ವೇಗದ ಬೌಲಿಂಗ್ ಮಾಡಿ, ತಂಡದಲ್ಲಿ ಸ್ಥಾನ ಪಡೆದು ಈಗ ಹೊರಹೋಗಿರುವ ಉಮ್ರಾನ್ ಮಲೀಕ್ ಗೆ ಗ್ಲೆನ್ ಮೆಕ್ ಗ್ರಾಥ್ ಹೇಳಿದ್ದೇನು ಗೊತ್ತೇ??

ವೇಗದ ಬೌಲಿಂಗ್ ಮಾಡಿ, ತಂಡದಲ್ಲಿ ಸ್ಥಾನ ಪಡೆದು ಈಗ ಹೊರಹೋಗಿರುವ ಉಮ್ರಾನ್ ಮಲೀಕ್ ಗೆ ಗ್ಲೆನ್ ಮೆಕ್ ಗ್ರಾಥ್ ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಆಸ್ಟ್ರೇಲಿಯಾ ತಂಡ ವಿಶ್ವ ಕ್ರಿಕೆಟ್ ಜಗತ್ತನ್ನೇ ಆಳಿದ ತಂಡ. ಸತತ ಮೂರು ಬಾರಿ ವಿಶ್ವಕಪ್ ಗೆಲ್ಲುವ ಮೂಲಕ ತಾನೆಷ್ಟು ಬಲಿಷ್ಠ ಎಂಬುದನ್ನು ಜಗತ್ತಿಗೆ ತೋರಿಸಿತ್ತು. ಈ ಮೂರು ವಿಶ್ವಕಪ್ ಗೆಲ್ಲಲು ಪ್ರಮುಖ ಕಾರಣ ವೇಗಿ ಗ್ಲೆನ್ ಮೆಕ್ ಗ್ರಾಥ್. ಲೆಜೆಂಡ್ ಎಂದೇ ಕರೆಸಿಕೊಳ್ಳುವ ಮೆಕ್ ಗ್ರಾಥ್ ತಮ್ಮ ಪತ್ನಿ ಸ್ಥನ ಕ್ಯಾನ್ಸರ್ ನಿಂದ ನಿಧನರಾದ ನಂತರ ಮೆಕ್ ಗ್ರಾಥ್ ಫೌಂಡೇಶನ್ ನಡೆಸುತ್ತಿದ್ದಾರೆ.

ಇನ್ನು ಸದ್ಯ ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಆಗಿರುವ ಉಮ್ರಾನ್ ಮಲೀಕ್ ಗಂಟೆಗೆ 150ಕೀ.ಮೀ ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಇವರ ಬಗ್ಗೆ ಮಾತನಾಡಿರುವ ಗ್ಲೆನ್ ಮೆಕ್ ಗ್ರಾಥ್ ಉಮ್ರಾನ್ ಮಲೀಕ್ ಉತ್ತಮ ವೇಗದಲ್ಲಿ ಬೌಲಿಂಗ್ ಮಾಡುವುದನ್ನು ನೋಡಲು ಬಹಳ ಖುಷಿಯಾಗುತ್ತದೆ. ವೇಗದಿಂದ ಬೌಲಿಂಗ್ ಮಾಡುವ ಸಾಮರ್ಥ್ಯ ಅದು ನಮಗೆ ಗಾಡ್ ಗಿಫ್ಟ್ ಇದ್ದ ಹಾಗೆ. ಅದನ್ನು ಹೆಚ್ಚು ಬೆಳೆಸಿಕೊಳ್ಳಬೇಕು.

ಆದರೇ ಲೈನ್ ಅಂಡ್ ಲೆಂಗ್ತ್ ಸರಿಯಾಗಿ ಸಿಗುತ್ತಿಲ್ಲ ಎಂಬ ಕಾರಣಕ್ಕೆ ನಮ್ಮ ವೇಗವನ್ನು ಕಡಿಮೆ ಮಾಡಿಕೊಳ್ಳಬಾರದು. ಅದು ವೇಗದ ಬೌಲರ್ ಗಳು ಕೆರಿಯರ್ ಮೇಲೆ ಪರಿಣಾಮ ಬೀರುತ್ತವೆ. ಹಾಗಾಗಿ ನಮ್ಮ ಲೈನ್ ಎಂಡ್ ಲೆಂಗ್ತ್ ನ್ನು ನಾವು ಆದಷ್ಟು ನೆಟ್ಸ್ ನಲ್ಲಿ ಸರಿಮಾಡಿಕೊಳ್ಳಬೇಕು ಹೊರತು ನಮ್ಮ ವೇಗವನ್ನು ಕಡಿಮೆ ಮಾಡಿಕೊಳ್ಳಬಾರದು ಎಂದು ಹೇಳಿದ್ದಾರೆ. ಅದಲ್ಲದೇ ಉಮ್ರಾನ್ ಮಲೀಕ್ ಈಗ ಮಾಡುತ್ತಿರುವ ವೇಗದಲ್ಲಿ ಮೇ ಬೌಲಿಂಗ್ ಮುಂದುವರಿಸಬೇಕು ಎಂದು ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ