ಹತ್ತು ಸಾವಿರದಲ್ಲಿ ಸ್ವಂತ ಉದ್ಯೋಗ ಆರಂಭಿಸಿದರೆ ಲಕ್ಷ ಲಕ್ಷ ಎಣಿಸುವುದರಲ್ಲಿ ಎರಡು ಮಾತಿಲ್ಲ. ಯಾವ ಬಿಸಿನೆಸ್ ಹೇಗೆ ಮಾಡುವುದು ಗೊತ್ತೇ??

ಹತ್ತು ಸಾವಿರದಲ್ಲಿ ಸ್ವಂತ ಉದ್ಯೋಗ ಆರಂಭಿಸಿದರೆ ಲಕ್ಷ ಲಕ್ಷ ಎಣಿಸುವುದರಲ್ಲಿ ಎರಡು ಮಾತಿಲ್ಲ. ಯಾವ ಬಿಸಿನೆಸ್ ಹೇಗೆ ಮಾಡುವುದು ಗೊತ್ತೇ??

ನಮಸ್ಕಾರ ಸ್ನೇಹಿತರೇ ಸ್ವ ಉದ್ಯೋಗ ಎನ್ನುವುದು ಹಲವರ ಕನಸು. ಬೇರೆಯವ ಕೈ ಕೆಳಗೆ ಕಂಪನಿಗಳಲ್ಲಿ ಕೆಲಸ ಮಾಡುವುದಕ್ಕಿಂತ ನಮ್ಮದೇ ಆದ ಉದ್ಯೋಗ, ವ್ಯಾಪಾರ ವ್ಯವಹಾರವನ್ನು ಮಾಡಬೇಕು ಎಂದು ಹಲವರು ಬಯಸುತ್ತಾರೆ. ಆದರೆ ಎಲ್ಲರಿಗೂ ಹೆಚ್ಚಿನ ಬಂಡವಾಳ ಹೂಡಿ ದೊಡ್ಡ ವ್ಯವಹಾರಕ್ಕೆ ಕೈಹಾಕುವುದು ಕಷ್ಟ. ಇಂಥ ಸಂದರ್ಭದಲ್ಲಿ ಗುಡಿ ಕೈಗಾರಿಕೆಗಳ ಮೊರೆ ಹೋಗಬಹುದು. ಅಂದ್ರೆ ಸಣ್ಣದಾಗಿ, ಕಡಿಮೆ ಬಂಡವಾಳ ಹೂಡಿ ಉದ್ಯೋಗ ಶುರು ಮಾಡಿ, ನಂತರ ಅದರಲ್ಲಿ ಸಾಕಷ್ಟು ಯಶಸ್ಸನ್ನು ಗಳಿಸಬಹುದು. ಅಂಥ ಹೆಲವು ವ್ಯವಹಾರದ ಬಗ್ಗೆ ನಾವಿಂದು ತಿಳಿಸಿಕೊಡ್ತೀವಿ. ಮುಂದೆ ಓದಿ.

ಸೀಮೆಸುಣ್ಣ ಅಥವಾ ಚಾಕ್ ತಯಾರಿಕೆ. ಇದನ್ನು ಅತ್ಯಂತ ಕಡಿಮೆ ಹೂಡಿಕೆಯಲ್ಲಿ ಆರಂಭಿಸಬಹುದು. ಮನೆಯಲ್ಲಿಯೇ ಕುಳಿತು ಮಾಡಬಹುದಾದ ಈ ಉದ್ಯೋಗ, ಶಾಲಾ ಕಾಲೇಜುಗಳಲ್ಲಿ ಬಹಳ ಬೇಡಿಕೆಇರುವ ವಿಷಯ. ಇನ್ನು ಸೀಮೆಸುಣ್ಣವನ್ನು ತಯಾರಿಸಲು ಹೆಚ್ಚಿನ ವಸ್ತುಗಳ ಕೂಡ ಬೇಕಾಗುವುದಿಲ್ಲ. ಈ ವ್ಯವಹಾರ ಶುರುಮಾಡಲು ಕೇವಲ 10,000 ರೂಗಳ ಬಂಡವಾಳ ಹೂಡಿಕೆ ಮಾಡಿದ್ರೆ ಸಾಕು. ಇದು ಜಿಪ್ಸಮ್ ಎಂಬ ಕಲ್ಲಿನಿಂದ ತಯಾರಿಸಿದ ಜೇಡಿಮಣ್ಣಿನ ಒಂದು ವಿಧವಾಗಿರುವ ಬಿಳಿಯ ಬಣ್ಣದ ಪುಡಿಯಿಂದ ಸೀಮೆ ಸುಣ್ಣ ತಯಾರಾಗುತ್ತದೆ.

ಬಿಂದಿ ತಯಾರಿಕೆ ವ್ಯಾಪಾರ. ಮಾರುಕಟ್ಟೆಯಲ್ಲಿ ವಿವಿಧ ವಿನ್ಯಾಸದ ಬಿಂದಿಗಳು ಲಭ್ಯವಿದ್ದು ಅವುಗಳ ಬೇಡಿಕೆಯೂ ಹೆಚ್ಚಾಗುತ್ತಿದೆ. ಬಿಂದಿ ಟ್ರೆಂಡ್ ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ನೀವು ಕೂಡ ಬಿಂದಿ ಮಾಡುವ ಬ್ಯುಸನೆಸ್ ಶುರು ಮಾಡಬಹುದು. ಕೇವಲ 12,000 ರೂಪಾಯಿ ಬಂಡವಾಳ ಹಾಕಿ ಬಿಂದಿ ತಯಾರಿಸುವ ವ್ಯಾಪಾರವನ್ನು ಮನೆಯಲ್ಲಿಯೇ ಕುಳಿತು ಮಾಡಬಹುದು. ಆನ್ಲೈನ್ ಗಳ ಮೂಲಕವೂ ಸೇಲ್ ಮಾಡುವ ಅವಕಾಶವಿದೆ.

ಇನ್ನು ಲಕೋಟೆಗಳನ್ನು ತಯಾರಿಸುವ ಉದ್ಯಮವನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು. ಇದು ಕಾಗದ ಅಥವಾ ಕಾರ್ಡ್ ಬೋರ್ಡ್ಗಳನ್ನು ಬಳಸಿ ಲಕೋಟೆ ತಯಾರಿಸಲಾಗುತ್ತದೆ. ಗ್ರೀಟಿಂಗ್ ಕಾರ್ಡ್‌ಗಳು ಹಾಗೂ ಇತರ ವಸ್ತುಗಳನ್ನು ಪ್ಯಾಕೇಜಿಂಗ್ ಮಾಡಲು ಈ ಕವರ್ ಗಳನ್ನು ಬಳಸಲಾಗುತ್ತದೆ. ಈ ವ್ಯವಹಾರವನ್ನು ಮನೆಯಲ್ಲಿಯೇ ಕುಳಿತು ಕೈಯಲ್ಲಿ ಮಾಡಲೂ ಬಹುದು, ಮಶಿನ್ ಬಳಸಲುಬಹುದು. ಮನೆಯಲ್ಲಿ ಕುಳಿತು ಮಾಡುವುದಾದರೆ 10,000 ರಿಂದ 30,000 ರೂಪಾಯಿಗಳನ್ನು ಹೂಡಿಕೆ ಸಾಕು. ಇನ್ನು ಮಶಿನ್ ಬಳಸುವುದಾದರೆ ೨ ಲಕ್ಷದಿಂದ ೫ ಲಕ್ಷದ ವರೆಗೂ ಹೂಡಿಕೆ ಮಾಡಬೇಕಾಗುತ್ತದೆ. ಆದರೆ ಒಮ್ಮೆ ಹೂಡಿಕೆ ಮಾಡಿದರೆ ಮತ್ತೆ ನಿರಂತರವಾಗಿ ಹಣ ಬರುತ್ತದೆ. ಇದೀಗ ಮಾರುಕಟ್ಟೆಯಲ್ಲಿ ನೇರವಾಗಿ ಅಂಗಡಿಗೆ ಕೊಡುವುದು ಮಾತ್ರವಲ್ಲದೇ, ಆನ್ಲೈನ್ ಮೂಲಕವೂ ಮಾರಾಟ ಮಾಡಬಹುದು.