ಕಳಪೆ ಫಾರ್ಮ್, ಪದೇ ಪದೇ ಇಂಜುರಿ ಮಾಡಿಕೊಳ್ಳುತ್ತಿರುವ ರೋಹಿತ್ ಗೆ ಶಾಕ್?? ಹಲವಾರು ನಾಯಕರ ಬದಲಾವಣೆ ಕುರಿತು ಮೌನ ಮುರಿದ ಗಂಗೂಲಿ. ಹೇಳಿದ್ದೇನು ಗೊತ್ತೇ??

ಕಳಪೆ ಫಾರ್ಮ್, ಪದೇ ಪದೇ ಇಂಜುರಿ ಮಾಡಿಕೊಳ್ಳುತ್ತಿರುವ ರೋಹಿತ್ ಗೆ ಶಾಕ್?? ಹಲವಾರು ನಾಯಕರ ಬದಲಾವಣೆ ಕುರಿತು ಮೌನ ಮುರಿದ ಗಂಗೂಲಿ. ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಳೆದ ಟಿ 20 ವಿಶ್ವಕಪ್ ಮುಕ್ತಾಯ ಆದ ನಂತರ ವಿರಾಟ್ ಕೊಹ್ಲಿ ಅವರು ನಾಯಕನ ಸ್ಥಾನದಿಂದ ಕೆಳಗಿಳಿದು ನಂತರ ರೋಹಿತ್ ಶರ್ಮ ರವರು ಭಾರತೀಯ ಕ್ರಿಕೆಟ್ ತಂಡದ ಪೂರ್ಣಾವಧಿ ನಾಯಕರಾಗಿ ಜವಾಬ್ದಾರಿಯನ್ನು ಕೈಗೆತ್ತಿಕೊಂಡಿದ್ದರು. ಈ ಸಂದರ್ಭದಲ್ಲಿ ಆರಂಭಿಕ ಕೆಲವು ಸರಣಿಗಳಲ್ಲಿ ರೋಹಿತ್ ಶರ್ಮ ರವರು ಇಂಜುರಿಯ ಕಾರಣದಿಂದಾಗಿ ತಂಡದಿಂದ ಹೊರಗುಳಿಯಬೇಕಾಗಿ ಬಂತು ಇದೇ ಕಾರಣಕ್ಕಾಗಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಕೆಎಲ್ ರಾಹುಲ್ ರವರು ನಾಯಕನಾಗಿ ಕಾಣಿಸಿಕೊಂಡಿದ್ದರು.

ಇದಾದ ನಂತರ ಭಾರತ ದೇಶದಲ್ಲಿ ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ರೋಹಿತ್ ಶರ್ಮ ರವರು ನಾಯಕನಾಗಿ ಅಲಭ್ಯರಾಗಿ ಇದ್ದ ಕಾರಣದಿಂದಾಗಿ ಕೆ ಎಲ್ ರಾಹುಲ್ ರವರು ನಾಯಕನಾಗಿ ತಂಡದ ಜವಾಬ್ದಾರಿಯನ್ನು ಕೈಗೆತ್ತಿಕೊಳ್ಳಬೇಕಾಗಿತ್ತು ಆದರೆ ಅನಾರೋಗ್ಯದ ಹಿನ್ನೆಲೆಯಲ್ಲಿ ತಂಡದಿಂದ ಅವರು ಕೂಡ ಹೊರಹೋಗಿ ರಿಷಬ್ ಪಂತ್ ರವರು ಈ ಸರಣಿಯಲ್ಲಿ ಭಾರತೀಯ ಕ್ರಿಕೆಟ್ ತಂಡದ ಕ್ಯಾಪ್ಟನ್ ಆಗಿ ಕಾಣಿಸಿಕೊಳ್ಳುತ್ತಾರೆ. ಇನ್ನು ಇತ್ತೀಚಿಗಷ್ಟೇ ಐರ್ಲೆಂಡ್ ಬಿರುದುದ್ದ ಸರಣಿಗೆ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಕೆಲವೊಂದು ಪಂದ್ಯಗಳಲ್ಲಿ ತಂಡದ ನಾಯಕನಾಗಿ ಕೂಡ ಕಾಣಿಸಿಕೊಂಡಿದ್ದರು.

ಶ್ರೀಲಂಕಾ ಸರಣಿ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯಾವಳಿಯಲ್ಲಿ ಕೂಡ ಭಾರತೀಯ ಕ್ರಿಕೆಟ್ ತಂಡದ ನಾಯಕನಾಗಿ ಶಿಖರ್ ಧವನ್ ಕಾಣಿಸಿಕೊಂಡಿದ್ದರು. ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಕೂಡ ಇಂಡಿಯಾ ತಂಡದ ಕ್ಯಾಪ್ಟನ್ ಆಗಿ ಜಸ್ಪ್ರೀತ್ ಬುಮ್ರಾ ಕಾಣಿಸಿಕೊಂಡಿದ್ದಾರೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ರೋಹಿತ್ ಶರ್ಮಾ ಅವರು ಟೀಮ್ ಇಂಡಿಯಾದ ಪೂರ್ಣಾವಧಿ ನಾಯಕನಾಗಿ ಜವಾಬ್ದಾರಿಯನ್ನು ತನ್ನ ಹೆಗಲಿಗೆ ಹಾಕಿಕೊಂಡ ಮೇಲೆ ಹಲವಾರು ನಾಯಕರ ಬದಲಾವಣೆ ಭಾರತೀಯ ಕ್ರಿಕೆಟ್ ತಂಡದಲ್ಲಿ ಕಂಡು ಬಂದಿದೆ. ಒಟ್ಟಾರೆಯಾಗಿ ಲೆಕ್ಕ ಹಾಕಿ ಹೇಳುವುದಾದರೆ ರೋಹಿತ್ ಶರ್ಮ ಕ್ಯಾಪ್ಟನ್ ಆದ ಮೇಲೆ ಒಟ್ಟು ಎಂಟು ಬಾರಿ ನಾಯಕತ್ವದ ಬದಲಾವಣೆ ಕಂಡು ಬಂದಿದೆ. ತಂಡದ ಮಾಜಿ ನಾಯಕ ಹಾಗೂ ಹಾಲಿ ಬಿಸಿಸಿಐ ಅಧ್ಯಕ್ಷ ಆಗಿರುವ ಸೌರವ್ ಗಂಗೂಲಿ ಅವರು ಇದುವರೆಗೂ ಇದರ ಕುರಿತಂತೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ ಆದರೆ ಈಗ ಮೊದಲ ಬಾರಿಗೆ ಇದರ ಕುರಿತಂತೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಸಾಲು ಸಾಲು ಪಂದ್ಯಗಳಲ್ಲಿ ಆಡುವ ಮೂಲಕ ರೋಹಿತ್ ಶರ್ಮ ಅವರು ಆಗಾಗ ಇಂಜುರಿಯಿಂದಾಗಿ ತಣ್ಣದಿಂದ ಹೊರ ಹೋಗಿರುವುದು ಈಗಾಗಲೇ ನಾವು ಗಮನಿಸಿದ್ದೇವೆ ಈ ಸಂದರ್ಭದಲ್ಲಿ ತಂಡಕ್ಕೆ ಹೊಸ ಹೊಸ ಆಟಗಾರರ ಆಗಮನ ಹಾಗೂ ಹೊಸ ನಾಯಕರ ಉಗಮ ಕೂಡ ಆಗಿದೆ. ಈಗಾಗಲೇ ಭಾರತೀಯ ಕ್ರಿಕೆಟ್ ತಂಡದಲ್ಲಿ 30 ಆಟಗಾರರ ಲಭ್ಯತೆ ಇದ್ದು ಹೊಸ ಆಟಗಾರರನ್ನು ಇಟ್ಟುಕೊಂಡು ಹೊಸ ನಾಯಕರು ಕೂಡ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಂತಹ ಕ್ರಿಕೆಟ್ ದೈತ್ಯರ ಎದುರು ತಂಡ ಗೆಲುವು ಸಾಧಿಸಿದೆ ಇದು ನಿಜಕ್ಕೂ ಕೂಡ ಮೆಚ್ಚುವ ವಿಚಾರ. ಸೌರ ಗಂಗೂಲಿ ಅವರ ಪ್ರಕಾರ ಹೊಸ ನಾಯಕರ ಉಗಮ ಆದಾಗಲೆಲ್ಲ ತಂಡಕ್ಕೆ ಲಾಭವೇ ಆಗಿದೆ ಹೊರತು ನಷ್ಟವಾಗಿಲ್ಲ ಎಂಬುದಾದ ಅರ್ಥದಲ್ಲಿ ಹೇಳಿದ್ದಾರೆ.

2021ರ ಜುಲೈ ತಿಂಗಳಿನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಶಿಖರ್ ಧವನ್ ನಾಯಕನಾಗಿ ಕಾಣಿಸಿಕೊಂಡಿದ್ದರು. 2021ರ ಆಗಸ್ಟ್ ತಿಂಗಳಿನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಅದೇ ವರ್ಷ ನವೆಂಬರ್ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ರೋಹಿತ್ ಶರ್ಮ ಅದೇ ತಿಂಗಳಿನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಗೆ ಅಜಿಂಕ್ಯಾ ರಹಾನೆ ಇದೇ ವರ್ಷದ ಆರಂಭದ ಜನವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಯಲ್ಲಿ ಕೆಎಲ್ ರಾಹುಲ್ ರವರು ಜೀವನದಲ್ಲಿ ಭಾರತದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ರಿಷಬ್ ಪಂತ್ ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ರವರು ನಾಯಕನಾಗಿ ಕಾಣಿಸಿಕೊಂಡಿದ್ದರು. ಒಟ್ಟಾರೆಯಾಗಿ ಇಷ್ಟೊಂದು ನಾಯಕತ್ವದ ಬದಲಾವಣೆ ಇತ್ತೀಚಿನ ವರ್ಷಗಳಲ್ಲಿ ಕಂಡು ಬಂದಿದೆ.

ಸೌರವ್ ಗಂಗೂಲಿ ಅವರು ರೋಹಿತ್ ಶರ್ಮ ನಾಯಕನಾಗಿ ಆಯ್ಕೆಯಾದ ಮೇಲೆ ತಂಡದಿಂದ ಹೊರಗೆ ಹೋಗಿ ಬೇರೆ ನಾಯಕ ಬಂದಾಗಲೂ ಕೂಡ ಭಾರತೀಯ ಕ್ರಿಕೆಟ್ ತಂಡ ಲಾಭವನ್ನು ಗಳಿಸಿದೆ ಎಂದು ಹೇಳಿದ್ದಾರೆ. ಆದರೆ ರೋಹಿತ್ ಶರ್ಮ ನಾಯಕನಾಗಿ ಭಾರತೀಯ ತಂಡಕ್ಕೆ ಕಾಲಿಟ್ಟ ನಂತರ ಭಾರತೀಯ ಕ್ರಿಕೆಟ್ ತಂಡ ಆಡಿರುವ ಎಲ್ಲಾ ಸರಣಿಗಳನ್ನು ಕೂಡ ಸೋಲಿಲ್ಲದ ಸರದಾರರಂತೆ ಗೆದ್ದು ಬೀಗಿದೆ ಎಂಬುದು ಕೂಡ ನಾವು ಇಲ್ಲಿ ಗಮನಿಸಬೇಕಾಗುತ್ತದೆ. ರೋಹಿತ್ ಶರ್ಮಾ ಅವರ ನಾಯಕತ್ವದ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಮೂಲಕ ಹಂಚಿಕೊಳ್ಳಿ.