ಖಾಯಂ ಸ್ಥಾನಕ್ಕೆ ಹೋರಾಡುತ್ತಿರುವ ಮೂವರು ನೇರವಾಗಿ ಟಿ20 ವಿಶ್ವಕಪ್ ಗೆ ಆಯ್ಕೆಯಾಗುತ್ತಾರೆ ಎಂದ ಮೊಹಮ್ಮದ್ ಕೈಫ್. ಆಯ್ಕೆ ಮಾಡಿದ ಮೂವರು ಯುವ ಆಟಗಾರರು ಯಾರ್ಯಾರು ಗೊತ್ತೇ??

ಖಾಯಂ ಸ್ಥಾನಕ್ಕೆ ಹೋರಾಡುತ್ತಿರುವ ಮೂವರು ನೇರವಾಗಿ ಟಿ20 ವಿಶ್ವಕಪ್ ಗೆ ಆಯ್ಕೆಯಾಗುತ್ತಾರೆ ಎಂದ ಮೊಹಮ್ಮದ್ ಕೈಫ್. ಆಯ್ಕೆ ಮಾಡಿದ ಮೂವರು ಯುವ ಆಟಗಾರರು ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಸದ್ಯಕ್ಕೆ ಭಾರತೀಯ ಕ್ರಿಕೆಟ್ ತಂಡ ಎರಡು ಪ್ರಮುಖ ಐಸಿಸಿ ಟೂರ್ನಮೆಂಟ್ ಗಳಲ್ಲಿ ಕಪ್ ಅನ್ನು ಗೆಲ್ಲಲೇ ಬೇಕು ಎನ್ನುವ ಕಾರಣಕ್ಕಾಗಿ ಸಾಕಷ್ಟು ಪ್ರಯೋಗಾತ್ಮಕ ಪ್ರಯತ್ನಗಳನ್ನು ಈಗಾಗಲೇ ಪ್ರಾರಂಭಿಸಿದ್ದು ಏನಾದರೂ ಮಾಡಿ ಇವೆರಡು ಪ್ರಮುಖ ಕಪ್ಗಳನ್ನು ಗೆಲ್ಲುವ ಮೂಲಕ ವಿಶ್ವ ಕ್ರಿಕೆಟ್ ನಲ್ಲಿ ತನ್ನ ಪ್ರಾಬಲ್ಯವನ್ನು ಮತ್ತೊಮ್ಮೆ ಸಾಬೀತುಪಡಿಸುವ ಹಪಹಪಿಕೆಯಲ್ಲಿದೆ. ಇದೇ ಆಗಸ್ಟ್ 27ರಿಂದ ಪ್ರಾರಂಭವಾಗಲಿರುವ ಏಷ್ಯಾ ಕಪ್ ಟೂರ್ನಮೆಂಟ್ ಗೆ ಈಗಾಗಲೇ ಬಿಸಿಸಿಐ ಅಧಿಕೃತವಾಗಿ ತನ್ನ ತಂಡವನ್ನು ಘೋಷಿಸಿದೆ.

ಇನ್ನು ಜಿಂಬಾಬ್ವೆ ಸರಣಿ ಕೂಡ ಇದೀಗ ಮುಗಿದಿದ್ದು ಇಲ್ಲಿ ಉತ್ತಮ ಪ್ರದರ್ಶನವನ್ನು ನೀಡುರುವ ಆಟಗಾರರನ್ನು ಕೂಡ ಮುಂದಿನ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಿನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ತಂಡದಲ್ಲಿ ಆಯ್ಕೆ ಮಾಡುವ ಸಾಧ್ಯತೆಗಳು ಕೂಡ ಹೆಚ್ಚಾಗಿವೆ. ಏಷ್ಯಾಕಪ್ ನಲ್ಲಿ ಕೂಡ ಅತ್ಯುತ್ತಮ ಪ್ರದರ್ಶನವನ್ನು ನೀಡಲಿರುವ ಆಟಗಾರರನ್ನು ಆಯ್ಕೆ ಮಾಡಿ ಟಿ20 ವಿಶ್ವಕಪ್ ತಂಡದಲ್ಲಿ ಆಯ್ಕೆ ಮಾಡಬಹುದು ಎಂಬ ಸುದ್ದಿಗಳು ಕೂಡ ಬಿಸಿಸಿಐ ಒಳ ಮೂಲಗಳಿಂದ ತಿಳಿದು ಬಂದಿದೆ. ಹೀಗಾಗಿ ಈ ಬಾರಿ ಟಿ ಟ್ವೆಂಟಿ ವಿಶ್ವಕಪ್ ತಂಡಕ್ಕೆ ಯಾರೆಲ್ಲಾ ಆಯ್ಕೆಯಾಗಲಿದ್ದಾರೆ ಎನ್ನುವುದರ ಕುರಿತಂತೆ ಇನ್ನೂ ಕೂಡ ಚರ್ಚೆಗಳು ಹಾಗೂ ಕುತೂಹಲ ಕ್ರಿಕೆಟ್ ಪಂಡಿತರಲ್ಲಿ ಹಾಗೂ ಕ್ರಿಕೆಟ್ ಅಭಿಮಾನಿಗಳಲ್ಲಿ ಮನೆ ಮಾಡಿದೆ.

ಇನ್ನು ಭಾರತೀಯ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಆಗಿರುವ ಮೊಹಮ್ಮದ್ ಕೈಫ್ ರವರು ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಿನಲ್ಲಿ ನಡೆಯಲಿರುವ ಈ ವರ್ಷದ ಟಿ20 ವಿಶ್ವಕಪ್ ನಲ್ಲಿ ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಈ ಮೂರು ಕ್ರಿಕೆಟಿಗರು ಮಾತ್ರ ಖಂಡಿತವಾಗಿ ತಂಡದಲ್ಲಿ ಆಯ್ಕೆ ಆಗಿಯೇ ಆಗುತ್ತಾರೆ ಎಂಬುದಾಗಿ ಭರವಸೆಯ ಭವಿಷ್ಯವನ್ನು ನುಡಿದಿದ್ದಾರೆ. ಹಾಗಿದ್ದರೆ ಮೊಹಮ್ಮದ್ ಕೈಫ್ ರವರು ಹೆಸರಿಸಿರುವ ಆ ಮೂರು ಆಟಗಾರರು ಯಾರು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ದೀಪಕ್ ಚಹಾರ್; ಆಲ್ ರೌಂಡರ್ ಆಟಗಾರನಾಗಿ ಕಾಣಿಸಿಕೊಂಡಿರುವ ದೀಪಕ್ ಚಹಾರ್ ಈಗಾಗಲೇ ಕೆಲವು ಸರಣಿಗಳಲ್ಲಿ ತಮ್ಮ ಮೌಲ್ಯವನ್ನು ಸಾಬೀತಪಡಿಸಿರುವ ಆಟಗಾರನಾಗಿದ್ದು ಮುಂಬರುವ ಜಿಂಬಾಬ್ವೆ ಸರಣಿ ಅವರಿಗೆ ಪ್ರಮುಖವಾಗಿದೆ. ಏಷ್ಯಾಕಪ್ ನಲ್ಲಿ ಸ್ಟ್ಯಾಂಡ್ ಬೈ ಆಟಗಾರನಾಗಿರುವ ಇವರು ಮುಂದಿನ ಟಿ20 ವಿಶ್ವಕಪ್ ನಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ಉತ್ತಮ ಮೌಲ್ಯವನ್ನು ಒದಗಿಸಿಕೊಡಬಲ್ಲಂತಹ ಉತ್ತಮ ಆಟಗಾರನಾಗಲಿದ್ದಾರೆ ಇವರು ಟೀಮ್ ಇಂಡಿಯಾದ ದೊಡ್ಡ ಆಸ್ತಿಯಾಗಿ ಕೂಡ ಮುಂದಿನ ದಿನಗಳಲ್ಲಿ ಕಾಣಿಸಿಕೊಳ್ಳಬಹುದು ಎಂಬುದಾಗಿ ಕೈಫ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ದೀಪಕ್ ಹೂಡ; ಇತ್ತೀಚಿನ ದಿನಗಳಲ್ಲಿ ಭಾರತೀಯ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿರುವ ದೀಪಕ್ ಅತ್ಯುತ್ತಮವಾಗಿ ಬ್ಯಾಟಿಂಗ್ ಪ್ರದರ್ಶನವನ್ನು ನೀಡುತ್ತಿದ್ದಾರೆ. ಅಗ್ರ ಹಾಗೂ ಮಾಧ್ಯಮ ಕ್ರಮ ಅಂಕದ ಬ್ಯಾಟಿಂಗ್ನಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿರುವ ದೀಪಕ್ ಸ್ಪಿನ್ ಬೌಲಿಂಗ್ ಅನ್ನು ಕೂಡ ಮಾಡುತ್ತಾರೆ. ಯಾವುದೇ ಕ್ರಮಾಂಕದಲ್ಲಿ ಟೀಮ್ ಇಂಡಿಯಾ ಒಬ್ಬ ಬಲಾಡ್ಯ ಬ್ಯಾಟ್ಸ್ಮನ್ ಅನ್ನು ಹುಡುಕುತ್ತಿದೆ ಎಂದಾದರೆ ದೀಪಕ್ ಹೂಡ ಅತ್ಯುತ್ತಮ ಆಯ್ಕೆ ಆಗಿರಲಿದ್ದಾರೆ ಎಂಬುದಾಗಿ ಮಹಮ್ಮದ್ ಕೈಫ್ ತಮ್ಮ ಅಭಿಪ್ರಾಯವನ್ನು ಬಲವಾಗಿ ಪ್ರತಿಪಾದಿಸಿದ್ದಾರೆ. ಕೈಫ್ ಹೇಳುವಂತೆ ಇತ್ತೀಚಿನ ದಿನಗಳಲ್ಲಿ ದೀಪಕ್ ಹೂಡ ವಿದೇಶಿ ಸರಣಿಗಳಲ್ಲಿ ಅತ್ಯುತ್ತಮವಾಗಿ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿ ತಂಡ ನಂಬುವಂತಹ ಒಬ್ಬ ನಂಬಿಗಸ್ತ ಬ್ಯಾಟ್ಸ್ಮನ್ ಆಗಿ ಕಾಣಿಸಿಕೊಂಡಿರುವುದು ಕೂಡ ನಿಜವಾಗಿದೆ.

ಕುಲದೀಪ್ ಯಾದವ್; ಎಡಗೈ ಚೈನಾಮನ್ ಸ್ಪಿನ್ನರ್ ಆಗಿರುವ ಕುಲದೀಪ್ ಯಾದವ್ ರವರು ಟಿ ಟ್ವೆಂಟಿ ವಿಶ್ವಕಪ್ ತಂಡಕ್ಕೆ ಪುನರಾಗಮನ ಮಾಡಲಿದ್ದಾರೆ ಎಂಬುದಾಗಿ ಕೈಫ್ ನಂಬಿದ್ದಾರೆ. ಇನ್ಜುರಿಯ ಕಾರಣದಿಂದಾಗಿ ಹಲವಾರು ಕ್ರಿಕೆಟ್ ಪಂದ್ಯಗಳನ್ನು ಈ ವರ್ಷದಲ್ಲಿ ಆಡಲು ಸಾಧ್ಯವಾಗದಿದ್ದರೂ ಕೂಡ ಆಡಿರುವ ಪಂದ್ಯಗಳಲ್ಲಿ ಅತ್ಯದ್ಭುತ ಎಕಾನಮಿಯಲ್ಲಿ ಬೌಲಿಂಗ್ ಮಾಡಿದ್ದಾರೆ ಎಂಬುದಾಗಿ ಕೈಫ್ ಕುಲದೀಪ್ ಯಾದವ್ ರವರನ್ನು ವಿಶ್ವಕಪ್ ತಂಡದಲ್ಲಿ ನೋಡಲು ಬಯಸುತ್ತಾರೆ. ಅಕ್ಷರ ಪಟೇಲ್ ಅವರಂತಹ ಆಯ್ಕೆ ತಂಡದಲ್ಲಿದ್ದರು ಕೂಡ ಕುಲದೀಪ್ ಯಾದವ್ ಬಲವಾಗಿ ಕಂಬ್ಯಾಕ್ ಮಾಡುವ ಮೂಲಕ ತಮ್ಮ ಸ್ಥಾನವನ್ನು ಸಾಬೀತುಪಡಿಸಿಕೊಳ್ಳಲಿದ್ದಾರೆ ಎಂಬುದಾಗಿ ಕೈಫ್ ಅಭಿಪ್ರಾಯಪಟ್ಟಿದ್ದಾರೆ.

ಮೊಹಮ್ಮದ್ ಕೈಫ್ ರವರು ಹೇಳಿರುವ ಹಾಗೆ ದೀಪಕ್ ಹೂಡ ಕುಲದೀಪ್ ಯಾದವ್ ಹಾಗೂ ದೀಪಕ್ ಚಹಾರ್ ರವರು ಟಿ ಟ್ವೆಂಟಿ ವಿಶ್ವಕಪ್ ತಂಡಕ್ಕೆ ಸ್ಥಾನ ಪಡೆಯಲಿದ್ದಾರೆಯೇ? ಇದರ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಮುಕ್ತವಾಗಿ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.