ನೇರವಾಗಿ ಚಾಂಪಿಯನ್ ತಂಡವನ್ನು ಸೇರಲು ಮುಂದಾದ ಮೊಹಮದ್ ಸಿರಾಜ್: ಬಾರಿ ಮೊತ್ತಕ್ಕೆ ಬೇರೆ ತಂಡಕ್ಕೆ ಸೇರ್ಪಡೆ. ಯಾವ ತಂಡ ಗೊತ್ತೇ??

ನೇರವಾಗಿ ಚಾಂಪಿಯನ್ ತಂಡವನ್ನು ಸೇರಲು ಮುಂದಾದ ಮೊಹಮದ್ ಸಿರಾಜ್: ಬಾರಿ ಮೊತ್ತಕ್ಕೆ ಬೇರೆ ತಂಡಕ್ಕೆ ಸೇರ್ಪಡೆ. ಯಾವ ತಂಡ ಗೊತ್ತೇ??

ನಮಸ್ಕಾರ ಸ್ನೇಹಿತರೇ ಮೊಹಮ್ಮದ್ ಸಿರಾಜ್ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳ ಪಾಲಿಗೆ ಕೆಲವೊಮ್ಮೆ ರಕ್ಷಕ, ಕೆಲವೊಮ್ಮೆ ರಾಕ್ಷಸ. ಒಂದಿಷ್ಟು ಕಹಿ ನೆನಪುಗಳು ಹಾಗೂ ಅದರ ಜೊತೆ ಜೊತೆಗೆ ಸಿಹಿ ನೆನಪುಗಳನ್ನು ಸಹ ಮೊಹಮ್ಮದ್ ಸಿರಾಜ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದೊಂದಿಗೆ ಹೊಂದಿದ್ದಾರೆ. ಸದ್ಯ ಟಿ 20 ಕ್ರಿಕೆಟ್ ನಲ್ಲಿ ಉತ್ತಮವಾಗಿ ಪ್ರದರ್ಶನ ನೀಡದ ಕಾರಣ ಮೊಹಮ್ಮದ್ ಸಿರಾಜ್ ಭಾರತ ಟಿ 20 ತಂಡದಿಂದ ಹೊರಗೆ ಬಿದ್ದಿದ್ದಾರೆ.

ಏಷ್ಯಾ ಟಿ 20 ಕಪ್ ಜೊತೆ ಟಿ 20 ವಿಶ್ವಕಪ್ ನಲ್ಲಿ ಸಹ ಅವರಿಗೆ ಭಾರತ ತಂಡದಲ್ಲಿ ಸ್ಥಾನ ಸಿಗುವುದು ಕಷ್ಟ ಇದೆ. ಇನ್ನು ಈ ನಡುವೆ ಅಭಿಮಾನಿಗಳಿಗೆ ಧೀಡಿರ್ ಎಂದು ಬ್ರೇಕಿಂಗ್ ಸುದ್ದಿ ನೀಡಿರುವ ಬೌಲರ್ ಮೊಹಮ್ಮದ್ ಸಿರಾಜ್ ಇಂಗ್ಲೆಂಡ್ ನ ಕೌಂಟಿ ಕ್ರಿಕೆಟ್ ಚಾಂಪಿಯನ್ ನಲ್ಲಿ ಭಾಗವಹಿಸಲು ನಿರ್ಧರಿಸಿದ್ದಾರೆ. ಅಲ್ಲಿನ ಚಾಂಪಿಯನ್ ತಂಡ ಆಗಿರುವ ವಾರ್ವಿಕ್ ಶೈರ್ ಪರ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.

ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿರುವ ಮೂರು ಪ್ರಥಮ ದರ್ಜೆ ಪಂದ್ಯಗಳಲ್ಲಿ ವಾರ್ವಿಕ್ ಶೈರ್ ತಂಡದ ಪರ ಸ್ವಿಂಗ್ ಬೌಲಿಂಗ್ ಮೊಹಮ್ಮದ್ ಸಿರಾಜ್ ಕಣಕ್ಕಿಳಿಯುವುದು ಪಕ್ಕಾ ಆಗಿದೆ. ಈ ಬಗ್ಗೆ ಮಾತನಾಡಿರುವ ಸಿರಾಜ್, ವಾರ್ವಿಕ್ ಶೈರ್ ತಂಡದ ಪರ ಆಡಲು ಉತ್ಸುಕನಾಗಿದ್ದೇನೆ. ಇಂಗ್ಲೆಂಡ್ ನ ಪಿಚ್ ಗಳು ಹಾಗೂ ಇಲ್ಲಿನ ವಾತಾವರಣ ಕ್ರೀಡಾಪಟುಗಳಿಗೆ ಹೇಳಿ ಮಾಡಿಸಿದಂತಿವೆ. ಹೀಗಾಗಿ ನಾನು ಇಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.