ಐಪಿಎಲ್ ಗು ಮುನ್ನವೇ CSK ಗೆ ಶಾಕ್ ನೀಡಿದ ಜಡ್ಡು: ತಂಡ ಬಿಡಲು ಮುಂದಾಗಿರುವಾಗ ಜಡ್ಡು ಮೇಲೆ ಕಣ್ಣಿಟ್ಟಿರುವ ದೊಡ್ಡ ಫ್ರಾಂಚೈಸಿ ಯಾವುದು ಗೊತ್ತೇ?

ಐಪಿಎಲ್ ಗು ಮುನ್ನವೇ CSK ಗೆ ಶಾಕ್ ನೀಡಿದ ಜಡ್ಡು: ತಂಡ ಬಿಡಲು ಮುಂದಾಗಿರುವಾಗ ಜಡ್ಡು ಮೇಲೆ ಕಣ್ಣಿಟ್ಟಿರುವ ದೊಡ್ಡ ಫ್ರಾಂಚೈಸಿ ಯಾವುದು ಗೊತ್ತೇ?

ನಮಸ್ಕಾರ ಸ್ನೇಹಿತರೆ ಈಗಾಗಲೇ 2022ರ ಐಪಿಎಲ್ ಮುಗಿದಾಗ ನಿಂದಲೂ ಕೂಡ ತಂಡದ ಪ್ರಮುಖ ಆಲ್ರೌಂಡರ್ ಆಟಗಾರ ಆಗಿರುವ ರವೀಂದ್ರ ಜಡೇಜಾ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮ್ಯಾನೇಜ್ಮೆಂಟ್ ನಡುವೆ ಎಲ್ಲವೂ ಸರಿಯಾಗಿಲ್ಲ ಎಂಬ ಮಾತುಗಳು ದಟ್ಟವಾಗಿ ಹೋಗಿ ಆಡುತ್ತಿದೆ. ಅದಕ್ಕೂ ಪ್ರಮುಖ ವಿಚಾರ ಎನ್ನುವಂತೆ ಈ ಬಾರಿ ಸಿಎಸ್‌ಕೆ ತಂಡದಿಂದ ರವೀಂದ್ರ ಜಡೇಜಾ ಹೊರಬಂದು ಬೇರೆ ತಂಡಕ್ಕೆ ಸೇರಲಿದ್ದಾರೆ ಅಥವಾ ಹರಾಜಿನಲ್ಲಿ ಲಭ್ಯ ಇರಲಿದ್ದು, ರವೀಂದ್ರ ಜಡೇಜಾ ಅವರನ್ನು ಈಗಾಗಲೇ ಸಂಪರ್ಕಿಸುವ ತಂಡಕ್ಕೆ ಹರಾಜಿನಲ್ಲಿ ಸೇಲ್ ಆಗುವ ಸಾಧ್ಯತೆ ಹೆಚ್ಚಾಗಿದೆ.

ನಿಜಕ್ಕೂ ಇದು ಚೆನ್ನೈ ಸೂಪರ್ ಕಿಂಗ್ ತಂಡದ ಅಭಿಮಾನಿಗಳಿಗೆ ಬೇಸರದ ವಿಚಾರ ಎಂದರೆ ತಪ್ಪಾಗಲಾರದು. ಯಾಕೆಂದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗೆಲುವು ಕಂಡಂತಹ ಪ್ರತಿಯೊಂದು ಪಂದ್ಯಗಳಲ್ಲಿ ಕೂಡ ರವೀಂದ್ರ ಜಡೇಜಾ ಅವರು ತಮ್ಮ ಪ್ರಮುಖ ಯೋಗದಾನವನ್ನು ನೀಡಿದ್ದಾರೆ. ತಂಡದ ನಾಯಕನಾಗಿ ಮಹೇಂದ್ರ ಸಿಂಗ್ ಧೋನಿ ಕಾಣಿಸಿಕೊಂಡಿದ್ದರೆ ರವೀಂದ್ರ ಜಡೇಜಾ ಅವರು ಧೋನಿ ಅವರ ಗೆಲುವಿನ ಕುದುರೆಯಾಗಿ ಕಾಣಿಸಿಕೊಂಡಿದ್ದರು. ಆದರೆ ಈಗ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮ್ಯಾನೇಜ್ಮೆಂಟ್ ಜೊತೆಗೆ ಮುನಿಸನ್ನು ಹೊಂದಿರುವ ರವೀಂದ್ರ ಜಡೇಜಾ ಅವರು ತಮ್ಮ ಸೋಶಿಯಲ್ ಮೀಡಿಯಾ ಹ್ಯಾಂಡಲ್ ನಲ್ಲಿ ಕೂಡ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸಂಬಂಧಪಟ್ಟಂತಹ ಎಲ್ಲಾ ಫೋಟೋಗಳನ್ನು ಕೂಡ ಡಿಲೀಟ್ ಮಾಡಿದ್ದಾರೆ. ಈ ಮುನಿಸು ಪ್ರಾರಂಭವಾಗಿದ್ದು 2022ರ ಐಪಿಎಲ್ ಪಂದ್ಯಾವಳಿಯಲ್ಲಿ ಯಾಕೆಂದರೆ ಸಡನ್ನಾಗಿ ಈ ಸಂದರ್ಭದಲ್ಲಿ ಧೋನಿ ಅವರಿಂದ ನಾಯಕತ್ವವನ್ನು ರವೀಂದ್ರ ಜಡೇಜಾ ಅವರಿಗೆ ಹಸ್ತಾಂತರಿಸಲಾಗಿತ್ತು. ಏ ನಾಯಕತ್ವದ ಅವಧಿಯಲ್ಲಿ ರವೀಂದ್ರ ಜಡೇಜಾ ಅವರ ಪ್ರದರ್ಶನ ಸಂಪೂರ್ಣವಾಗಿ ಕುಂಠಿತಗೊಂಡು ಕಳಪೆ ಪ್ರದರ್ಶನ ನೀಡಲು ಪ್ರಾರಂಭಿಸಿದರು. ಅವರ ನಾಯಕತ್ವದಲ್ಲಿ 8ರಲ್ಲಿ 6 ಪಂದ್ಯಗಳನ್ನು ಸತತವಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೋತಿತ್ತು.

ನಂತರ ದಿಡೀರನೆ ರವೀಂದ್ರ ಜಡೇಜಾ ಅವರ ಕೈಯಿಂದ ನಾಯಕತ್ವವನ್ನು ಕಸಿದುಕೊಂಡು ಮಹೇಂದ್ರ ಸಿಂಗ್ ಧೋನಿಯವರಿಗೆ ಟೀಮ್ ಮ್ಯಾನೇಜ್ಮೆಂಟ್ ನೀಡಿತ್ತು. ಇದೇ ರವೀಂದ್ರ ಜಡೇಜಾ ಅವರ ಮುನಿಸಿಗೆ ಕಾರಣವಾಗಿತ್ತು ಎಂದು ಹೇಳಲಾಗಿದೆ. ಇದಾದ ನಂತರ ಇಂಜುರಿಯಿಂದ ತಂಡದಿಂದ ಹೊರಹೋದ ರವೀಂದ್ರ ಜಡೇಜಾ ಮತ್ತೆ 2022 ರಲ್ಲಿ ಯಾವುದೇ ಐಪಿಎಲ್ ಪಂದ್ಯಗಳನ್ನು ಆಡಿರಲಿಲ್ಲ. ಈ ಸಂದರ್ಭದಲ್ಲಿ ಅಂದಿನಿಂದ ಇಂದಿನವರೆಗೂ ಟೀ ಮ್ಯಾನೇಜ್ಮೆಂಟ್ ಜೊತೆಗೆ ಯಾವುದೇ ಸಂಪರ್ಕದಲ್ಲಿಯೂ ಕೂಡ ರವೀಂದ್ರ ಜಡೆಜಾ ಇಲ್ಲ ಹಾಗೂ ಅವರು ತಂಡವನ್ನು ದೊರೆಯುವ ಎಲ್ಲಾ ಸಾಧ್ಯತೆಗಳು ಹೆಚ್ಚಾಗಿ ಕಾಣಿಸುತ್ತಿವೆ. ಈಗಾಗಲೇ ಐಪಿಎಲ್ ನ ದೊಡ್ಡ ಫ್ರಾಂಚೈಸಿ ಒಂದು ರವೀಂದ್ರ ಜಡೇಜಾ ಅವರನ್ನು ಖರೀದಿಸುವ ಕುರಿತಂತೆ ಅವರನ್ನು ಸಂಪರ್ಕಿಸಿದೆಯಂತೆ. ಈ ಕಡೆ ಆರ್‌ಸಿಬಿ ಅಭಿಮಾನಿಗಳು ಕೂಡ ರವೀಂದ್ರ ಜಡೇಜಾ ಅವರನ್ನು ತಂಡಕ್ಕೆ ಈ ಬಾರಿ ಖರೀದಿಸಿ ಎಂಬುದಾಗಿ ಒಕ್ಕೊರಲಿನಿಂದ ಬೇಡಿಕೆ ಇಟ್ಟಿದ್ದಾರೆ. ಆ ದೊಡ್ಡ ಫ್ರಾಂಚೈಸಿ ಮುಂಬೈ ಇಂಡಿಯನ್ಸ್ ಎನ್ನುವ ಸುದ್ದಿಗಳು ಕೂಡ ಗಾಳಿಯಲ್ಲಿ ಓಡಾಡುತ್ತಿವೆ ಆದರೆ ಅದು ಎಷ್ಟರ ಮಟ್ಟಿಗೆ ಸತ್ಯ ಎಂಬುದನ್ನು ಕಾದು ನೋಡಬೇಕಾಗಿದೆ.