ಕೊಹ್ಲಿ, ಧೋನಿ ಹಾಗೂ ರೋಹಿತ್ ನಡುವೆ ಭಾರತ ಕಂಡ ಶ್ರೇಷ್ಠ ನಾಯಕನ್ಯಾರು ಅಂತೇ ಗೊತ್ತೇ?? ಗಂಗೂಲಿ ಕೊಟ್ಟ ಉತ್ತರವೇನು ಗೊತ್ತೆ??
ಕೊಹ್ಲಿ, ಧೋನಿ ಹಾಗೂ ರೋಹಿತ್ ನಡುವೆ ಭಾರತ ಕಂಡ ಶ್ರೇಷ್ಠ ನಾಯಕನ್ಯಾರು ಅಂತೇ ಗೊತ್ತೇ?? ಗಂಗೂಲಿ ಕೊಟ್ಟ ಉತ್ತರವೇನು ಗೊತ್ತೆ??
ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಭಾರತೀಯ ಕ್ರಿಕೆಟ್ ತಂಡದಲ್ಲಿ ಇದುವರೆಗೂ ಹಲವಾರು ನಾಯಕರು ಬಂದು ಹೋಗಿದ್ದಾರೆ. ಅವರಲ್ಲಿ ಯಶಸ್ವಿ ನಾಯಕರು ಲೆಕ್ಕಾಚಾರ ಹಾಕುವುದಾದರೆ ಸೌರವ್ ಗಂಗೂಲಿ ಅವರು ಕೂಡ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಸದ್ಯಕ್ಕೆ ಬಿಸಿಸಿಐ ನ ಅಧ್ಯಕ್ಷ ಆಗಿರುವ ಸೌರವ್ ಗಂಗೂಲಿ ಅವರು ಇತ್ತೀಚಿಗಷ್ಟೇ ಸಂದರ್ಶನ ಒಂದರಲ್ಲಿ ಕೇಳಿ ಬಂದಿರುವ ಪ್ರಶ್ನೆಗೆ ನೀಡಿರುವ ಉತ್ತರ ಸಾಕಷ್ಟು ಮೆಚ್ಚುಗೆಯನ್ನು ಪಡೆದುಕೊಂಡಿದ್ದು ದೊಡ್ಡ ಮಟ್ಟದಲ್ಲಿ ಸುದ್ದಿಗೂ ಕಾರಣವಾಗಿದೆ.
ಸಂದರ್ಶನದಲ್ಲಿ ಸಂದರ್ಶಕರು ರೋಹಿತ್ ಶರ್ಮಾ ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿ ಈ ಮೂವರ ನಡುವೆ ಶ್ರೇಷ್ಠ ನಾಯಕರು ಯಾರು ಎಂಬುದಾಗಿ ಬಂದ ಪ್ರಶ್ನೆಗೆ ಸೌರವ್ ಗಂಗೂಲಿ ಅವರು ನೀಡಿರುವ ಉತ್ತರ ನಿಜಕ್ಕೂ ಕೂಡ ಜಾಣ್ಮೆಯಿಂದ ಒಳಗೊಂಡಿದೆ ಎಂದು ತಪ್ಪಾಗಲಾರದು. ಮೊದಲಿಗೆ ಹಾಲಿ ನಾಯಕ ಆಗಿರುವ ರೋಹಿತ್ ಶರ್ಮ ಅವರ ಬಗ್ಗೆ ಮಾತನಾಡುತ್ತಾ ಅವರಿಗೆ ನಾವು ಇನ್ನಷ್ಟು ಸಮಯವನ್ನು ನೀಡಬೇಕು ಅವರ ತಾಳ್ಮೆ ಹಾಗೂ ಶಾಂತಿಯ ನಾಯಕತ್ವ ಈಗಾಗಲೇ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಐದು ಬಾರಿ ಚಾಂಪಿಯನ್ ಮಾಡಿದೆ ಭಾರತೀಯ ಕ್ರಿಕೆಟ್ ತಂಡದಲ್ಲಿ ಕೂಡ ಅವರ ನಾಯಕತ್ವದ ಗುರುತು ಇನ್ನು ಮೂಡಬೇಕಾಗಿದೆ ಖಂಡಿತವಾಗಿ ಅವರು ಮೂಡಿಸುತ್ತಾರೆ ಎಂಬ ಭರವಸೆ ಇದೆ ಎಂದು ಹೇಳಿದ್ದಾರೆ.
ವಿರಾಟ್ ಕೊಹ್ಲಿ ಅವರ ವಿಶೇಷ ನಾಯಕತ್ವದ ಗುಣಗಳು ಕೂಡ ಎಲ್ಲರನ್ನೂ ಇದಾಗಲೇ ಮೆಚ್ಚಿಸಿದೆ. ಅವರು ತಂಡವನ್ನು ಉತ್ಸಾಹದಿಂದ ಮುನ್ನಡೆಸುವ ಪರಿ ನಿಜಕ್ಕೂ ಕೂಡ ಅವರನ್ನು ವಿಶೇಷವನ್ನಾಗಿ ಮಾಡಿಸಿದೆ ಎಂದು ಹೇಳಿದ್ದಾರೆ. ಇನ್ನು ಭಾರತೀಯ ಕ್ರಿಕೆಟ್ ತಂಡ ಕಂಡಂತಹ ಶ್ರೇಷ್ಠ ನಾಯಕರಲ್ಲಿ ಒಬ್ಬರಾಗಿರುವ ಮಹೇಂದ್ರ ಸಿಂಗ್ ಧೋನಿ ಕೂಡ ತಮ್ಮ ತಾಳ್ಮೆ ಸ್ವಭಾವದಿಂದ ಇದಾಗಲೇ ಭಾರತೀಯ ಕ್ರಿಕೆಟ್ ತಂಡಕ್ಕೆ ಎರಡು ವಿಶ್ವಕಪ್ಗಳನ್ನು ಹಾಗೂ ಅವರ ಐಪಿಎಲ್ ತಂಡಕ್ಕೂ ಕೂಡ ದೊಡ್ಡ ಮಟ್ಟದ ಯಶಸ್ಸನ್ನು ತಂದುಕೊಟ್ಟಿದ್ದಾರೆ ಎಂಬುದಾಗಿ ಹೇಳಿದ್ದಾರೆ. ಒಟ್ಟಾರೆಯಾಗಿ ಮೂವರು ನಾಯಕರು ಕೂಡ ಅವರವರ ನಾಯಕತ್ವದ ಶೈಲಿಯಲ್ಲಿ ನಿಸ್ಸೀಮರು ಎಂಬುದನ್ನು ಪರೋಕ್ಷವಾಗಿ ಸೌರವ್ ಗಂಗೂಲಿ ಹೇಳಿದ್ದಾರೆ.