ಏಷ್ಯಾಕಪ್ ನಲ್ಲಿ ಇಬ್ಬರು ಭಾರತೀಯ ಆಟಗಾರರ ನಡುವೆ ಸಖತ್ ಪೈಪೋಟಿ? ಯಾರಿಗೆ ಸಿಗಲಿದೆ ಪ್ಲೇಯಿಂಗ್ 11ರಲ್ಲಿ ಚಾನ್ಸ್??

ಏಷ್ಯಾಕಪ್ ನಲ್ಲಿ ಇಬ್ಬರು ಭಾರತೀಯ ಆಟಗಾರರ ನಡುವೆ ಸಖತ್ ಪೈಪೋಟಿ? ಯಾರಿಗೆ ಸಿಗಲಿದೆ ಪ್ಲೇಯಿಂಗ್ 11ರಲ್ಲಿ ಚಾನ್ಸ್??

ನಮಸ್ಕಾರ ಸ್ನೇಹಿತರೆ ಈಗಾಗಲೇ ಇದೇ ಆಗಸ್ಟ್ 27ರಂದು ಯುಎಇ ನಲ್ಲಿ ಪ್ರಾರಂಭವಾಗಲಿರುವ ಏಷ್ಯಾಕಪ್ ಗಾಗಿ ಭಾರತೀಯ ಕ್ರಿಕೆಟ್ ತಂಡವನ್ನು ಈಗಾಗಲೇ ಬಿಸಿಸಿಐ ಅಧಿಕೃತವಾಗಿ ಪ್ರಕಟಿಸಿದೆ. ಈಗ ಇದರಲ್ಲಿ ಒಂದು ಗೊಂದಲ ಏರ್ಪಟ್ಟಿದೆ. ಈಗಾಗಲೇ ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ರವರು ತಂಡಕ್ಕೆ ಮರುಕಳಿಸಿರುವ ಹಿನ್ನೆಲೆಯಲ್ಲಿ 7ನೇ ಕ್ರಮಾಂಗದಲ್ಲಿ ಯಾರು ಬ್ಯಾಟಿಂಗ್ ಮಾಡುತ್ತಾರೆ ಅಥವಾ ದಿನೇಶ್ ಕಾರ್ತಿಕ್ ಹಾಗೂ ರಿಷಬ್ ಪಂತ್ ರವರ ನಡುವೆ ತಂಡದಲ್ಲಿ ಅಂದರೆ ಪ್ಲೇಯಿಂಗ್ 11ರಲ್ಲಿ ಯಾರು ಸ್ಥಾನ ಪಡೆಯಬಹುದು ಎಂಬ ಗೊಂದಲ ಏರ್ಪಟ್ಟಿದೆ.

ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ರಿಶಬ್ ಪಂತ್ ರವರು ಆರಂಭಿಕ ಆಟಗಾರನಾಗಿ ಕಾಣಿಸಿಕೊಂಡರೆ ಇನ್ನೊಂದು ಕಡೆ ದಿನೇಶ್ ಕಾರ್ತಿಕ್ ರವರು ಫಿನಿಷರ್ ಆಗಿ ಕಾಣಿಸಿಕೊಂಡಿರುವುದು ಇತ್ತೀಚಿನ ದಿನಗಳಲ್ಲಿ ಕಂಡುಬಂದಿದೆ. ಇಬ್ಬರೂ ಕೂಡ ಆಯ್ಕೆಯಾಗಿರುವುದು ವಿಕೆಟ್ ಕೀಪರ್ ಕೋಟದಲ್ಲಿ. ಅದು ಅಲ್ಲದೆ ಮಾಜಿ ಕ್ರಿಕೆಟಿಗರು ಕೂಡ ತಂಡದಲ್ಲಿ ಆರು ಬೌಲರ್ಗಳ ಆಪ್ಷನ್ ಇದ್ದರೆ ಯು ಎ ಈ ಪಿಚ್ ನಲ್ಲಿ ಅತ್ಯುತ್ತಮ ಎಂಬುದಾಗಿ ಅಭಿಪ್ರಾಯಪಟ್ಟಿದ್ದಾರೆ.

ಹೀಗಾಗಿ ಏಷ್ಯಾ ಕಪ್ ನಲ್ಲಿ ತಂಡ ಸಮತೋಲಿತವಾಗಿರಬೇಕು ಎಂದರೆ ಇವರಿಬ್ಬರಲ್ಲಿ ಒಬ್ಬರು ಮಾತ್ರ ಪ್ಲೇಯಿಂಗ್ 11ರಲ್ಲಿ ಇರಬೇಕು ಎಂಬುದಾಗಿ ಹಿರಿಯ ಆಟಗಾರರು ತಮ್ಮ ಅಭಿಪ್ರಾಯವನ್ನು ನೀಡಿದ್ದಾರೆ. ಇದರ ಬಗ್ಗೆ ಈಗಾಗಲೇ ರಿಷಬ್ ಪಂತ್ ಕೂಡ ಪ್ರತಿಕ್ರಿಯೆ ನೀಡಿದ್ದು ಯಾರೇ ಆಯ್ಕೆಯಾದರೂ ಕೂಡ ನಮ್ಮ ನೂರು ಪ್ರತಿಶತ ನೀಡಲು ಇಬ್ಬರೂ ಕೂಡ ಸಿದ್ದರಾಗಿದ್ದೇವೆ. ಮತ್ತೆ ತಂಡದ ಕೋಚ್ ಹಾಗೂ ನಾಯಕನಿಗೆ ನಮ್ಮನ್ನು ಆಯ್ಕೆ ಮಾಡುವುದು ಬಿಟ್ಟಿದ್ದು ಎಂಬುದಾಗಿ ಅವರು ಹೇಳಿದ್ದಾರೆ. ನಿಮ್ಮ ಪ್ರಕಾರ ಯಾವ ಪ್ಲೇಯಿಂಗ್ 11 ಏಷ್ಯಾ ಕಪ್ ನಲ್ಲಿ ಇದ್ದರೆ ತಂಡ ಬ್ಯಾಲೆನ್ಸ್ ಆಗಿರುತ್ತದೆ ಎಂಬುದನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ತಿಳಿಸಿ.