ರಾಹುಲ್ ಗೆ ಮತ್ತೊಮೆ ನಿರಾಸೆಯೇ?? ರೋಹಿತ್ ಜೊತೆ ಆರಂಭಿಕನಾಗಿ ಯಾರು ಕಣಕ್ಕೆ ಇಳಿಯ ಬೇಕಂತೆ ಗೊತ್ತೇ??
ರಾಹುಲ್ ಗೆ ಮತ್ತೊಮೆ ನಿರಾಸೆಯೇ?? ರೋಹಿತ್ ಜೊತೆ ಆರಂಭಿಕನಾಗಿ ಯಾರು ಕಣಕ್ಕೆ ಇಳಿಯ ಬೇಕಂತೆ ಗೊತ್ತೇ??
ಏಷ್ಯಾಕಪ್ ಪಂದ್ಯಗಳ ಬಗ್ಗೆ ಈಗ ಎಲ್ಲೆಡೆ ಭಾರಿ ಚರ್ಚೆ ಶುರುವಾಗುತ್ತಿದೆ. ಟೀಮ್ ಇಂಡಿಯಾ ಹೇಗೆ ಪ್ರದರ್ಶನ ನೀಡುತ್ತದೆ ಎಂದು ಎಲ್ಲರೂ ಕಾದು ಕುಳಿತಿದ್ದಾರೆ. ಇಂದಿನಿಂದ ಏಷ್ಯಾಕಪ್ ಟೂರ್ನಿ ಯುಎಇ ನಲ್ಲಿ ಆರಂಭವಾಗಿದ್ದು, ಭಾರತದ ಮೊದಲ ಪಂದ್ಯ ನಾಳೆಯಿಂದ ಶುರುವಾಗಲಿದೆ, ನಾಳೆ ನಡೆಯುವ ಪಂದ್ಯ ಭಾರಿ ನಿರೀಕ್ಷೆ ಸೃಷ್ಟಿಸಿದೆ. ಭಾರತ ಮತ್ತು ಪಾಕಿಸ್ತಾನ್ ವಿರುದ್ಧದ ಪಂದ್ಯ ನಡೆಯಲಿದೆ. ಈ ಪಂದ್ಯದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ ಎಂದರೆ ತಪ್ಪಾಗುವುದಿಲ್ಲ.
ಈ ಪಂದ್ಯದಲ್ಲಿ ಭಾರತ ತಂಡ ಗೆಲ್ಲಲೇಬೇಕೆಂದು ಭಾರತ ತಂಡವು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಅತ್ಯುತ್ತಮವಾದ ಬ್ಯಾಟ್ಸ್ಮನ್ ಗಳು, ಬ್ಯಾಟಿಂಗ್ ಆರ್ಡರ್ ನಲ್ಲಿ ಬರಲಿದ್ದು, ಉತ್ತಮವಾದ ಬೌಲರ್ ಗಳನ್ನು ಸಹ ಆಯ್ಕೆ ಮಾಡಿಕೊಂಡಿದ್ದಾರೆ. ಪ್ಲೇಯಿಂಗ್ 11ನಲ್ಲಿ ಯಾರೆಲ್ಲಾ ಇರುತ್ತಾರೆ ಎಂದು ಕಾದು ನೋಡಬೇಕಿದೆ. ಇನ್ನು ಆರಂಭಿಕ ಬ್ಯಾಟ್ಸ್ಮನ್ ಗಳು ಭಾರತ ತಂಡಕ್ಕೆ ಬಹಳ ಮುಖ್ಯ, ಎಲ್ಲರೂ ಅಂದುಕೊಂಡ ಹಾಗೆ ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ವೈಸ್ ಕ್ಯಾಪ್ಟನ್ ಕೆ.ಎಲ್.ರಾಹುಲ್ ಆರಂಭಿಕ ಬ್ಯಾಟ್ಸ್ಮನ್ ಗಳಾಗಲಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಸಬಾ ಕರೀಮ್ ಅವರು ಇದೀಗ ಆರಂಭಿಕ ಬ್ಯಾಟ್ಸ್ಮನ್ ಬದಲಾಗಬೇಕು ಎನ್ನುತ್ತಿದ್ದಾರೆ.
ಇಂಜೂರಿ ಇಂದ ಬಳಲುತ್ತಿದ್ದ ಕೆ.ಎಲ್.ರಾಹುಲ್ ಅವರು ಇದೀಗ ಭಾರತ ತಂಡಕ್ಕೆ ಮರಳಿ ಬಂದಿದ್ದಾರೆ. ಸಬಾ ಕರೀಮ್ ಅವರು ಹೇಳಿರುವ ಪ್ರಕಾರ, ಕೆ.ಎಲ್.ರಾಹುಲ್ ಅವರ ಬದಲಾಗಿ ವಿರಾಟ್ ಕೋಹ್ಲಿ ಅವರು ಆರಂಭಿಕ ಬ್ಯಾಟ್ಸ್ಮನ್ ಆದರೆ ಒಳ್ಳೆಯದು ಎಂದು ಹೇಳಿದ್ದಾರೆ. ಏಕೆಂದರೆ, ಜಿಂಬಾಬ್ವೆ ಸರಣಿ ಪಂದ್ಯಗಳಲ್ಲಿ ಕೆ.ಎಲ್.ರಾಹುಲ್ ವೈಫಲ್ಯ ಅನುಭವಿಸಿದರು, ಹಾಗಾಗಿ ಅವರ ಬದಲಾಗಿ ವಿರಾಟ್ ಕೋಹ್ಲಿ ಅವರು ಆರಂಭಿಕ ಬ್ಯಾಟ್ಸ್ಮನ್ ಅರರೆ ಒಳ್ಳೆಯದು ಎಂದಿದ್ದಾರೆ. ಆದರೆ ಪ್ಲೇಯಿಂಗ್ 11 ನಲ್ಲಿ ಯಾರೆಲ್ಲಾ ಇರಲಿದ್ದಾರೆ ಹಾಗೂ ಯಾವ ಆರ್ಡರ್ ನಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ ಎನ್ನುವ ಬಗ್ಗೆ ಇನ್ನೂ ಮಾಹಿತಿ ತಿಳಿದುಬಂದಿಲ್ಲ.