ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಮೋದಿ ನೀಡಿದ್ದ ಕೇವಲ 11 ರೂಪಾಯಿ ಅರ್ಧ ಗಂಟೆಯಲ್ಲಿ ತಂಗಿಯ ಬಳಿ 7.5 ಲಕ್ಷ ರೂಪಾಯಿ ಆಗಿತ್ತು. ಅದು ಹೇಗೆ ಗೊತ್ತೇ??

149

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಚಹಾ ಮಾರುವ ವ್ಯಕ್ತಿಯಿಂದ ನಮ್ಮ ದೇಶದ ಪ್ರಧಾನಿ ಆಗಿರುವ ನರೇಂದ್ರ ಮೋದಿ ಅವರ ಕುರಿತಂತೆ ಒಂದಿಲ್ಲೊಂದು ದಿನ ತರಹೇವಾರಿ ಕಥೆಗಳು ಪ್ರಚಲಿತದಲ್ಲಿ ಬರುತ್ತಲೇ ಇರುತ್ತವೆ. ಅವುಗಳಲ್ಲಿ ಇಂದು ಒಂದು ರೋಚಕತೆಯ ಕುರಿತಂತೆ ನಿಮಗೆ ವಿವರಿಸಲು ಹೊರಟಿದ್ದೇವೆ. ಅಂದು ನರೇಂದ್ರ ಮೋದಿ ಅವರು ಒಬ್ಬರಿಗೆ ಮಾಡಿದ ಸಹಾಯವನ್ನು ಅವರು ನೆನೆಸಿಕೊಂಡಿದ್ದು ಕೇಳುವ ಪ್ರತಿಯೊಬ್ಬರಿಗೂ ಕೂಡ ಅಚ್ಚರಿ ಮೂಡಿಸುವಂತಹ ಘಟನೆ ಇದಾಗಿದೆ ಎಂದರು ತಪ್ಪಾಗಲಾರದು.

ಗುರು ಗ್ರಾಮದಲ್ಲಿ ಲೋಕಸಭಾ ಅಭ್ಯರ್ಥಿಗಾಗಿ ಬಿಜೆಪಿ ಹುಡುಕಾಟ ನಡೆಸಿದ ಸಂದರ್ಭದಲ್ಲಿ ಕಾರ್ಗಿಲ್ ಸಮರದಲ್ಲಿ ಹುತಾತ್ಮ ರಾಗಿರುವ ಯೋಧರೊಬ್ಬರ ಪತ್ನಿಯಾಗಿರುವ ಡಾ ಸುಧಾ ಯಾದವ್ ಅವರನ್ನು ಆಯ್ಕೆ ಮಾಡಿತ್ತು. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಚುನಾವಣೆ ಎಂದ ಮೇಲೆ ಖರ್ಚು ವೆಚ್ಚಗಳನ್ನು ನೋಡಿಕೊಳ್ಳಲೇಬೇಕಾಗುತ್ತದೆ. ಆದರೆ ಸುಧಾ ಯಾದವ್ ಅವರಿಗೆ ಯಾವುದೇ ಅಥವಾ ಹಣಬಲ ಇರಲಿಲ್ಲ. ಆ ಸಂದರ್ಭದಲ್ಲಿ ನರೇಂದ್ರ ಮೋದಿ ಅವರು ಗುಜರಾತ್ ನ ಮುಖ್ಯಮಂತ್ರಿ ಕೂಡ ಆಗಿರಲಿಲ್ಲ. ಆ ಸಂದರ್ಭದಲ್ಲಿ ನರೇಂದ್ರ ಮೋದಿ ಅವರು ಮಾಡಿದ ಕಾರ್ಯವನ್ನು ಇಂದಿಗೂ ಕೂಡ ಸುಧಾ ಯಾದವ್ ನೆನಪಿಸಿಕೊಳ್ಳುತ್ತಾರೆ.

ಆ ಸಂದರ್ಭದಲ್ಲಿ ಕೇವಲ ಬಿಜೆಪಿ ಪಕ್ಷದ ಪದಾಧಿಕಾರಿಯಾಗಿದ್ದ ನರೇಂದ್ರ ಮೋದಿ ಅವರ ಬಳಿ ಖರ್ಚಿಗೆಂದು ಹಣ ಇರುತ್ತಿರಲಿಲ್ಲ ಅವರ ಎಲ್ಲಾ ಖರ್ಚುಗಳನ್ನು ಪಕ್ಷವೇ ನೋಡಿಕೊಳ್ಳುತ್ತಿತ್ತು. ಹೀಗಾಗಿ ತನ್ನ ತಾಯಿ ನೀಡಿದ 11 ರೂಪಾಯಿಗಳನ್ನು ಸುಧಾ ಯಾದವ್ ಅವರಿಗೆ ನೀಡುವ ಮೂಲಕ ಇದನ್ನು ಒಳ್ಳೆಯ ಕಾರ್ಯಕ್ಕೆ ಬಳಸು ಎಂದು ಹೇಳಿ ಶುಭ ಹಾರೈಸಿ, ಸ್ವಂತ ತಂಗಿ ಎಂಬುದಾಗಿ ಕರೆದಿದ್ದರು. ಇದಾದ ಕೇವಲ 30 ನಿಮಿಷಗಳ ಒಳಗೆ ಬರೋಬ್ಬರಿ 7.5 ಲಕ್ಷ ರೂಪಾಯಿ ಆಗಿ ಬೆಳೆಯಿತು. ಇದು ನರೇಂದ್ರ ಮೋದಿ ಅವರ ಪವರ್ ಆಗಿತ್ತು ಎಂಬುದನ್ನು ಇಂದು ಸ್ಮರಿಸಿಕೊಳ್ಳುತ್ತಾರೆ.

Get real time updates directly on you device, subscribe now.