ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಕನ್ಯಾ ರಾಶಿಗೆ ಕಾಲಿಟ್ಟ ಬುಧ ಗ್ರಹ: ಮುಂದಿನ 60 ದಿನಗಳು ನಿಮ್ಮನ್ನು ಮುಟ್ಟಲು ಕೂಡ ಸಾಧ್ಯವಿಲ್ಲ. ಹಣ ಹುಡುಕಿಕೊಂಡು ಬರಲಿ. ಯಾವ್ಯಾವ ರಾಶಿಯವರಿಗೆ ಗೊತ್ತೇ??

70

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಬುದ್ದಿವಂತಿಕೆ ಹಾಗೂ ಮಾತಿನ ಗ್ರಹ ಆಗಿರುವ ಬುಧನು ಇದೇ ಆಗಸ್ಟ್ 21ರಂದು ತನ್ನ ರಾಶಿ ಪರಿವರ್ತನೆಯನ್ನು ಮಾಡಿದ್ದಾನೆ. ಸಿಂಹ ರಾಶಿಯನ್ನು ತೊರೆದು ಕನ್ಯಾರಾಶಿಗೆ ಪ್ರವೇಶ ಮಾಡಿರುವ ಬುಧ ಅಕ್ಟೋಬರ್ 25 ರ ತನಕ ಅಲ್ಲಿಯೇ ಇರಲಿದ್ದಾನೆ. ಈ ಬುಧಸಂಕ್ರಮಣ ಕಾಲದಲ್ಲಿ ಕೆಲವು ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ. ಹಾಗಿದ್ದರೆ ಆ ರಾಶಿಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಮಿಥುನ ರಾಶಿ; ಈ ಸಂದರ್ಭದಲ್ಲಿ ಮಿಥುನ ರಾಶಿಯವರ ಕುಟುಂಬದ ಜೀವನವು ಸುಗಮವಾಗಿ ಸಾಗುತ್ತದೆ. ತಮ್ಮ ವ್ಯಕ್ತಿತ್ವದ ಸಹಾಯದಿಂದಾಗಿ ತಾವು ಕೆಲಸ ಮಾಡುವ ಸ್ಥಳದಲ್ಲಿ ಸಹೋದ್ಯೋಗಿಗಳನ್ನು ಆಕರ್ಷಿಸುತ್ತಾರೆ. ಮಿಥುನ ರಾಶಿಯವರಿಗೆ ಹೊಸ ಕೆಲಸ ಮಾಡಲು ಪ್ರಶಸ್ತವಾದ ಸಮಯ. ವ್ಯಾಪಾರಿಗಳಿಗೂ ಕೂಡ ತಮ್ಮ ವ್ಯಾಪಾರದಲ್ಲಿ ಲಾಭ ಮಾಡಲು ಇದೊಂದು ಒಳ್ಳೆಯ ಸಮಯ.

ಕರ್ಕ ರಾಶಿ; ವ್ಯವಹಾರದಲ್ಲಿ ಲಾಭವನ್ನು ಪಡೆಯಲಿರುವ ಕರ್ಕ ರಾಶಿ ಅವರ ಎಲ್ಲಾ ಪ್ರಯತ್ನಗಳಿಗೆ ಅವರ ಸಹೋದರರ ಸಾಥ್ ಸಿಗಲಿದೆ. ನಟನೆ ಸೇರಿದಂತೆ ಕ್ರಿಯೇಟಿವ್ ಹಾಗೂ ಮನೋರಂಜನೆ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಅವಕಾಶಗಳು ಹುಡುಕಿಕೊಂಡು ಬರಲಿವೆ.

ಸಿಂಹ ರಾಶಿ; ಈ ಸಂದರ್ಭ ಸಿಂಹ ರಾಶಿ ಅವರಿಗೆ ಶುಭವಾಗಿದ್ದು ಪೂರ್ವಜರ ಆಸ್ತಿ ಹಲವಾರು ಸಮಯಗಳ ವ್ಯಾಜ್ಯದ ನಂತರ ಸಿಂಹ ರಾಶಿಯವರ ಕೈ ಸೇರಲಿದೆ. ಈ ಸಮಯದಲ್ಲಿ ಸಿಂಹ ರಾಶಿಯವರ ಪ್ರತಿಷ್ಠೆ ಹಾಗೂ ಗೌರವಗಳು ಕೂಡ ಸಮಾಜದಲ್ಲಿ ಹೆಚ್ಚಾಗಲಿದೆ.

ಕನ್ಯಾ ರಾಶಿ; ಬುಧ ಕನ್ಯಾ ರಾಶಿಗೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ ಕನ್ಯಾ ರಾಶಿಯವರ ಎಲ್ಲಾ ಸಮಸ್ಯೆಗಳು ದೂರವಾಗಿ ಆರೋಗ್ಯದಲ್ಲಿ ಕೂಡ ಸುಧಾರಣೆ ಕಂಡು ಬರಲಿದೆ. ಉದ್ಯೋಗ ವ್ಯಾಪಾರದಲ್ಲಿ ನಿರೀಕ್ಷಿತ ಗೆಲುವನ್ನು ಸಾಧಿಸಲಿರುವ ಇವರ ದಾಂಪತ್ಯ ಜೀವನ ಕೂಡ ಯಾವುದೇ ಸಮಸ್ಯೆಗಳಿಲ್ಲದೆ ಸುಖವಾಗಿರುತ್ತದೆ. ಇವುಗಳಲ್ಲಿ ನಿಮ್ಮ ರಾಶಿ ಕೂಡ ಇದ್ದರು ತಪ್ಪದೆ ಕಾಮೆಂಟ್ ಮೂಲಕ ನಮ್ಮೊಂದಿಗೆ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ.

Get real time updates directly on you device, subscribe now.