬಹುದು. ಹಣಕಾಸಿನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಇದು ಒಳ್ಳೆಯ ಸಮಯ ಆಗಿದೆ.

ಧನು ರಾಶಿ :- ಈ ರಾಶಿಯವರಿಗೆ ಇದು ಒಳ್ಳೆಯ ಸಮಯ ಆಗಿದೆ, ಧನು ರಾಶಿಯವರು ದೀರ್ಘವಾದ ಮತ್ತು ದುಬಾರಿಯಾದ ಪ್ರಯಾಣಕ್ಕೆ ಯೋಜನೆ ಮಾಡುತ್ತೀರಿ. ಇದಕ್ಕೆ ನಿಮ್ಮ ಗುರುಗಳಿಂದ ಬೆಂಬಲ ಸಿಗುತ್ತದೆ. ಆಧ್ಯಾತ್ಮದ ಕಡೆಗೆ ಒಲವು ಹೆಚ್ಚಾಗುತ್ತದೆ. ಉನ್ನತ ವಿದ್ಯಾಭ್ಯಾಸ ಮಾಡಲು ಬಯಸುತ್ತಿರುವವರಿಗೆ ಇದು ಒಳ್ಳೆಯ ಸಮಯ ಆಗಿದೆ.

ಕುಂಭ ರಾಶಿ :- ಈ ರಾಶಿಯವರಿಗೆ ಈ ಸಮಯ ಒಳ್ಳೆಯದನ್ನು ಮಾಡುತ್ತದೆ. ಒಂಟಿಯಾಗಿ ಇರುವವರು ಮದುವೆ ಆಗುವ ಸೂಚನೆ ಇದೆ. ಅರ್ಥಿಕ ಸ್ಥಿತಿ ಬಲವಾಗುತ್ತದೆ, ಹೆಚ್ಚಿನ ಹಣ ಗಳಿಸುತ್ತೀರಿ. ಪಾರ್ಟ್ನರ್ಶಿಪ್ ನಲ್ಲಿ ಕೆಲಸ ಮಾಡುತ್ತಿರುವವರಿಗೆ ಒಳ್ಳೆಯದಾಗುತ್ತದೆ. ಹಣ ಹೂಡಿಕೆ ಮಾಡಲು ಇದು ಒಳ್ಳೆಯ ಸಮಯ ಆಗಿದೆ.

Get real time updates directly on you device, subscribe now.