ಸಾಕಷ್ಟು ಸಾಧನೆ ಮಾಡಿರುವ ರಾಸ್ ಟೇಲರ್, ಕನ್ನಡಿಗ ರಾಹುಲ್ ದ್ರಾವಿಡ್ ರವರ ಬಗ್ಗೆ ಹೇಳಿದ್ದೇನು ಗೊತ್ತೇ??
ಸಾಕಷ್ಟು ಸಾಧನೆ ಮಾಡಿರುವ ರಾಸ್ ಟೇಲರ್, ಕನ್ನಡಿಗ ರಾಹುಲ್ ದ್ರಾವಿಡ್ ರವರ ಬಗ್ಗೆ ಹೇಳಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೆ ಕ್ರಿಕೆಟ್ ಅನ್ನು ಜೆಂಟಲ್ ಮ್ಯಾನ್ಸ್ ಗೇಮ್ ಎನ್ನುವುದಾಗಿ ಕರೆಯಲಾಗುತ್ತದೆ. ಆದರೆ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಆಗಿರುವ ರಾಸ್ ಟೈಲರ್ ಬರೆದಿರುವ ಅವರ ಆತ್ಮಕಥೆ ಆಗಿರುವ ಬ್ಲಾಕ್ ಅಂಡ್ ವೈಟ್ ಪುಸ್ತಕದಲ್ಲಿ ಇದು ಕೊಂಚಮಟ್ಟಿಗೆ ಚರ್ಚಾಸ್ಪದ ವಿಚಾರ ಎನ್ನುವುದಾಗಿ ತಿಳಿದು ಬರುತ್ತದೆ.
ರಾಸ್ ಟೇಲರ್ ರವರು ಈ ಪುಸ್ತಕದಲ್ಲಿ ತಮ್ಮ ಸ್ವಂತ ರಾಷ್ಟ್ರೀಯ ಕ್ರಿಕೆಟ್ ತಂಡವಾಗಿರುವ ನ್ಯೂಜಿಲ್ಯಾಂಡ್ ಕ್ರಿಕೆಟ್ ತಂಡದ ಡ್ರೆಸ್ಸಿಂಗ್ ರೂಮ್ನಲ್ಲಿ ನಡೆದಿರುವ ಜನಾಂಗೀಯ ನಿಂ’ದನೆ ಹಾಗೂ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಚೆನ್ನಾಗಿ ಆಡದಿದ್ದಕ್ಕೆ ತಂಡದ ಮಾಲೀಕ ಕಪಾಳ ಮೋಕ್ಷ ಮಾಡಿರುವ ವಿಚಾರದ ಕುರಿತಂತೆ ಕೂಡ ಬರೆದುಕೊಂಡಿದ್ದಾರೆ. ಈ ವಿಚಾರಗಳನ್ನು ನೋಡಿದಾಗಲೆಲ್ಲ ಕ್ರಿಕೆಟ್ ಎಂಬ ಆಟದ ಸುತ್ತ ಇರುವ ವಾತಾವರಣ ಅಷ್ಟೊಂದು ಅಂದುಕೊಂಡಷ್ಟು ಪವಿತ್ರವಾಗಿಲ್ಲ ಎಂದು ಹೇಳಬಹುದಾಗಿದೆ. ಅದೇನೇ ಇರಲಿ ರಾಸ್ ಟೇಲರ್ ರವರು ಅದೇ ಪುಸ್ತಕದಲ್ಲಿ ನಮ್ಮ ಭಾರತೀಯ ಕ್ರಿಕೆಟ್ ತಂಡದ ಲೆಜೆಂಡರಿ ಆಟಗಾರ ಹಾಗೂ ಸದ್ಯದ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರ ಕುರಿತಂತೆ ಏನು ಹೇಳಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ರಾಸ್ ಟೇಲರ್ ರವರು ದ ವಾಲ್ ರಾಹುಲ್ ದ್ರಾವಿಡ್ ರವರನ್ನು ಭಾರತೀಯ ಕ್ರಿಕೆಟ್ ತಂಡದ ಟೈಗರ್ ಎನ್ನುವುದಾಗಿ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
ಇದಕ್ಕೆ ಒಂದು ಕಾರಣ ಕೂಡ ಇದೆ. ರಣಥಾಂಬೋರ್ ನಲ್ಲಿ ರಾಷ್ಟ್ರೀಯ ಉದ್ಯಾನವನವನ್ನು ನೋಡಲು ಇಬ್ಬರು ಕೂಡ ಹೋಗಿದ್ದ ಸಂದರ್ಭದಲ್ಲಿ ದ್ರಾವಿಡ್ ರವರಿಗೆ ನೀವು ಹುಲಿಯನ್ನು ನೋಡಿದ್ದೀರಾ ಎಂಬುದಾಗಿ ಕೇಳಿದಾಗ ನಾನು 21 ಸಲ ಬಂದಿದ್ದೇನೆ ಆದರೆ ಒಮ್ಮೆ ಕೂಡ ಹುಲಿಯನ್ನು ನೋಡಿಲ್ಲ ಎಂಬುದಾಗಿ ಹೇಳುತ್ತಾರೆ. ಸ್ವಲ್ಪವೇ ದೂರ ಮುಂದೆ ಹೋದಾಗ ಅಲ್ಲಿ ಹುಲಿಯನ್ನು ಕಂಡು ಇಬ್ರು ಕೂಡ ಪುಳಕಿತರಾಗುತ್ತಾರೆ. ಇದೇ ಸಂದರ್ಭದಲ್ಲಿ ಹುಲಿಯನ್ನು ನೋಡಲು ಬಂದಿದ್ದ ಪ್ರವಾಸಿಗರೆಲ್ಲರೂ ಕೂಡ ದ್ರಾವಿಡ್ ರವರನ್ನು ನೋಡಿ ಹುಲಿಯನ್ನು ಮರೆತೆ ಹೋಗುತ್ತಾರೆ. ಈ ಸಂದರ್ಭದಲ್ಲಿ ರಾಸ್ ಟೈಲರ್ ರವರು ವಿಶ್ವದಲ್ಲಿ 4000 ಹುಲಿಗಳಿದ್ದರೂ ಕೂಡ ರಾಹುಲ್ ದ್ರಾವಿಡ್ ರವರು ಭಾರತೀಯ ಕ್ರಿಕೆಟ್ ತಂಡದ ಹುಲಿ ಎಂಬುದಾಗಿ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸುತ್ತಾರೆ. ರಾಹುಲ್ ದ್ರಾವಿಡ್ ಅವರ ಬಗ್ಗೆ ರಾಸ್ ಟೇಲರ್ ಹೇಳಿರುವ ಮಾತುಗಳು ಎಷ್ಟರಮಟ್ಟಿಗೆ ಸಮಂಜಸ ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ.