ಇದಪ್ಪ ವರಸೆ ಅಂದ್ರೆ: ಕೊನೆ ಕ್ಷಣದಲ್ಲಿ ದಿನೇಶ್ ಕಾರ್ತಿಕ್ ತಂಡಕ್ಕೆ ಬೇಡ ಅಂತೇ: ಬೇರೆ ಯಾರು ಆಡಬೇಕಂತೆ ಗೊತ್ತೇ?? ಮಾಜಿ ಆಟಗಾರ ಹೇಳಿದ್ದೇನು ಗೊತ್ತೇ??

ಇದಪ್ಪ ವರಸೆ ಅಂದ್ರೆ: ಕೊನೆ ಕ್ಷಣದಲ್ಲಿ ದಿನೇಶ್ ಕಾರ್ತಿಕ್ ತಂಡಕ್ಕೆ ಬೇಡ ಅಂತೇ: ಬೇರೆ ಯಾರು ಆಡಬೇಕಂತೆ ಗೊತ್ತೇ?? ಮಾಜಿ ಆಟಗಾರ ಹೇಳಿದ್ದೇನು ಗೊತ್ತೇ??

ಇಂದಿನಿಂದ ಯುಎಇ ಆತಿಥ್ಯದಲ್ಲಿ ಏಷ್ಯಾಕಪ್ ಪಂದ್ಯಗಳು ಶುರುವಾಗುತ್ತಿದೆ. ಆಗಸ್ಟ್ 27ರಂದು ಶುರುವಾಗಿ ಸೆಪ್ಟೆಂಬರ್ 11ರ ವರೆಗೂ ನಡೆಯಲಿದೆ. ಈ ಟೂರ್ನಿಯಲ್ಲಿ 6 ತಂಡಗಳು ಭಾಗವಹಿಸಲಿದೆ. ಎಲ್ಲರ ಮೆಚ್ಚಿನ ತಂಡ ಭಾರತ ಎಂದರೆ ತಪ್ಪಾಗುವುದಿಲ್ಲ. ನಮ್ಮ ಭಾರತ ತಂಡದ 15 ಪ್ಲೇಯರ್ ಗಳು ಈಗಾಗಲೇ ಯುಎಇ ನಲ್ಲಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ನಾಳೆ ನಡೆಯುವ ಭಾರತ ಪಾಕಿಸ್ತಾನ್ ವಿರುದ್ಧದ ಮ್ಯಾಚ್ ಭಾರತದ ಮೊದಲ ಮ್ಯಾಚ್ ಆಗಿರಲಿದೆ. ಪ್ಲೇಯಿಂಗ್ 11 ನಲ್ಲಿ ಯಾರೆಲ್ಲಾ ಇರಲಿದ್ದಾರೆ ಎನ್ನುವ ಚರ್ಚೆ ಈಗ ಶುರುವಾಗಿದ್ದು, ಇದರ ಬಗ್ಗೆ ಮಾಜಿ ಆಟಗಾರ ಸಬಾ ಕರೀಮ್ ಮಾತನಾಡಿದ್ದು, ದಿನೇಶ್ ಕಾರ್ತಿಕ್ ಅವರನ್ನು ಆಡಿಸುವುದು ಬೇಡ ಎಂದಿದ್ದಾರೆ..

ಸಬಾ ಕರೀಮ್ ಅವರು ಹೇಳಿರುವ ಪ್ರಕಾರ, ಒಂದು ತಂಡಕ್ಕೆ ವಿಕೆಟ್ ಕೀಪರ್ ಮತ್ತು ಫಿನಿಷರ್ ಆಗಿ ಒಬ್ಬರು ಇದ್ದರೆ ಸಾಕು, ರಿಷಬ್ ಪಂತ್ ಮತ್ತು ದಿನೇಶ್ ಕಾರ್ತಿಕ್ ಇಬ್ಬರು ಇಲ್ಲಿದ್ದಾರೆ. ಅವರಲ್ಲಿ ಒಬ್ಬರನ್ನು ಮಾತ್ರ ಆಯ್ಕೆ ಮಾಡಿದರೆ ಸಾಕು, ರಿಶಬ್ ಪಂತ್ ಅವರನ್ನು ಆಯ್ಕೆಮಾಡಿದರೆ ಒಳ್ಳೆಯದು, ರಿಷಬ್ ಪಂತ್ ಭಾರತ ತಂಡದ ಎಕ್ಸ್ ಫ್ಯಾಕ್ಟರ್ ಆಟಗಾರ, ಹಾಗೂ ಯುವ ಆಟಗಾರ ಏಷ್ಯಾಕಪ್ ಪಂದ್ಯಗಳಲ್ಲಿ ಒಳ್ಳೆಯ ಪ್ರದರ್ಶನ ಕೊಡುತ್ತಾರೆ ಎನ್ನುವ ನಕಬಿಕೆ ಇದೆ. ಅವರನ್ನು ಆಯ್ಕೆ ಮಾಡುವುದರಿಂದ ತಂಡಕ್ಕೆ ಒಳ್ಳೆಯದು. ದಿನೇಶ್ ಕಾರ್ತಿಕ್ ಅವರನ್ನು ಆಯ್ಕೆ ಮಾಡುವುದು ಬೇಡ. ತಂಡಕ್ಕೆ ಆರನೆಯ ಬೌಲರ್ ಆಗಿ ಹಾರ್ದಿಕ್ ಪಾಂಡ್ಯ ಇದ್ದಾರೆ, ಎಲ್ಲರನ್ನು ಸರಿಯಾಗಿ ಉಪಯೋಗಿಸಿಕೊಂಡರೆ ಒಳ್ಳೆಯದು ಎಂದು ಹೇಳಿದ್ದಾರೆ.

ಈ ಹಿಂದಿನ ಪಂದ್ಯಗಳಲ್ಲಿ ಕಾರ್ತಿಕ್ ಮತ್ತು ರಿಷಬ್ ಪಂತ್ ಒಟ್ಟಾಗಿ ಕಾಣಿಸಿಕೊಂಡಿದ್ದರು. ಭಾರತದಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಮ್ಯಾಚ್ ನಲ್ಲಿ ರಿಷಬ್ ಪಂತ್ ಮತ್ತು ದಿನೇಶ್ ಕಾರ್ತಿಕ್ ಇಬ್ಬರನ್ನು. ಆಯ್ಕೆ ಮಾಡಲಾಗಿತ್ತು, ರಿಷಬ್ ಅವರು ವಿಕೆಟ್ ಕೀಪರ್ ಸ್ಥಾನಕ್ಕೆ ಇದ್ದರೆ, ದಿನೇಶ್ ಕಾರ್ತಿಕ್ ಅವರಿಗೆ ಫಿನಿಷರ್ ಸ್ಥಾನ ನೀಡಲಾಗಿತ್ತು. ಇನ್ನು ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಸಹ ಈ ಇಬ್ಬರು ಬಲಿಷ್ಠ ಆಟಗಾರರು ಭಾರತ ತಂಡದಲ್ಲಿದ್ದರು. ಆದರೆ ಈಗ ದಿನೇಶ್ ಕಾರ್ತಿಕ್ ಅವರನ್ನು ಆಯ್ಕೆ ಮಾಡುವುದು ಬೇಡ ಎಂದು ಸಬಾ ಕರೀಮ್ ಅವರು ಹೇಳುತ್ತಿದ್ದು, ನಾಳಿನ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಅವರಿಗೆ ಪ್ಲೇಯಿಂಗ್ 11 ನಲ್ಲಿ ಇರುವ ಅವಕಾಶ ಸಿಗುತ್ತಾ ಅಥವಾ ಬೆಂಚ್ ಕಾಯುವ ಹಾಗೆ ಆಗುತ್ತಾ ಎಂದು ಕಾದು ನೋಡಬೇಕಿದೆ.