ಏಷ್ಯಾ ಕಪ್ ನಲ್ಲಿ ಪಾಕಿಸ್ತಾನ ವಿರುದ್ಧ ಹೈ ವೋಲ್ಟೇಜ್ ಪಂದ್ಯಕ್ಕೆ ಸಂಭಾವ್ಯ ಭಾರತ ತಂಡ 11 ಹೇಗಿದೆ ಗೊತ್ತೇ?? ಯಾರೆಲ್ಲ ಇದ್ದಾರೆ ಗೊತ್ತೇ??

ಏಷ್ಯಾ ಕಪ್ ನಲ್ಲಿ ಪಾಕಿಸ್ತಾನ ವಿರುದ್ಧ ಹೈ ವೋಲ್ಟೇಜ್ ಪಂದ್ಯಕ್ಕೆ ಸಂಭಾವ್ಯ ಭಾರತ ತಂಡ 11 ಹೇಗಿದೆ ಗೊತ್ತೇ?? ಯಾರೆಲ್ಲ ಇದ್ದಾರೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಕಳೆದ ಬಾರಿ ಮೊದಲ ಬಾರಿಗೆ ಐಸಿಸಿ ಟೂರ್ನಮೆಂಟ್ ಗಳಲ್ಲಿ ಅದರಲ್ಲೂ ವಿಶೇಷವಾಗಿ ಟಿ ಟ್ವೆಂಟಿ ವಿಶ್ವ ಕಪ್ ನಲ್ಲಿ ಭಾರತೀಯ ಕ್ರಿಕೆಟ್ ತಂಡ ಪಾಕಿಸ್ತಾನದ ವಿರುದ್ಧ ಸೋತು ಮುಖಭಂಗವನ್ನು ಅನುಭವಿಸಿತ್ತು. ಹೀಗಾಗಿ ಅದಾದ ನಂತರ ಮೊದಲ ಬಾರಿಗೆ ಮುಖಾಮುಖಿ ಆಗುತ್ತಿರುವ ಭಾರತ ಹಾಗೂ ಪಾಕಿಸ್ತಾನ ತಂಡಗಳು ಈ ಬಾರಿ ಆಗಸ್ಟ್ 28 ರಂದು ನಡೆಯಲಿರುವ ಏಷ್ಯಾ ಕಪ್ ನ ಎರಡನೇ ಪಂದ್ಯಾಟದಲ್ಲಿ ಮುಖಾಮುಖಿ ಆಗಲಿವೆ.

ಈ ಪಂದ್ಯ ಸಾಕಷ್ಟು ಹೈ ವೋಲ್ಟೇಜ್ ನಿಂದ ಕೂಡಿದ್ದು ಸಾಕಷ್ಟು ವಿಚಾರಗಳಿಗಾಗಿ ವಿಶೇಷವಾಗಿವೆ. ಸಾಮಾನ್ಯವಾಗಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವೆಂದರೆ ಯಾವುದೇ ಸಮರಕ್ಕೂ ಕಡಿಮೆ ಇಲ್ಲದಂತೆ ಇರುತ್ತದೆ. ಇನ್ನು ಈ ಬಾರಿ ಜಸ್ಪ್ರೀತ್ ಬುಮ್ರಾ ಅವರ ಅನುಪಸ್ಥಿತಿಯಲ್ಲಿ ಭಾರತೀಯ ಕ್ರಿಕೆಟ್ ತಂಡ ಇಂತಹ ಮಹತ್ವದ ಟೂರ್ನಮೆಂಟ್ ಅನ್ನು ಆಡಲಿದೆ. ಕಳಪೆ ಫಾರ್ಮ್ ನಲ್ಲಿರುವ ವಿರಾಟ್ ಕೊಹ್ಲಿ ಅವರಿಗೆ ತಮ್ಮನ್ನು ತಾವು ಸಾಬೀತುಪಡಿಸಿಕೊಳ್ಳಲು ಇರುವಂತಹ ಇದು ಕೊನೆಯ ಐಸಿಸಿ ಟೂರ್ನಮೆಂಟ್ ಎಂದು ಹೇಳಬಹುದಾಗಿದೆ.

ಎಲ್ಲದಕ್ಕಿಂತ ಪ್ರಮುಖವಾಗಿ ಕಳೆದ ಬಾರಿ ಅನುಭವಿಸಿರುವ ಸೋಲಿಗೆ ಸೇಡು ತೀರಿಸಿಕೊಳ್ಳಲು ಇರುವಂತಹ ಗೋಲ್ಡನ್ ಅವಕಾಶ ಎನ್ನುವುದು ಸದ್ಯಕ್ಕೆ ಭಾರತದ ಮುಂದಿರುವ ಅವಕಾಶವಾಗಿದೆ. ಆಗಸ್ಟ್ 28 ರಂದು ನಡೆಯಲಿರುವ ಈ ಪಂದ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಆಡಳಿರುವ ಹನ್ನೊಂದರ ಬಳಗದಲ್ಲಿರುವ ಆಟಗಾರರು ಯಾರೆಲ್ಲ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಭಾರತೀಯ ಕ್ರಿಕೆಟ್ ತಂಡದ ನಾಯಕನಾಗಿ ರೋಹಿತ್ ಶರ್ಮ ಅವರ ಜೊತೆಗೆ ಉಪನಾಯಕನಾಗಿ ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯ ಕುಮಾರ್ ಯಾದವ್, ರಿಷಬ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಅರ್ಷ ದೀಪ್ ಸಿಂಗ್, ಯಜುವೇಂದ್ರ ಚಹಾಲ್. ನೋಡಲು ಬಲಿಷ್ಠವಾಗಿ ಕಾಣಿಸುತ್ತಿರುವ ಈ ತಂಡ ಮೈದಾನದಲ್ಲಿ ಕೂಡ ವಿಜಯ ಕಹಳೆ ಮೊಳಗಿಸಲಿ ಎಂಬುದಾಗಿ ಹಾರೈಸೋಣ.