ಎಲ್ಲಾ ಊಹಾಪೋಹಗಳಿಗೆ ತೆರೆಎಳೆದ ಸೌರವ್ ಗಂಗೂಲಿ: ವಿರಾಟ್ ಕೊಹ್ಲಿ ಫಾರ್ಮ್ ಗೆ ಮಹತ್ವದ ಹೇಳಿಕೆ ನೀಡಿ ಶಾಕ್ ನೀಡಿದ್ದು ಹೇಗೆ ಗೊತ್ತೇ??

ಎಲ್ಲಾ ಊಹಾಪೋಹಗಳಿಗೆ ತೆರೆಎಳೆದ ಸೌರವ್ ಗಂಗೂಲಿ: ವಿರಾಟ್ ಕೊಹ್ಲಿ ಫಾರ್ಮ್ ಗೆ ಮಹತ್ವದ ಹೇಳಿಕೆ ನೀಡಿ ಶಾಕ್ ನೀಡಿದ್ದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಅಂದರೆ ಕಳೆದ ಮೂರು ವರ್ಷಗಳಿಂದಲೂ ಕೂಡ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಆಗಿರುವ ವಿರಾಟ್ ಕೊಹ್ಲಿ ರವರು ಯಾವುದೇ ಶತಕ ಗಳಿಸದೆ ಕೆಲವೊಂದು ಬಾರಿ ಶೂನ್ಯಕ್ಕೆ ಔಟ್ ಆಗುವ ಮೂಲಕ ತಮ್ಮ ಕಳಪೆ ಫಾರ್ಮ್ ಅನ್ನು ಮುಂದುವರಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೂಡ ಆಡಿರುವ ಸರಣಿಗಳಲ್ಲಿ ಅಷ್ಟೊಂದು ಹೇಳಿಕೊಳ್ಳುವಂತಹ ಪ್ರದರ್ಶನವನ್ನು ಅವರು ನೀಡಿರಲಿಲ್ಲ. ಹೀಗಿದ್ದರೂ ಕೂಡ ಇದೇ ಆಗಸ್ಟ್ 27ರಂದು ಯುಎಇ ನಲ್ಲಿ ಪ್ರಾರಂಭವಾಗಲಿರುವ ಏಷ್ಯಾಕಪ್ ನಲ್ಲಿ ವಿರಾಟ್ ಕೊಹ್ಲಿ ಅವರಿಗೆ ತಂಡದಲ್ಲಿ ಸ್ಥಾನವನ್ನು ನೀಡಲಾಗಿದೆ.

ಇದಕ್ಕೂ ಮುನ್ನವೇ ಹಲವಾರು ಮಾಜಿ ಕ್ರಿಕೆಟಿಗರು ವಿರಾಟ್ ಕೊಹ್ಲಿ ಅವರನ್ನು ದೇಶಿ ಕ್ರಿಕೆಟ್ ನಲ್ಲಿ ಆಡಿಸಿ ಅಲ್ಲಿ ಚೆನ್ನಾಗಿ ಪ್ರದರ್ಶನ ನೀಡಿದರೆ ಮಾತ್ರ ಭಾರತೀಯ ಕ್ರಿಕೆಟ್ ತಂಡಕ್ಕೆ ಮತ್ತೊಮ್ಮೆ ಆಯ್ಕೆ ಮಾಡಿ ಎಂಬುದಾಗಿ ತಮ್ಮ ಅಸಮಾಧಾನವನ್ನು ಕೂಡ ವ್ಯಕ್ತಪಡಿಸಿದ್ದರು. ಹಲವಾರು ಸಮಯಗಳಿಂದ ಈ ವಿಚಾರದ ಕುರಿತಂತೆ ಬಿಸಿಸಿಐ ಅಧ್ಯಕ್ಷ ಆಗಿರುವ ಸೌರವ್ ಗಂಗೂಲಿ ಅವರು ಯಾವುದೇ ಮಾತನ್ನು ಕೂಡ ಆಡಿರಲಿಲ್ಲ. ಆದರೆ ಈಗ ಈ ಬಗ್ಗೆ ಮಾಧ್ಯಮಗಳು ಕೇಳಿರುವ ಪ್ರಶ್ನೆಗೆ ತಮ್ಮ ಮೌನವನ್ನು ಮುರಿದು ಪ್ರತಿಕ್ರಿಸಿದ್ದಾರೆ. ಆಶ್ಚರ್ಯ ಎಂಬಂತೆ ಸೌರವ್ ಗಂಗೂಲಿ ಅವರ ವಿರಾಟ್ ಕೊಹ್ಲಿ ಅವರ ಪರವಾಗಿ ಇಲ್ಲಿ ಮಾತನಾಡಿದ್ದಾರೆ.

ವಿರಾಟ್ ಕೊಹ್ಲಿ ಒಬ್ಬ ನಮ್ಮ ದೇಶಕ್ಕಾಗಿ ಅತ್ಯಂತ ಹೆಚ್ಚಿನ ಗಳಿಸಿದ ಆಟಗಾರರಾಗಿ ಕಾಣಿಸಿಕೊಳ್ಳುತ್ತಾರೆ. ಅವರು ಕೆಲವು ವರ್ಷಗಳಿಂದ ಶತಕವನ್ನು ಬಾರಿಸಿಲ್ಲ ನಿಜ ಆದರೆ ಏಷ್ಯಾ ಕಪ್ ನಲ್ಲಿ ಅವರು ತಮ್ಮ ಲಯಕೆ ಮತ್ತೆ ವಾಪಸು ಮರಳಿ ಬರಲಿದ್ದಾರೆ ಎನ್ನುವ ಭರವಸೆ ನನಗಿದೆ ಎಂಬುದಾಗಿ ವಿರಾಟ್ ಕೊಹ್ಲಿ ಅವರ ಆಯ್ಕೆಯನ್ನು ಸಂಪೂರ್ಣವಾಗಿ ಸಮರ್ಥಿಸಿದ್ದಾರೆ. ಇದೇ ಆಗಸ್ಟ್ 28ರಂದು ತನ್ನ ಸಾಂಪ್ರದಾಯಿಕ ಎದುರಾಳಿಯಾಗಿರುವ ಪಾಕಿಸ್ತಾನವನ್ನು ಎದುರಿಸುವ ಮೂಲಕ ಏಷ್ಯಾ ಕಪ್ ಅನ್ನು ಭಾರತೀಯ ಕ್ರಿಕೆಟ್ ತಂಡ ಪ್ರಾರಂಭಿಸಲಿದೆ. ಕಳೆದ ಟಿ20 ವಿಶ್ವಕಪ್ ನಲ್ಲಿ ಸೋತಿರುವ ಸೇಡನ್ನು ಈ ಏಷ್ಯಾ ಕಪ್ ನಲ್ಲಿ ಭಾರತೀಯ ಕ್ರಿಕೆಟ್ ತಂಡ ತೀರಿಸಿಕೊಳ್ಳಲಿ ಎಂಬುದಾಗಿ ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳು ಕಾತುರರಾಗಿದ್ದಾರೆ.