ಕಷ್ಟದಲ್ಲಿ ಇರುವ ಕೆಜಿಎಫ್ ಹರೀಶ್ ರೈ ರವರಿಗೆ ಕರೆ ಮಾಡಿ, ಕಷ್ಟ ಎಂದು ನನಗೆ ಯಾಕೆ ಹೇಳಿಲ್ಲ ಎಂದದ್ದು ಯಾರು ಗೊತ್ತೇ??

ಕಷ್ಟದಲ್ಲಿ ಇರುವ ಕೆಜಿಎಫ್ ಹರೀಶ್ ರೈ ರವರಿಗೆ ಕರೆ ಮಾಡಿ, ಕಷ್ಟ ಎಂದು ನನಗೆ ಯಾಕೆ ಹೇಳಿಲ್ಲ ಎಂದದ್ದು ಯಾರು ಗೊತ್ತೇ??

ನಟ ಹರೀಶ್ ರೈ ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಕಲಾವಿದ. ವಿಲ್ಲನ್ ಪಾತ್ರಗಳಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೆಜಿಎಫ್ ಚಾಪ್ಟರ್1 ಮತ್ತು ಚಾಪ್ಟರ್2 ಸಿನಿಮಾದಲ್ಲಿ ಹರೀಶ್ ರೈ ಅವರು ಚಾಚಾ ಪಾತ್ರದ ಮೂಲಕ ಬಹಳ ಫೇಮಸ್ ಆಗಿದ್ದಾರೆ. ಆದರೆ ಈಗ ಹರೀಶ್ ರೈ ಅವರು ಬಹಳ ಕಷ್ಟದಲ್ಲಿದ್ದಾರೆ. ಹರೀಶ್ ರೈ ಅವರು ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದು, ಸಹಾಯ ಕೋರಿ, ಜನರಲ್ಲಿ ಮನವಿ ಮಾಡಿದ್ದರು. ಅದರ ಕುರಿತಾಗಿ ಹರೀಶ್ ರೈ ಅವರು ಸಂದರ್ಶನ ಒಂದರಲ್ಲಿ ಮಾತನಾಡುವಾಗ ಚಂದನವನದ ದೊಡ್ಡ ಸ್ಟಾರ್ ಒಬ್ಬರು ತಮಗೆ ಕರೆಮಾಡಿ ಮಾತನಾಡಿರುವುಡ್ಲ್ ಬಗ್ಗೆ ಬಹಿರಂಗ ಪಡಿಸಿದ್ದಾರೆ.

ಕೆಜಿಎಫ್ ಸಿನಿಮಾಗಿಂತ ಮೊದಲು ಬೇರೆ ಭಾಷೆಗಳಲ್ಲಿ ಅವಕಾಶ ಸಿಗೋದು ಕಷ್ಟ ಆಗ್ತಿತ್ತು, ಕೆಜಿಎಫ್ ನಂತರ ನಾನು ಈ ಸಿನಿಮಾದಲ್ಲಿ ಆಕ್ಟ್ ಮಾಡಿದ್ದೀನಿ ಅಂದ್ರೆ ಅವರೇ ಅವಕಾಶ ಕೊಡ್ತಾರೆ, ಜೀವನ ಚೆನ್ನಾಗಿ ಹೋಗ್ತಾ ಇತ್ತು, ಅಂಥ ಸಮಯದಲ್ಲಿ ಹೀಗಾಯ್ತು. ಏನು ಮಾಡೋಕಾಗಲ್ಲ ಎಂದು ಹೇಳಿರುವ ಹರೀಶ್ ರೈ ಅವರು, ಕನ್ನಡದ ದೊಡ್ಡ ಸ್ಟಾರ್ ಒಬ್ಬರು ರಾತ್ರಿ 12ಗಂಟೆಗೆ ಫೋನ್ ಮಾಡಿ ಸಾರ್ ನೀವು ನನಗೆ ಯಾಕೆ ಹೇಳಿಲ್ಲ, ಒಂದು ಮಾತು ಹೇಳಬಹುದಿತ್ತು ಅಲ್ವಾ ಅಂದ್ರು. ಅವರ ಪರ್ಸನಲ್ ಫೋನ್ ನಂಬರ್ ಯಾರಿಗೂ ಕೊಡೋದಿಲ್ಲ ಅಂಥದ್ರಲ್ಲಿ ಆ ನಂಬರ್ ನನಗೆ ಕೊಟ್ಟಿದ್ರು, ನಾನು ಬರ್ತ್ ಡೇ ಗೆ ವಿಶ್ ಮಾಡಿದ್ದೆ, ಆದರೆ ಈ ವಿಷಯ ಹೇಳಿರಲಿಲ್ಲ. ಆಗ ಅವರು ನೀವು ನಮಗೆ ಸೀನಿಯರ್, ನಿಮ್ಮನ್ನೆಲ್ಲ ನೋಡಿ ನಾವು ಬೆಳೆದಿರೋದು..

ನಿಮಗೋಸ್ಕರ ಕೋಟಿ ಖರ್ಚಾದ್ರು ಸರಿ ನಾವು ನೋಡ್ಕೋತೀವಿ, ನೀವು ಚಿಂತೆ ಮಾಡಬೇಡಿ, ನಿಮ್ಮ ಕುಟುಂಬವನ್ನ ಕಣ್ಣಿನ ರೆಪ್ಪೆ ಹಾಗೆ ನೋಡಿಕೊಳ್ತೀನಿ. ಏನೇ ಇದ್ರು ನನಗೆ ಹೇಳಿ, ಎಂದು ಆ ಸ್ಟಾರ್ ನಟ ಹೇಳಿದ್ದು, ಬೇರೆ ಭಾಷೆ ಸಿನಿಮಾಗಳಲ್ಲಿ ಸಹ ಅವಕಾಶ ಕೊಡಿಸಲು ನಾನು ಸಹಾಯ ಮಾಡ್ತಿನಿ ಎಂದು ಕೂಡ ಅವರು ಹೇಳಿದ್ದಾರಂತೆ, ಆದರೆ ತಮ್ಮ ಹೆಸರನ್ನು ಎಲ್ಲಿಯೂ ಹೇಳಬಾರದು ಎಂದಿದ್ದಾರಂತೆ. ಮೊನ್ನೆ ಸಹ ಹರೀಶ್ ರೈ ಅವರಿಗೆ ಕರೆಮಾಡಿ ಮಾತನಾಡಿದ್ದು, ಹೆಸರನ್ನು ರಿವೀಲ್ ಮಾಡಬಾರದು ಎಂದಿದ್ದಾರಂತೆ. ಅಷ್ಟೇ ಅಲ್ಲದೆ, ಪ್ರಶಾಂತ್ ನೀಲ್ ಅವರು ಸಹ ಹರೀಶ್ ರೈ ಅವರಿಗೆ ಕರೆಮಾಡಿ, ಈ ವಿಷಯ ಹೇಳಬಹುದಿತ್ತು ಅಲ್ವಾ ಸರ್ ಎಂದು ಹೇಳಿ, ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರಂತೆ ಪ್ರಶಾಂತ್ ನೀಲ್. ಈ ವಿಷಯ ಹೇಳಿ ಭಾವುಕರಾಗಿದ್ದಾರೆ ಹರೀಶ್ ರಾಜ್.