ಏಷ್ಯಾ ಕಪ್ ಆರಂಭಕ್ಕೂ ಮುನ್ನವೇ ಗೆಲ್ಲುವ ತಂಡವನ್ನು ಹೆಸರಿಸಿದ ಶೇನ್ ವಾಟ್ಸನ್. ಯಾವ ತಂಡ ಗೆಲ್ಲಲಿದೆ ಅಂತೇ ಗೊತ್ತೇ?? ಪಾಕ್ vs ಭಾರತ ಪಂದ್ಯದ ಬಗ್ಗೆ ಹೇಳಿದ್ದೇನು ಗೊತ್ತೇ??
ಏಷ್ಯಾ ಕಪ್ ಆರಂಭಕ್ಕೂ ಮುನ್ನವೇ ಗೆಲ್ಲುವ ತಂಡವನ್ನು ಹೆಸರಿಸಿದ ಶೇನ್ ವಾಟ್ಸನ್. ಯಾವ ತಂಡ ಗೆಲ್ಲಲಿದೆ ಅಂತೇ ಗೊತ್ತೇ?? ಪಾಕ್ vs ಭಾರತ ಪಂದ್ಯದ ಬಗ್ಗೆ ಹೇಳಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರೂ ಕಾಯುತ್ತಿದ್ದ ಏಷ್ಯಾ ಕಪ್ ಟೂರ್ನಮೆಂಟ್ ಇದೆ ಆಗಸ್ಟ್ 27ರಿಂದ ಪ್ರಾರಂಭವಾಗಲಿದೆ. ಆದರೆ ಏಷ್ಯಾ ಕಪ್ ಅನ್ನು ಎಲ್ಲರೂ ಅತ್ಯಂತ ನಿರೀಕ್ಷೆಯಿಂದ ಕಾಯುತ್ತಿರುವುದು ಅದರ ಎರಡನೇ ಪಂದ್ಯ ಅಂದರೆ ಆಗಸ್ಟ್ 28ರಂದು ನಡೆಯಲಿರುವ ಇಂಡಿಯಾ ಹಾಗೂ ಪಾಕಿಸ್ತಾನದ ಪಂದ್ಯದ ಬಗ್ಗೆ. ಅನಾದಿ ಕಾಲದಿಂದಲೂ ಕೂಡ ಇಂಡಿಯಾ ಹಾಗೂ ಪಾಕಿಸ್ತಾನದ ಪಂದ್ಯಾಟಗಳು ಅತ್ಯಂತ ಕುತೂಹಲಕ್ಕೆ ಕಾರಣವಾಗುತ್ತವೆ. ಅದರಲ್ಲೂ ಕಳೆದ ಬಾರಿ ಭಾರತ ಕ್ರಿಕೆಟ್ ತಂಡ ಟಿ20 ವಿಶ್ವಕಪ್ ನಲ್ಲಿ ಪಾಕಿಸ್ತಾನ ತಂಡದ ಎದುರು ಮೊದಲ ಬಾರಿಗೆ ಸೋತಿತ್ತು. ಇದನ್ನು ಓದಿ. ನೀವು ಒಂದು ವೇಳೆ ಉಚಿತವಾಗಿ ಏಷ್ಯಾಕಪ್ ವೀಕ್ಷಿಸಬೇಕು ಎಂದರೆ ಇರುವ ಸುಲಭ ದಾರಿ ಯಾವುದು ಗೊತ್ತೇ??
ಈ ಬಾರಿ ಏಷ್ಯಾ ಕಪ್ ಟಿ20 ಫಾರ್ಮ್ಯಾಟ್ ನಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಆಗಸ್ಟ್ 28ರಂದು ನಡೆಯಲಿರುವ ಪಂದ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ಪಾಕಿಸ್ತಾನದ ಎದುರು ಸೇಡನ್ನು ತೀರಿಸಿಕೊಳ್ಳುವ ಸುವರ್ಣವಕಾಶ ಕಾದು ಕುಳಿತಿದೆ. ಆದರೆ ಈ ಬಾರಿ ಏಷ್ಯಾ ಕಪ್ ನಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಎದುರಾಗುವ ಸಾಧ್ಯತೆ ಹೆಚ್ಚಾಗಿದೆ. ಯಾಕೆಂದರೆ ಮೊದಲ ಪಂದ್ಯದ ನಂತರ ಸೂಪರ್ 12 ಹಾಗೂ ಸೆಮಿ ಫೈನಲ್ ಅಥವಾ ಫೈನಲ್ ಹಂತಕ್ಕೆ ಇವೆರಡು ತಂಡಗಳು ಮತ್ತೆ ಮುಖಾಮುಖಿಯಾಗುವ ಸಾಧ್ಯತೆ ದಟ್ಟವಾಗಿದೆ. ಹಾಗಾಗಿ ಈ ಬಾರಿಯ ಏಷ್ಯಾ ಕಪ್ 2 ದೇಶಗಳ ಕ್ರಿಕೆಟ್ ಅಭಿಮಾನಿಗಳಿಗೆ ಸಾಕಷ್ಟು ವಿಶೇಷ ಕ್ರಿಕೆಟ್ ಅನುಭವವನ್ನು ನೀಡುವ ಸಾಧ್ಯತೆ ಹೆಚ್ಚಾಗಿದೆ. ಇದನ್ನು ಓದಿ. ಕೊನೆಗೂ ತನ್ನ ಕಳಪೆ ಫಾರ್ಮ್ ಬಗ್ಗೆ ತಾನೇ ಕಾರಣ ಬಿಚ್ಚಿಟ್ಟ ವಿರಾಟ್ ಕೊಹ್ಲಿ: ತಾನು ಹೀಗೇ ಬ್ಯಾಟಿಂಗ್ ಮಾಡಲು ಕಾರಣ ಏನಂತೆ ಗೊತ್ತೇ??
ಇತ್ತಂಡಗಳ ನಡುವಿನ ಕ್ರಿಕೆಟ್ ಸಮರದಲ್ಲಿ ಯಾರು ಗೆಲ್ಲಬಹುದು ಎಂಬ ಕುರಿತಂತೆ ಈಗಾಗಲೇ ಕ್ರಿಕೆಟ್ ಅಭಿಮಾನಿಗಳಲ್ಲಿ ಕ್ರಿಕೆಟ್ ಪಂಡಿತರಲ್ಲಿ ಹಾಗೂ ಮಾಜಿ ಕ್ರಿಕೆಟಿಗರಲ್ಲಿ ಚರ್ಚೆ ಹೆಚ್ಚಾಗಿದೆ. ಅದರಲ್ಲೂ ವಿಶೇಷವಾಗಿ ವಿಶ್ವ ಕ್ರಿಕೆಟ್ ಕಂಡಂತಹ ಶ್ರೇಷ್ಠ ಆಲ್ರೌಂಡರ್ಗಳಲ್ಲಿ ಒಬ್ಬರಾಗಿರುವ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಚಾಂಪಿಯನ್ ಆಟಗಾರ ಶೇನ್ ವಾಟ್ಸನ್ ರವರು ಇವರಿಬ್ಬರಲ್ಲಿ ಯಾರು ಗೆಲ್ಲಲಿದ್ದಾರೆ ಹಾಗೂ ಈ ಬಾರಿ ಏಷ್ಯಾ ಕಪ್ ಅನ್ನು ಯಾರು ಗೆಲ್ಲಲಿದ್ದಾರೆ ಎನ್ನುವ ಅಂದಾಜನ್ನು ಕೂಡ ಹೇಳಿದ್ದಾರೆ. ಹಾಗಿದ್ದರೆ ಈ ಬಗ್ಗೆ ಶೇನ್ ವಾಟ್ಸಪ್ ನೀಡಿರುವ ಹೇಳಿಕೆ ಏನೆಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಶೇನ್ ವಾಟ್ಸನ್ ಅವರು ಹೇಳುವ ಪ್ರಕಾರ ಈ ಬಾರಿ ಪಾಕಿಸ್ತಾನ ತಂಡ ಭಾರತೀಯ ಕ್ರಿಕೆಟ್ ತಂಡವನ್ನು ಏಷ್ಯಾ ಕಪ್ ನಲ್ಲಿ ಸೋಲಿಸುವ ಪ್ರಯತ್ನ ಮಾಡಬಹುದು ಆದರೆ ಈ ಬಾರಿ ಭಾರತೀಯ ಕ್ರಿಕೆಟ್ ತಂಡ ಸಾಕಷ್ಟು ಬಲಿಷ್ಠ ವಾಗಿದ್ದು ಕಪ್ ಗೆಲ್ಲುವ ಫೇವರೇಟ್ ಭಾರತೀಯ ಕ್ರಿಕೆಟ್ ತಂಡವೇ ಎಂಬುದಾಗಿ ಅವರು ಅಭಿಪ್ರಾಯಪಟ್ಟಿದ್ದಾರೆ. ಯಾವುದೇ ದೇಶದ ಪಿಚ್ ನಲ್ಲಿ ಅಥವಾ ಯಾವುದೇ ದೇಶದಲ್ಲಿ ಗೆಲ್ಲುವಂತಹ ಸಾಮರ್ಥ್ಯವನ್ನು ಭಾರತೀಯ ಕ್ರಿಕೆಟ್ ತಂಡ ಹೊಂದಿದೆ ಎಂಬುದಾಗಿ ಟೀಮ್ ಇಂಡಿಯಾದ ಪರವಾಗಿ ಆಸ್ಟ್ರೇಲಿಯ ಕ್ರಿಕೆಟಿಗ ಶೇನ್ ವಾಟ್ಸನ್ ಬ್ಯಾಟ್ ಬೀಸಿದ್ದಾರೆ. ಇದನ್ನು ಓದಿ. ಏಷ್ಯಾ ಕಪ್ ನಲ್ಲಿ ಪಾಕಿಸ್ತಾನ ವಿರುದ್ಧ ಹೈ ವೋಲ್ಟೇಜ್ ಪಂದ್ಯಕ್ಕೆ ಸಂಭಾವ್ಯ ಭಾರತ ತಂಡ 11 ಹೇಗಿದೆ ಗೊತ್ತೇ?? ಯಾರೆಲ್ಲ ಇದ್ದಾರೆ ಗೊತ್ತೇ??
ಒಟ್ಟಾರೆಯಾಗಿ ಶೇನ್ ವಾಟ್ಸನ್ ಅವರು ಆಗಸ್ಟ್ 28 ರಂದು ಪಾಕಿಸ್ತಾನ ಹಾಗೂ ಭಾರತೀಯ ಕ್ರಿಕೆಟ್ ತಂಡಗಳ ನಡುವಿನ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೋ ಅವರೇ ಈ ಬಾರಿ ಏಷ್ಯಾ ಕಪ್ ಅನ್ನು ಗೆಲ್ಲುವುದಕ್ಕೆ ಪ್ರಬಲ ಸ್ಪರ್ಧಿ ಎಂಬುದಾಗಿ ತಮ್ಮ ಸಂಪೂರ್ಣ ಅಭಿಪ್ರಾಯವನ್ನು ಮಂಡಿಸಿದ್ದಾರೆ. ಈಗಾಗಲೇ ಕಳೆದ ಟಿ20 ವಿಶ್ವಕಪ್ ನಲ್ಲಿ ಸೋತಿರುವ ಗುಂಗಿನಲ್ಲಿರುವ ಭಾರತೀಯ ಕ್ರಿಕೆಟ್ ತಂಡ ಈ ಬಾರಿ ಪಾಕ್ ತಂಡವನ್ನು ಸೋಲಿಸಲೇಬೇಕು ಎಂಬ ಗಟ್ಟಿ ನಿರ್ಧಾರದಲ್ಲಿದೆ. ಈಗಾಗಲೇ ಅರಬ್ಬರ ನೆಲಕ್ಕೆ ಕಾಲಿಟ್ಟು ಕಠಿಣವಾಗಿ ಟೀಮ್ ಇಂಡಿಯಾ ಪ್ರಾಕ್ಟೀಸ್ ಕೂಡ ಮಾಡುತ್ತಿದೆ.
ಪ್ರಾಕ್ಟೀಸ್ ನಲ್ಲಿ ವಿರಾಟ್ ಕೊಹ್ಲಿ ಅವರು ಕೂಡ ಅತ್ಯುತ್ತಮವಾಗಿ ಪ್ರದರ್ಶನ ನೀಡುತ್ತಿದ್ದು ಖಂಡಿತವಾಗಿ ಈ ಬಾರಿ ಏಷ್ಯಾ ಕಪ್ ನಲ್ಲಿ ತಮ್ಮ ಹಳೆಯಕ್ಕೆ ಮತ್ತೆ ಮರಳಿ ಬರಲಿದ್ದಾರೆ ಎನ್ನುವುದಾಗಿ ಕ್ರಿಕೆಟ್ ಪಂಡಿತರು ಭರವಸೆಯನ್ನು ಮೂಡಿಸಿದ್ದಾರೆ. ಹೀಗಾಗಿ ಭಾರತೀಯ ಕ್ರಿಕೆಟ್ ತಂಡ ಈ ಬಾರಿ ಏಷ್ಯಾ ಕಪ್ ಗೆದ್ದು t20 ವಿಶ್ವಕಪ್ ಗೆ ಉತ್ತಮ ತಯಾರಿಯನ್ನು ನಡೆಸಿಕೊಳ್ಳಲಿದೆ ಎಂಬುದಾಗಿ ಎಲ್ಲರೂ ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.