ಟೆಲಿಕಾಂ ಕ್ಷೇತ್ರದಲ್ಲಿ ಮತ್ತೊಮ್ಮೆ ತಲ್ಲಣ ಸೃಷ್ಟಿಸಿದ ಏರ್ಟೆಲ್: ಜಿಯೋ ಗೆ ಠಕ್ಕರ್ ನೀಡಲು ಹೊಸ ಪ್ಲಾನ್ಸ್ ಬಿಡುಗಡೆ. ಎಷ್ಟು ಕಡಿಮೆ ಬೆಲೆಗೆ ಗೊತ್ತೇ??

ಟೆಲಿಕಾಂ ಕ್ಷೇತ್ರದಲ್ಲಿ ಮತ್ತೊಮ್ಮೆ ತಲ್ಲಣ ಸೃಷ್ಟಿಸಿದ ಏರ್ಟೆಲ್: ಜಿಯೋ ಗೆ ಠಕ್ಕರ್ ನೀಡಲು ಹೊಸ ಪ್ಲಾನ್ಸ್ ಬಿಡುಗಡೆ. ಎಷ್ಟು ಕಡಿಮೆ ಬೆಲೆಗೆ ಗೊತ್ತೇ??

ನಮಸ್ಕಾರ ಸ್ನೇಹಿತರೆ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಖಾಸಗಿ ಕಂಪನಿಗಳ ಹಾವಳಿ ಹೆಚ್ಚಾಗಿದೆ ಎಂದು ಹೇಳಬಹುದು. ಅದರಲ್ಲಿಯೂ ವಿಶೇಷವಾಗಿ ಭಾರತೀಯ ಏರ್ಟೆಲ್ ಹಾಗೂ ರಿಲಯನ್ಸ್ ಒಡೆತನದ ಜಿಯೋ ಸಂಸ್ಥೆಗಳು ಅತ್ಯಂತ ಹೆಚ್ಚು ಗ್ರಾಹಕರನ್ನು ತಮ್ಮತ್ತ ಸೆಳೆಯುವಲ್ಲಿ ಹಾಗೂ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ನಂಬರ್ ಒನ್ ಸ್ಥಾನವನ್ನು ಪಡೆದುಕೊಳ್ಳಲು ನೇರ ನೇರ ಸ್ಪರ್ಧೆಗೆ ಇಳಿದಂತಿದೆ. ಹೀಗಾಗಿ ತನ್ನ ಸ್ಪರ್ಧಿ ಆಗಿರುವ ಜಿಯೋಗೆ ಟಕ್ಕರ್ ಕಾಂಪಿಟೇಶನ್ ನೀಡಲು ಇತ್ತೀಚಿನ ದಿನಗಳಲ್ಲಿ ಏರ್ಟೆಲ್ ಸಂಸ್ಥೆ ಹೊಸ ಯೋಜನೆಗಳನ್ನು ತನ್ನ ಗ್ರಾಹಕರನ್ನು ಸಳೆಯುವುದಕ್ಕಾಗಿ ಪರಿಚಯಿಸಿದೆ.

ಮೊದಲಿಗೆ 519 ರೂಪಾಯಿಗಳ ರಿಚಾರ್ಜ್ ಪ್ಲಾನ್ ಅನ್ನು ಗಮನಿಸುವುದಾದರೆ 60 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವ ಈ ರಿಚಾರ್ಜ್ ಪ್ಲಾನ್ ನಲ್ಲಿ ದೈನಂದಿನ ವಾಗಿ 1.5ಜಿಬಿ ಇಂಟರ್ನೆಟ್ ಡೇಟಾ ಸಿಗಲಿದೆ. ದೈನಂದಿನ 100 ಫ್ರೀ ಮೆಸೇಜ್ ಸೌಲಭ್ಯ ಕೂಡ ಸಿಗಲಿದೆ. ಅನ್ಲಿಮಿಟೆಡ್ ಉಚಿತ ಟಾಕ್ ಟೈಮ್ ಸೌಲಭ್ಯ ಕೂಡ ಇದೆ. ವ್ಯಾಲಿಡಿಟಿ ಮುಗಿಯುವುದರ ಒಳಗೆ ಒಟ್ಟಾರೆಯಾಗಿ 135 ಜಿಬಿ ಇಂಟರ್ನೆಟ್ ಡೇಟಾ ಸಿಗುತ್ತದೆ ಹಾಗೂ ಏರ್ಟೆಲ್ ಆಪ್ಲಿಕೇಶನ್ ಗಳ ಉಚಿತ ಚಂದದಾರಿಕೆ ಕೂಡ ಇದೆ. ಇದೇ ರೀತಿ 779 ಗಳ ರಿಚಾರ್ಜ್ ಪ್ಲಾನ್ ನಲ್ಲಿ 90 ದಿನಗಳ ವ್ಯಾಲಿಡಿಟಿ ಸಿಗಲಿದೆ. ಅದರ ಹಾಗೆ ಇದರಲ್ಲಿಯೂ ಕೂಡ ದೈನಂದಿನ 1.5ಜಿಬಿ ಇಂಟರ್ನೆಟ್ ಡೇಟಾ ಹಾಗೂ ನೂರು ಉಚಿತ ಎಸ್ಎಂಎಸ್ ಮತ್ತು ಏರ್ಟೆಲ್ ಆಪ್ಲಿಕೇಶನ್ ಗಳಿಗೆ ಉಚಿತ ಚಂದಾದಾರಿಕೆ ಸಿಗಲಿದೆ.

399 ರಿಚಾರ್ಜ್ ಪ್ಲಾನ್ ನಲ್ಲಿ 28 ದಿನಗಳ ವ್ಯಾಲಿಡಿಟಿಯಲ್ಲಿ ದೈನಂದಿನ 2.5ಜಿಬಿ ಇಂಟರ್ನೆಟ್ ಡೇಟಾ ಸಿಗಲಿದೆ. ನೂರು ಎಸ್ ಎಮ್ ಎಸ್ ಉಚಿತವಾಗಿ ಹಾಗೂ ಮೂರು ತಿಂಗಳ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ವಿಂಕ್ ಮ್ಯೂಸಿಕ್ ಹಲೋ ಟೋನ್ಸ್ ಮತ್ತು ನೂರು ರೂಪಾಯಿ ಫಾಸ್ಟ್ ಟ್ಯಾಗ್ ಕ್ಯಾಶ್ ಬ್ಯಾಕ್ ಕೂಡ ದೊರೆಯಲಿದೆ. 839 ರೂಪಾಯಿಗಳ ರಿಚಾರ್ಜ್ ಪ್ಲಾನ್ ನಲ್ಲಿ 80 ದಿನಗಳ ವ್ಯಾಲಿಡಿಟಿಯಲ್ಲಿ ದೈನಂದಿನ ವಾಗಿ 2 ಜಿಬಿ ಇಂಟರ್ನೆಟ್ ಡೇಟಾ ಹಾಗೂ ದೈನಂದಿನ 100 ಉಚಿತ ಎಸ್ಎಂಎಸ್ ಸಿಗಲಿದೆ. ಇದರ ಜೊತೆಗೆ ಅಮೆಜಾನ್ ಪ್ರೈಮ್ ನ ಒಂದು ತಿಂಗಳ ಚಂದದಾರಿಕೆ ಹಾಗೂ ವಿಂಕ್ ಮ್ಯೂಸಿಕ್ ಅಪ್ಲಿಕೇಶನ್ ದೊರೆಯಲಿದೆ. ನೀವು ಕೂಡ ಏರ್ಟೆಲ್ ಗ್ರಾಹಕರಾಗಿದ್ದರೆ ಈ ಯೋಜನೆಗಳನ್ನು ಉಪಯೋಗಿಸಬಹುದಾಗಿದೆ.