ಮಾರ್ವಾಡಿ ಜನರು ಯಾವುದೇ ಬಿಸಿನೆಸ್ ಮಾಡಿದರು ಯಶಸ್ಸು ಗಳಿಸುವುದು ಯಾಕೆ ಗೊತ್ತೇ?? ಅವರ ಸೀಕ್ರೆಟ್ ತಿಳಿದು ನೀವು ಯಶಸ್ಸು ಗಳಿಸಿ.

ಮಾರ್ವಾಡಿ ಜನರು ಯಾವುದೇ ಬಿಸಿನೆಸ್ ಮಾಡಿದರು ಯಶಸ್ಸು ಗಳಿಸುವುದು ಯಾಕೆ ಗೊತ್ತೇ?? ಅವರ ಸೀಕ್ರೆಟ್ ತಿಳಿದು ನೀವು ಯಶಸ್ಸು ಗಳಿಸಿ.

ನಮಸ್ಕಾರ ಸ್ನೇಹಿತರೆ ನೀವು ರಾಜಸ್ಥಾನದ ಮಾರ್ವಾಡಿ ಪ್ರದೇಶದಿಂದ ಬಂದಿರುವ ಮಾರ್ವಾಡಿ ಜನಾಂಗದ ಜನರ ಕುರಿತಂತೆ ತಿಳಿದಿರುತ್ತೀರಿ. ಅವರು ಅಲ್ಲಿ ಮರುಭೂಮಿ ಹಾಗೂ ನೆಲ ಬರಡಾಗಿರುವ ಹಿನ್ನೆಲೆಯಲ್ಲಿ ದೇಶದ ಹಾಗೂ ಪ್ರಪಂಚದ ನಾನಾ ಮೂಲೆಗಳಿಗೆ ಹೋಗಿ ವ್ಯಾಪಾರವನ್ನು ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಸಾಮಾನ್ಯವಾಗಿ ಇವರನ್ನು ನೀವು ಗಮನಿಸಬಹುದು ಇವರು ದೇಶದ ಪ್ರಪಂಚದ ಯಾವುದೇ ಮೂಲೆಯಲ್ಲಿ ಹೋದರು ಕೂಡ ಯಾವುದೇ ವ್ಯಾಪಾರವನ್ನು ಮಾಡಿದರೂ ಕೂಡ ಅದರಲ್ಲಿ ಲಾಭವನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ.

ಇನ್ನು ಯಾವುದೇ ಕಷ್ಟ ಬಂದರೂ ಕೂಡ ಅದನ್ನು ಸುಲಭವಾಗಿ ಪರಿಹರಿಸುತ್ತಾರೆ. ಇವರಿಗೆ ವ್ಯಾಪಾರ ಬಿಟ್ಟರೆ ಬೇರೆ ಏನು ಕೂಡ ತಿಳಿದಿಲ್ಲ ಅದರಲ್ಲಿ ಲಾಭವನ್ನು ಪಡೆಯುವುದು ಎಲ್ಲರಿಗಿಂತ ಇವರಿಗೆ ಸಿದ್ಧ ಹಸ್ತವಾಗಿದೆ ಎಂದು ಹೇಳಬಹುದಾಗಿದೆ. ಇಷ್ಟೊಂದು ಲಾಭವನ್ನು ಗಳಿಸುವ ಮಾರ್ವಾಡಿಗಳ ವ್ಯಾಪಾರದ ದಿನಚರಿ ಹೇಗಿರುತ್ತದೆ ಹಾಗೂ ಅವರ ಜೀವನ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಮೊದಲನೇದಾಗಿ ಇವರು ವ್ಯಾಪಾರ ಪ್ರಾರಂಭಿಸುವಾಗ ಒಂದು ಗುರಿಯನ್ನು ಇಟ್ಟುಕೊಂಡು ವ್ಯಾಪಾರವನ್ನು ಪ್ರಾರಂಭಿಸಿ ಗ್ರಾಹಕರೊಡನೆ ಅತ್ಯಂತ ಆತ್ಮೀಯರಾಗಿ ಅವರು ತಮ್ಮ ಅಂಗಡಿಗೆ ಬಂದರೆ ಏನಾದರೂ ಖರೀದಿಸಿಕೊಂಡು ಹೋಗಲೇಬೇಕು ಎನ್ನುವಷ್ಟರ ಮಟ್ಟಿಗೆ ಮೋಡಿ ಮಾಡುತ್ತಾರೆ. ಇವರು ಪ್ರತಿ ಶನಿವಾರ ಹಣವನ್ನು ಸಂಗ್ರಹಿಸುತ್ತಾರೆ ಹಾಗೂ ರಾತ್ರಿ ಎಷ್ಟು ಹೊತ್ತಾದರೂ ಸರಿಯೇ ಎಷ್ಟು ಗಳಿಸಿದ್ದೇವೆ ಎಂಬುದನ್ನು ಲೆಕ್ಕಾಚಾರ ಹಾಕಿಯೇ ಮಲಗುತ್ತಾರೆ. 30 ವರ್ಷ ವಯಸ್ಸಿನ ಗಡಿಯನ್ನು ದಾಟಿದ ನಂತರ ಇವರು ಮದುವೆಯಾಗುವುದಕ್ಕೆ ಹೋಗುವುದಿಲ್ಲ.

ಇವರು 21 ವರ್ಷ ಆಗುವುದರ ಹೊತ್ತಿಗೆ ಮದುವೆ ಆಗಿಬಿಡುತ್ತಾರೆ ಹಾಗೂ ಎಷ್ಟೇ ಕೆಲಸದ ಒತ್ತಡ ಅಥವಾ ಗುರಿಯನ್ನು ಸಾಧಿಸುವ ಛಲ ಇದ್ದರೂ ಕೂಡ 40 ವಯಸ್ಸಿನ ಒಳಗೆ ಮಕ್ಕಳನ್ನು ಪಡೆಯುತ್ತಾರೆ. ನಂತರ ವಯಸ್ಸಾದ ನಂತರ ಅವರ ಮಕ್ಕಳಿಗೆ ಈ ವ್ಯಾಪಾರವನ್ನು ವಂಶಪಾರಂಪರ್ಯವಾಗಿ ನೀಡಿಬಿಡುತ್ತಾರೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ಮಾರ್ವಾಡಿಗಳ ಬೇಗನೆ ಮದುವೆಯಾಗುವ ನೀತಿ ಲಾಭಕಾರವಾಗಿದೆ ಎಂದು ಹೇಳಬಹುದು. ವರ್ಷಕ್ಕೆ ಒಂದು ಬಾರಿ ಆದರೂ ತಮ್ಮ ಮಾರ್ವಾಡಿ ಊರಿಗೆ ಹೋಗಿ ಬರುತ್ತಾರೆ. ಮಾರ್ವಾಡಿ ಜನಾಂಗದಲ್ಲಿ ಯಾರಾದರೂ ಕಷ್ಟಕ್ಕೆ ಬಿದ್ದರೆ ಅವರಿಗೆ ಎಲ್ಲರೂ ಸೇರಿ ಸಹಾಯ ಮಾಡಿ ಅವರನ್ನು ಮತ್ತೆ ಎದ್ದು ನಿಲ್ಲುವಂತೆ ಮಾಡುತ್ತಾರೆ. ಮಾರಾಟ ಶೈಲಿ ಹಾಗೂ ವಿತರಣಾ ಶೈಲಿ ಮಾರ್ವಾಡಿಗಳನ್ನು ನೋಡಿ ಎಲ್ಲರೂ ಕೂಡ ಕಲಿಯಬೇಕು. ಇವರ ದಾನ ಧರ್ಮದ ಗುಣವು ಕೂಡ ಅಗಾಧವಾಗಿದ್ದು ಇವೆಲ್ಲದರ ಕಾರಣದಿಂದಾಗಿ ಇವರು ಅತ್ಯಂತ ಹೆಚ್ಚು ದುಡ್ಡನ್ನು ಗಳಿಸಲು ಸಾಧ್ಯವಾಗುತ್ತದೆ ಹಾಗೂ ಯಾವುದೇ ವ್ಯಾಪಾರವನ್ನಾದರೂ ಇವರು ಲಾಭದ ದಿಕ್ಕಿನತ್ತ ಹೋಗುವಂತೆ ಮಾಡುತ್ತಾರೆ.