ಭಾರತ ತಂಡಕ್ಕೆ ಹೊಸ ಎಬಿಡಿ ಸಿಕ್ಕಿದ್ದಾನೆ ಎಂದ ಮಾಜಿ ಆಸ್ಟ್ರೇಲಿಯಾ ನಾಯಕ ರಿಕ್ಕಿ ಪಾಂಟಿಂಗ್: ಆಯ್ಕೆ ಮಾಡಿದ ಯುವ ಆಟಗಾರ ಯಾರು ಅಂತೇ ಗೊತ್ತೇ??

ಭಾರತ ತಂಡಕ್ಕೆ ಹೊಸ ಎಬಿಡಿ ಸಿಕ್ಕಿದ್ದಾನೆ ಎಂದ ಮಾಜಿ ಆಸ್ಟ್ರೇಲಿಯಾ ನಾಯಕ ರಿಕ್ಕಿ ಪಾಂಟಿಂಗ್: ಆಯ್ಕೆ ಮಾಡಿದ ಯುವ ಆಟಗಾರ ಯಾರು ಅಂತೇ ಗೊತ್ತೇ??

ನಮಸ್ಕಾರ ಸ್ನೇಹಿತರೆ ಇನ್ನೇನು ಕೆಲವೇ ದಿನಗಳಲ್ಲಿ ಯುಏಇ ನಲ್ಲಿ ಈ ವರ್ಷದ ಏಷ್ಯಾ ಕಪ್ ಟಿ20 ಟೂರ್ನಮೆಂಟ್ ಪ್ರಾರಂಭವಾಗಲಿದೆ. ಅರಬ್ಬರ ನಾಡಿನಲ್ಲಿ ಈ ಟೂರ್ನಮೆಂಟ್ ಅನ್ನು ಪೂರೈಸಿದ ನಂತರ ಭಾರತೀಯ ಕ್ರಿಕೆಟ್ ತಂಡ ಸೇರಿದಂತೆ ಪ್ರತಿಯೊಬ್ಬರೂ ಕೂಡ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಿನಲ್ಲಿ ಆಸ್ಟ್ರೇಲಿಯ ನೆಲದಲ್ಲಿ ನಡೆಯಲಿರುವ ಟಿ ಟ್ವೆಂಟಿ ವಿಶ್ವಕಪ್ ನಲ್ಲಿ ಭಾಗಿಯಾಗಲಿದ್ದಾರೆ. ಈಗಾಗಲೇ ಏಷ್ಯಾ ಕಪ್ ನಲ್ಲಿ ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಯಾರೆಲ್ಲಾ ಆಡುತ್ತಾರೆ ಎಂಬುದನ್ನು ಬಿಸಿಸಿಐ ಅಧಿಕೃತವಾಗಿ ಘೋಷಿಸಿದೆ.

ಆದರೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ನಲ್ಲಿ ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಯಾರೆಲ್ಲಾ ಆಡುತ್ತಾರೆ ಎಂಬುದು ಈಗಲೂ ಕೂಡ ನಿರ್ಧಾರಿತವಾಗಿಲ್ಲ. ಆದರೂ ಕೂಡ ಆಸ್ಟ್ರೇಲಿಯಾದ ಮಾಜಿ ನಾಯಕ ಹಾಗೂ ವಿಶ್ವ ಕಪ್ ವಿಜೇತ ನಾಯಕ ಮತ್ತು ಡೆಲ್ಲಿ ಕ್ಯಾಪಿಟಲ್ ತಂಡದ ಕೋಚ್ ಆಗಿರುವ ರಿಕ್ಕಿ ಪಾಂಟಿಂಗ್ ರವರು ಭಾರತೀಯ ಕ್ರಿಕೆಟ್ ತಂಡದ ಈ ಯುವ ಆಟಗಾರರನ್ನು ಭಾರತದ ಟಿ20 ವಿಶ್ವಕಪ್ ತಂಡದಲ್ಲಿ ಇರಲೇಬೇಕು ಹಾಗೂ ಈ ಆಟಗಾರರನ್ನು ಆಧುನಿಕ ಎಬಿಡಿ ವಿಲಿಯರ್ಸ್ ಎಂಬುದಾಗಿ ಕೂಡ ಕರೆದಿದ್ದಾರೆ. ಸ್ನೇಹಿತರೆ ರಿಕ್ಕಿ ಪಾಂಟಿಂಗ್ ರವರು ಇಂಪ್ರೆಸ್ ಆಗಿರುವುದು ಬೇರೆ ಯಾರಿಂದಲೂ ಅಲ್ಲ ಇತ್ತೀಚಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್ ತಂಡದ ಪರವಾಗಿ ವಿದೇಶಿ ಸರಣಿಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಸೂರ್ಯಕುಮಾರ್ ಯಾದವ್ ಅವರ ಬಗ್ಗೆ.

ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದಾಗಲೂ ಕೂಡ ಸೂರ್ಯಕುಮಾರ್ ಯಾದವ್ ರವರನ್ನು ನೋಡಿರುವ ರಿಕ್ಕಿ ಪಾಂಟಿಂಗ್ ಇತ್ತೀಚಿನ ದಿನಗಳಲ್ಲಿ ಅವರ ಆಟವನ್ನು ನೋಡಿ ಸಂಪೂರ್ಣ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ ಮಾತ್ರವಲ್ಲದೆ, ಆಸ್ಟ್ರೇಲಿಯಾದಲ್ಲಿ ಇಂತಹ ಅತ್ಯುತ್ತಮ ಆಟಗಾರನ ಆಟವನ್ನು ನೋಡಲು ಪ್ರೇಕ್ಷಕರು ಕೂಡ ಸಂತೋಷಪಡುತ್ತಾರೆ ಹೀಗಾಗಿ ಅವರು ಟಿ20 ವಿಶ್ವಕಪ್ ತಂಡದಲ್ಲಿ ಇರಲೇಬೇಕು ಎಂಬುದಾಗಿ ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಟೀಮ್ ಇಂಡಿಯಾ ರನ್ ಗಳಿಸಲು ಪರದಾಡುವ ಸಂದರ್ಭದಲ್ಲೆಲ್ಲ ಕ್ರೀಸಿಗೆ ಇಳಿದು ತಂಡವನ್ನು ಗೆಲುವಿನ ಹಂತಕ್ಕೆ ಕೊಂಡೊಯ್ದಿದ್ದಾರೆ. ಹೀಗಾಗಿ ರಿಕ್ಕಿ ಪಾಂಟಿಂಗ್ ರವರು ಹೇಳುವ ಮಾತು ನೂರಕ್ಕೆ ನೂರರಷ್ಟು ನ್ಯಾಯವಾಗಿದೆ.