ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಕೊನೆಗೂ ಇಳಿಕೆಯಾಯ್ತು ಚಿನ್ನ: ಸತತ ಬೆಲೆ ಏರಿಕೆ ಕಂಡಿದ್ದ ಚಿನ್ನ ಇದೀಗ ಕಡಿಮೆ ಬೆಲೆಗೆ: ಹೂಡಿಕೆ ಮಾಡಲು ಇದು ಸರಿಯಾದ ಸಮಯವೇ??

51

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನೀವೆಲ್ಲರೂ ತಿಳಿದಿರುವ ಹಾಗೆ ಇಡೀ ವಿಶ್ವದಲ್ಲಿ ಅತ್ಯಂತ ಚಿನ್ನವನ್ನು ಖರೀದಿ ಮಾಡುವ ದೇಶ ಎಂದರೆ ಅದು ನಮ್ಮ ಭಾರತ ದೇಶ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದರಲ್ಲೂ ನಮ್ಮ ಭಾರತ ದೇಶದ ಮಹಿಳೆಯರು ಹಬ್ಬ ಬಂತಂದರೆ ಸಾಕು ಚಿನ್ನದ ಖರೀದಿಗಾಗಿ ಕೂಡಿಟ್ಟಿರುವ ಹಣವನ್ನು ವಿನಯೋಗಿಸುತ್ತಾರೆ.

ಚಿನ್ನವನ್ನು ಖರೀದಿಸುವುದು ಹಲವಾರು ವಿಚಾರಗಳಿಂದ ಲಾಭಕರವಾಗಿದೆ. ಹಣವಿದ್ದವರು ತಮ್ಮ ಪ್ರತಿಷ್ಠೆಗಾಗಿ ಚಿನ್ನವನ್ನು ಖರೀದಿಸುತ್ತಾರೆ. ಇನ್ನು ಕೆಲವರು ಚಿನ್ನವನ್ನು ಖರೀದಿಸುವುದು ಹೂಡಿಕೆಯ ರೂಪದಲ್ಲಿ ಕೂಡ ನೋಡುತ್ತಾರೆ. ಸದ್ಯದ ಮಟ್ಟಿಗೆ ಚಿನ್ನದ ಬೆಲೆ ಗಣನೀಯವಾಗಿ ಕೆಳಗಿಳಿದಿದೆ ಎಂಬ ವಿಚಾರ ತಿಳಿದು ಬರುತ್ತದೆ. ಚಿನ್ನದ ಬೆಲೆಯಲ್ಲಿ ಇಂದು 100 ನಿನ್ನೆ 170 ರೂಪಾಯಿಗಳ ಇಳಿಕೆ ಕಂಡು ಬಂದಿದೆ ಎಂಬುದಾಗಿ ತಿಳಿದು ಬಂದಿದೆ. ಮೂರು ದಿನಗಳಿಂದ 48150 ರೂಪಾಯಿ ಇದ್ದ 22 ಕ್ಯಾರೆಟ್ ಚಿನ್ನದ ಬೆಲೆ ಈಗ ದಿಢೀರನೆ 47950 ರೂಪಾಯಿ ಆಗಿದೆ. ಇದೇ ರೀತಿ 24 ಕ್ಯಾರೆಟ್ ಚಿನ್ನದ ಬೆಲೆ 52,530 ರೂಪಾಯಿಯಿಂದ 52,310 ರೂಪಾಯಿ ಆಗಿದೆ. ಸಣ್ಣ ಉದ್ಯಮ , ಹಣಗಳಿಕೆ

ಚಿನ್ನವನ್ನು ಖರೀದಿಸಲು ಅಥವಾ ಚಿನ್ನದ ಮೇಲೆ ಹೂಡಿಕೆ ಮಾಡಲು ಇದೊಂದು ಅತ್ಯುತ್ತಮ ಸಮಯ ಎಂಬುದಾಗಿ ನೀವು ನಮ್ಮನ್ನು ಕೇಳಿದರೆ ಖಂಡಿತವಾಗಿ ಇದೊಂದು ಅತ್ಯುತ್ತಮ ಸಮಯ ಎಂದು ಹೇಳಬಹುದಾಗಿದೆ ಇದಕ್ಕೊಂದು ಮೌಲ್ಯವಾದ ಕಾರಣ ಕೂಡ ಇದೆ. ಸದ್ಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಅತ್ಯಂತ ಕಡಿಮೆಯಾಗಿದ್ದು ಈಗಲೇ ಖರೀದಿಸಿದರೆ ನಿಮಗೆ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಚಿನ್ನವನ್ನು ಖರೀದಿಸಲು ಸಾಧ್ಯವಾಗುತ್ತದೆ. ಇಲ್ಲವಾದರೆ ಅತ್ಯಂತ ಶೀಘ್ರದಲ್ಲಿ ಗೌರಿ ಗಣೇಶ ಹಬ್ಬ ಸೇರಿದಂತೆ ಹಲವಾರು ಹಬ್ಬಗಳು ಅತಿ ಶೀಘ್ರದಲ್ಲೇ ಬರಲಿದ್ದು ಚಿನ್ನದ ಬೆಲೆ ಕೂಡ ಹಬ್ಬದ ದಿನಗಳಲ್ಲಿ ಹೆಚ್ಚಾಗಲಿದ್ದು ಮುಂದಿನ ದಿನಗಳಲ್ಲಿ ನೀವು ಹೆಚ್ಚು ಹಣವನ್ನು ಕೊಟ್ಟು ಚಿನ್ನಾಭರಣಗಳನ್ನು ಖರೀದಿಸಬೇಕಾಗುತ್ತದೆ. ಹೀಗಾಗಿ ಈ ಸಂದರ್ಭದಲ್ಲಿ ಚಿನ್ನವನ್ನು ಖರೀದಿಸುವುದು ಅತ್ಯುತ್ತಮ ನಿರ್ಧಾರವಾಗಿರುತ್ತದೆ. ಪ್ಯೂನ್ ಆಗಿ ಕೆಲಸ ಮಾಡುತ್ತಿದ್ದವನು, ಇಂದು ಸಾವಿರಾರು ಕೋಟಿಯ ಕಂಪನಿ ಕಟ್ಟಿದ್ದು ಹೇಗೆ ಗೊತ್ತೇ??

Get real time updates directly on you device, subscribe now.