ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಕೊನೆ ಕ್ಷಣದಲ್ಲಿ ಭಾರತಕ್ಕೆ ಕೈ ಕೊಟ್ಟ ದೀಪಕ್ ಚಾಹರ್: ಬದಲಿ ಆಟಗಾರನನ್ನು ಆಯ್ಕೆ ಮಾಡಿದ ಆಯ್ಕೆ ಸಮಿತಿ. ಆಯ್ಕೆಯಾದ ಖಡಕ್ ಬೌಲರ್ ಯಾರು ಗೊತ್ತೇ??

2,009

Get real time updates directly on you device, subscribe now.

ಈ ವೀಕೆಂಡ್ ನಲ್ಲಿ ನಡೆಯಲಿರುವ ಏಷ್ಯಾಕಪ್ ಪಂದ್ಯಗಳಿಗಾಗಿ ಎಲ್ಲಾ ಕ್ರಿಕೆಟ್ ಪ್ರಿಯರು ಕಾಯುತ್ತಿದ್ದಾರೆ. ಈ ಬಾರಿ ಭಾರತ ತಂಡವು ಬಲಿಷ್ಠ ತಂಡವನ್ನು ಕಟ್ಟಿ, ಏಷ್ಯಾಕಪ್ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಈಗಾಗಲೇ ಭಾರತ ತಂಡಕ್ಕೆ 15 ಆಟಗಾರರ ತಂಡವನ್ನು ಬಿಸಿಸಿಐ ಪ್ರಕಟಣೆ ಮಾಡಿದ್ದು, ಅವರಲ್ಲಿ ಬಹುತೇಕ ಎಲ್ಲರೂ ಸಹ ಯುಎಇ ಗೆ ತೆರಳಿ ಅಭ್ಯಾಸ ಮಾಡುತ್ತಿದ್ದಾರೆ. ಈಗಾಗಲೇ ನಮಗೆ ಗೊತ್ತಿರುವ ಪ್ರಕಾರ, ಭಾರತ ತಂಡಕ್ಕೆ ಮೂವರು ಆಟಗಾರರು ಮೀಸಲು ಆಟಗಾರರಾಗಿ ಇರುತ್ತಾರೆ..

ಪ್ಲೇಯಿಂಗ್ 11 ನಲ್ಲಿ ಇರುವ ಆಟಗಾರರು ಒಂದು ವೇಳೆ ಗಾಯದಿಂದ ಹಾಗೂ ಇನ್ನಿತರ ಕಾರಣಗಳಿಂದ ತಂಡದಿಂದ ಹೊರಬೀಳುವ ಹಾಗೆ ಆದರೆ, ಮೀಸಲು ಆಟಗಾರರನ್ನು ಬಳಸಿಕೊಳ್ಳುತ್ತಾರೆ. ಇದೀಗ ಭಾರತ ತಂಡದ ಪ್ರಮುಖ ಬೌಲರ್ ಜಸ್ಪ್ರೀತ್ ಬುಮ್ರ ಅವರು ಗಾಯದ ಕಾರಣದಿಂದ ಭಾರತ ತಂಡದಿಂದ ಹೊರಗುಳಿದಿದ್ದಾರೆ. ಅಷ್ಟೇ ಅಲ್ಲದೆ, ಮತ್ತೊಬ್ಬ ಪ್ರಮುಖ ಬೌಲರ್ ಹರ್ಷಲ್ ಪಟೇಲ್ ಸಹ ಏಷ್ಯಾಕಪ್ ಟೂರ್ನಿಗೆ ಲಭ್ಯವಿಲ್ಲ. ಈ ಸಮಯದಲ್ಲಿ ಮತ್ತೊಬ್ಬ ಆಟಗಾರ ಸಹ ಲಭ್ಯವಾಗದೆ ಇರುವ ಹಾಗೆ ಆಗಿದೆ.

ಮೀಸಲು ಆಟಗಾರನಾಗಿ ಆಯ್ಕೆಯಾಗಿದ್ದ, ದೀಪಕ್ ಚಹರ್ ಅವರು ಅಭ್ಯಾಸ ಮಾಡುವಾಗ, ಗಾಯಗೊಂಡಿರುವ ಕಾರಣ ಏಷ್ಯಾಕಪ್ ಪಂದ್ಯಗಳಿಗೆ ಇವರು ಲಭ್ಯವಿರುವುದಿಲ್ಲ. ಇವರ ಬದಲಾಗಿ ಕುಲದೀಪ್ ಸೇನ್ ಆಯ್ಕೆಯಾಗಿದ್ದಾರೆ. ಐಪಿಎಲ್ ನಲ್ಲಿ 7 ರಾಜಸ್ತಾನ್ ರಾಯಲ್ಸ್ ತಂಡದ ಪರವಾಗಿ 7 ಪಂದ್ಯಗಳನ್ನು ಆಡಿ, ಅವುಗಳಲ್ಲಿ 8 ವಿಕೆಟ್ ಪಡೆದಿದ್ದರು. ಇದೀಗ ಇವರು ಆಯ್ಕೆಯಾಗಿದ್ದಾರೆ. ಇನ್ನು ದೀಪಕ್ ಚಹರ್ ಅವರು, ಗಾಯದ ಸಮಸ್ಯೆಯಿಂದ ಐಪಿಎಲ್ ಪಂದ್ಯಗಳನ್ನು ಮಿಸ್ ಮಾಡಿಕೊಂಡಿದ್ದರು, ಇದೀಗ ಏಷ್ಯಾಕಪ್ ಪಂದ್ಯಗಳನ್ನು ಸಹ ಮಿಸ್ ಮಾಡಿಕೊಳ್ಳಲಿದ್ದಾರೆ.

Get real time updates directly on you device, subscribe now.