ಮೊದಲ ಸಿನಿಮಾ ಸೋತ ನಂತರ ಇವನಿಗೆ ನಟನೆ ಬರುವುದಿಲ್ಲ ಎಂದವರಿಗೆ ಇಡೀ ದೇಶವೇ ತಿರುಗಿ ನೋಡುವಂತೆ ಬೆಳೆದ ಫಹಾದ್ ಪಾಸಿಲ್ ಬಗ್ಗೆ ನಿಮಗೆಷ್ಟು ಗೊತ್ತು??
ಮೊದಲ ಸಿನಿಮಾ ಸೋತ ನಂತರ ಇವನಿಗೆ ನಟನೆ ಬರುವುದಿಲ್ಲ ಎಂದವರಿಗೆ ಇಡೀ ದೇಶವೇ ತಿರುಗಿ ನೋಡುವಂತೆ ಬೆಳೆದ ಫಹಾದ್ ಪಾಸಿಲ್ ಬಗ್ಗೆ ನಿಮಗೆಷ್ಟು ಗೊತ್ತು??
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ತಮಿಳಿನ ವಿಕ್ರಂ ಹಾಗೂ ತೆಲುಗಿನ ಪುಷ್ಪ ಚಿತ್ರದ ನಂತರ ಈ ಒಬ್ಬ ನಟನ ಹೆಸರು ಸಾಕಷ್ಟು ದೊಡ್ಡ ಮಟ್ಟದಲ್ಲಿ ಚಾಲ್ತಿಯಲ್ಲಿದೆ ಎಂದು ಹೇಳಬಹುದಾಗಿದೆ. ಮೊದಲಿನಿಂದಲೂ ಕೂಡ ನಟನೆಯ ವಿಚಾರಕ್ಕಾಗಿಯೇ ಇವರು ಪ್ರತಿಯೊಂದು ಕಡೆಗಳಲ್ಲಿ ಸಾಕಷ್ಟು ಜನಪ್ರಿಯ ರಾಗಿದ್ದಾರೆ. ನಟನೆಯ ವಿಚಾರದಲ್ಲಿ ಭಾರತಕ್ಕೆ ಆಸ್ಕರ್ ತಂದು ಕೊಡಬಲ್ಲ ಯಾರಾದರೂ ಒಬ್ಬ ನಟ ಇದ್ದಾರೆ ಎಂದರೆ ಖಂಡಿತವಾಗಿ ಅದು ಫಹಾದ್ ಫಾಸಿಲ್ ಎಂದು ಹೇಳಬಹುದಾಗಿದೆ. ಇಂದಿನ ಲೇಖನಿಯಲ್ಲಿ ನಾವು ಮಲಯಾಳಂ ಚಿತ್ರರಂಗದ ನಟ ಆಗಿರುವ ಪಹಾದ್ ಫಾಸಿಲ್ ಅವರ ಕುರಿತಂತೆ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.
ಕೇರಳದಲ್ಲಿ ಜನಿಸುವ ಇವರು ಅಲ್ಲಿಯ ತಮ್ಮ ಆರಂಭಿಕ ಶಿಕ್ಷಣವನ್ನು ಮುಗಿಸಿ ನಂತರ ಅಮೆರಿಕಕ್ಕೆ ಹೋಗಿ ತಮ್ಮ ಸ್ನಾತಕೋತ್ತರ ಪದವಿಯನ್ನು ಕೂಡ ಫಹಾದ್ ಫಾಸಿಲ್ ಮುಗಿಸುತ್ತಾರೆ. ಇವರಿಗೆ ಮೊದಲಿಗೆ ಚಿತ್ರರಂಗದ ಕುರಿತಂತೆ ಅಥವಾ ನಟನೆಯ ಕುರಿತಂತೆ ಯಾವುದೇ ಆಸಕ್ತಿ ಕೂಡ ಇದ್ದಿರುವುದಿಲ್ಲ. ಇವರ ತಂದೆ ಆಗಿರುವ ಫಾಸಿಲ್ ಮಲಯಾಳಂ ಚಿತ್ರರಂಗದಲ್ಲಿ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ಆಗಿರುತ್ತಾರೆ ಇದೇ ಕಾರಣದಿಂದಾಗಿ ತಮ್ಮ ಮಗ ನಟನೆಯಲ್ಲಿ ಏನಾದರೂ ಮಾಡಲಿ ಎಂಬ ಆಸೆಯನ್ನು ಕೂಡ ಅವರು ಹೊಂದಿರುತ್ತಾರೆ.
ಅದಕ್ಕಾಗಿ ಫಹಾದ್ ಫಾಸಿಲ್ ರವರ ಮೊದಲ ಸಿನಿಮಾವನ್ನು ಅವರ ತಂದೆಯ ನಿರ್ಮಾಪಕ ಹಾಗೂ ನಿರ್ದೇಶಕನಾಗಿ ತೆಗೆಯುತ್ತಾರೆ. ಆದರೆ ಮೊದಲ ಸಿನಿಮಾ ಎನ್ನುವುದು ಅಟ್ಟರ್ ಫ್ಲಾಪ್ ಆಗಿ ಕಾಣಿಸಿಕೊಂಡಿತ್ತು. ಆಗ ಇದರ ಕುರಿತಂತೆ ದೊಡ್ಡ ಮಟ್ಟದ ಕುಖ್ಯಾತಿ ಕೇರಳ ಚಿತ್ರರಂಗದಲ್ಲಿ ಹರಡುತ್ತದೆ. ಆಗ ಫಹಾದ್ ಈ ಚಿತ್ರದ ಸೋಲಿಗಾಗಿ ನನ್ನ ತಂದೆಯನ್ನು ದೂಷಿಸಬೇಡಿ ನಾನು ಯಾವುದೇ ತಯಾರಿ ಇಲ್ಲದೆ ಈ ಚಿತ್ರದಲ್ಲಿ ನಟಿಸಿದ್ದೆ ಇದಕ್ಕೆ ಕಾರಣ ಎಂಬುದಾಗಿ ಪ್ರಬುದ್ಧ ಹೇಳಿಕೆಯನ್ನು ನೀಡುತ್ತಾರೆ.
ಇದಾದ ನಂತರ ಮತ್ತೆ ಅಮೆರಿಕಾಗೆ ಹಿಂದಿರುಗುವ ಫಹಾದ್ ತಮ್ಮ ಸ್ನಾತಕೋದರ ಪದವಿಯನ್ನು ಮುಗಿಸಿಕೊಂಡು ಮತ್ತೆ ಕೇರಳಕ್ಕೆ ವಾಪಸ್ ಆಗಿ ತಮ್ಮ ಎರಡನೇ ಸಿನಿಮಾ ಕೇರಳ ಕಫೆ ನಲ್ಲಿ ನಟಿಸಿ ಎರಡನೇ ಸಿನಿಮಾದಲ್ಲಿ ಯಶಸ್ಸನ್ನು ಮೊದಲ ಬಾರಿಗೆ ಕಾಣುತ್ತಾರೆ. ಮೊದಲ ಸಿನಿಮಾಗೆ ಹೋಲಿಸಿದರೆ ಇದರಲ್ಲಿ ಅವರ ನಟನೆ ಕೂಡ ಅಭಿವೃದ್ಧಿಗೊಂಡಿತ್ತು. ಇದಾದ ನಂತರ ಒಂದಾದ ಮೇಲೆ ಒಂದರಂತೆ ಥ್ರಿಲ್ಲರ್ ಪ್ರಯೋಗಾತ್ಮಕ ಹಾಗೂ ಕಮರ್ಷಿಯಲ್ ಸೂಪರ್ ಹಿಟ್ ಸಿನಿಮಾಗಳನ್ನುಫಹಾದ್ ಪಾಸಿಲ್ ನೀಡುತ್ತಾರೆ.
ಚಪ್ಪಾ ಕುರೇಶು ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸುವ ಮೂಲಕ ಅವಾರ್ಡ್ ವಿನ್ನಿಂಗ್ ಆಕ್ಟರ್ ಆಗಿ ಕೂಡ ಕಾಣಿಸಿಕೊಳ್ಳುತ್ತಾರೆ. ನಂತರದ ದಿನಗಳಲ್ಲಿ ಬಿಡುಗಡೆಯಾದ ನಾರ್ಥ್ 24 ಕಾತಮ್ ಗೆ ಕೇರಳ ಸ್ಟೇಟ್ ಅವಾರ್ಡ್ ಅನ್ನು ಮೂರನೇ ಬಾರಿಗೆ ಗೆಲ್ಲುತ್ತಾರೆ. 2014ರಲ್ಲಿ ಬಿಡುಗಡೆಯಾದ ಬೆಂಗಳೂರು ಡೇಸ್ ಸಿನಿಮಾ ಕೂಡ ಅತ್ಯಂತ ಕಮರ್ಷಿಯಲ್ ಯಶಸ್ವಿಯಾದ ಸಿನಿಮಾಗಳಲ್ಲಿ ಒಂದಾಗಿ ಕಾಣಿಸಿಕೊಳ್ಳುತ್ತದೆ.
2015 ಹಾಗೂ 16ರಲ್ಲಿ ಬಿಡುಗಡೆಯಾದ ಪಹಾದ್ ಫಾಸಿಲ್ ರ ಎಲ್ಲಾ ಸಿನಿಮಾಗಳು ಕೂಡ ಹೇಳಿಕೊಳ್ಳುವ ಯಾವುದೇ ಪ್ರದರ್ಶನವನ್ನು ಬಾಕ್ಸ್ ಆಫೀಸ್ ನಲ್ಲಿ ನೀಡಲಿಲ್ಲ ಆದರೆ ಫಹಾದ್ ತಮಗೆ ಸಿಕ್ಕಂತಹ ಯಾವುದೇ ಪಾತ್ರವನ್ನು ಕೂಡ ನೂರಕ್ಕೆ ನೂರರಷ್ಟು ನ್ಯಾಯವನ್ನು ನೀಡಿ ನಟಿಸುತ್ತಾರೆ ಎಂಬುದು ಎಲ್ಲರಿಗೂ ಕೂಡ ತಿಳಿದುಬಂದಿತ್ತು. ಫಹಾದ್ ಫಾಸಿಲ್ ನಟನೆಯ ತೋಂಡಿ ಮುತಾಲಂ ತಿರಿಕ್ಕು ಸಾಕ್ಷಿಯಂ ಎನ್ನುವ ಸಿನಿಮಾ 2017ರಲ್ಲಿ ಬಿಡುಗಡೆಯಾಗಿ ನ್ಯಾಷನಲ್ ಅವಾರ್ಡ್ ಕೂಡ ಪಡೆಯುತ್ತದೆ. ಇದರಲ್ಲಿ ಅವರು ನಾಯಕನಾಗಿ ನಟಿಸದಿದ್ದರೂ ಕೂಡ ಅವರ ಪಾತ್ರ ಎನ್ನುವುದು ಇಲ್ಲಿ ಅತ್ಯಂತ ಸ್ವಾಭಾವಿಕ ಹಾಗೂ ಅತ್ಯಂತ ನ್ಯಾಚುರಲ್ ಆಗಿ ಕಾಣಿಸಿಕೊಂಡಿತ್ತು. ಇದೇ ಸಿನಿಮಾದ ಪಾತ್ರಕ್ಕಾಗಿ ಅವರು ಬೆಸ್ಟ್ ಸಪೋರ್ಟಿಂಗ್ ಆಕ್ಟರ್ ಎನ್ನುವ ನ್ಯಾಷನಲ್ ಅವಾರ್ಡ್ ವಿಭಾಗದಲ್ಲಿ ಕೂಡ ಪ್ರಶಸ್ತಿಯನ್ನು ಗೆಲ್ಲುತ್ತಾರೆ.
ಇದೇ ವರ್ಷ ತಮಿಳಿನಲ್ಲಿ ವೇಳೈಕ್ಕಾರನ್ ಎನ್ನುವ ಸಿನಿಮಾದ ಮೂಲಕ ತಮಿಳು ಚಿತ್ರ ರಂಗಕ್ಕೆ ಕೂಡ ಪಾದರ್ಪಣೆ ಮಾಡುತ್ತಾರೆ. 2019ರಲ್ಲಿ ಬಿಡುಗಡೆಯಾದ ಅವರ ನಟನೆಯ ಕುಂಬಾಲಂಗಿ ನೈಟ್ಸ್ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ದಾಖಲೆಯನ್ನು ನಿರ್ಮಿಸಿತ್ತು. ಇತ್ತೀಚಿಗಷ್ಟೇ ತಮಿಳ್ ಚಿತ್ರರಂಗದಲ್ಲಿ ಬಿಡುಗಡೆಯಾದ ಸೂಪರ್ ಡೈಲಾಗ್ ಸಿನಿಮಾದಲ್ಲಿ ಕೂಡ ಅವರು ನಟಿಸಿ ತಮ್ಮ ಪಾತ್ರಕ್ಕಾಗಿ ವ್ಯಾಪಕವಾಗಿ ಮೆಚ್ಚುಗೆಯನ್ನು ಪ್ರೇಕ್ಷಕರಿಂದ ಹಾಗೂ ಸಿನಿಮಾ ಪಂಡಿತರಿಂದ ಪಡೆದುಕೊಳ್ಳುತ್ತಾರೆ. ಫಹಾದ್ ಫಾಸಿಲ್ ಸಿನಿಮಾ ಯಾವುದೇ ಮಾಡಲಿ ಪಾತ್ರ ಯಾವುದೇ ಇರಲಿ ತಮ್ಮ ನಟನೆಗಾಗಿ ಖಂಡಿತವಾಗಿ ಪ್ರತಿಯೊಂದು ಸಿನಿಮಾದಲ್ಲಿ ಮೆಚ್ಚುಗೆಯನ್ನು ಎಲ್ಲರಿಂದ ಪಡೆದೆ ಪಡೆಯುತ್ತಾರೆ ಎಂಬುದು ಖಾತ್ರಿ ಆದ ವಿಚಾರವಾಗಿದೆ.
ಫಹಾದ್ ಫಾಸಿಲ್ ರವರ ಗೆಲುವಿನಲ್ಲಿ ಒಂದು ಕಾಮನ್ ವಿಚಾರ ಏನೆಂದರೆ ಅವರ ಸಿನಿಮಾಗಳಲ್ಲಿ ನಾಯಕ ಅಥವಾ ಕಮರ್ಷಿಯಲ್ ವಿಚಾರಗಳಿಗಿಂತ ಹೆಚ್ಚಾಗಿ ಪ್ರಯೋಗಾತ್ಮಕ ವಿಚಾರ ಹಾಗೂ ಸಿನಿಮಾಗಳು ಅವರ ನಟನೆಯನ್ನು ಇನ್ನಷ್ಟು ಪ್ರೇಕ್ಷಕರಿಗೆ ರುಚಿಸುವಂತೆ ಮಾಡುತ್ತದೆ. 2018 ರಿಂದ ಕೂಡ ಅವರು ಇದನ್ನೇ ತಮ್ಮ ಸಿನಿಮಾ ಕರಿಯರ್ ನಲ್ಲಿ ಅಳವಡಿಸಿಕೊಂಡು ಬಂದಿದ್ದಾರೆ.
ಇದುವರೆಗೂ ಸಹದ್ ಫಾಸೆಲ್ ಬರೋಬ್ಬರಿ 52 ಸಿನಿಮಾಗಳಲ್ಲಿ ನಟಿಸಿದ್ದು ಇತ್ತೀಚಿಗಷ್ಟೇ ಬಿಡುಗಡೆಯಾಗಿರುವ ಪುಷ್ಪ ಹಾಗೂ ವಿಕ್ರಂ ಸಿನಿಮಾಗಳ ನಟನೆಗಾಗಿ ಎಲ್ಲರಿಂದಲೂ ಕೂಡ ಪ್ರಶಂಸೆಗೆ ಒಳಗಾಗಿದ್ದಾರೆ. ನಮ್ಮ ಭಾರತ ಚಿತ್ರರಂಗದಲ್ಲಿ ನಟನೆಗೆ ಹೆಸರಾಗಿರುವ ರಾಜಕುಮಾರ್ ಕಮಲ್ ಹಾಸನ್ ಮೋಹನ್ ಲಾಲ್ ಮುಮ್ಮೂಟಿ ನಾಸಿರುದ್ದೀನ್ ಶಾ ನಾನಾ ಪಾಠೇಕರ್ ರವರ ಸಾಲಿಗೆ ಬಹದ್ ಫಾಸಿಲ್ ರವರ ಕ್ಲಾಸಿಕ್ ನಟನೆ ಸೇರಬಹುದಾಗಿದೆ ಎಂಬುದಾಗಿ ಎಲ್ಲರೂ ಮಾತನಾಡಿಕೊಳ್ಳುತ್ತಾರೆ.
ಇನ್ನು ಇತ್ತೀಚಿನ ದಿನಗಳಲ್ಲಿ ಅವರ ಬೇಡಿಕೆಯನ್ನು ದಕ್ಷಿಣ ಭಾರತ ಚಿತ್ರರಂಗವನ್ನು ಹೊರತುಪಡಿಸಿ ಬಾಲಿವುಡ್ ಚಿತ್ರರಂಗದಲ್ಲಿ ಕೂಡ ಹೆಚ್ಚಾಗಿದೆ ಎಂಬುದಾಗಿ ತಿಳಿದು ಬಂದಿದ್ದು ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟಿಸಬೇಕಾಗಿದ್ದ ಲೂಸಿಯಾ ಪವನ್ ಕುಮಾರ್ ನಿರ್ದೇಶನದ ದ್ವಿತ್ವ ಸಿನಿಮಾದಲ್ಲಿ ಫಹಾದ್ ಫಾಸಿಲ್ ಕಾಣಿಸಿಕೊಳ್ಳುತ್ತಾರೆ ಎಂಬುದಾಗಿ ಸುದ್ದಿ ಇದೆ. ಇನ್ನು ಇವರ ವಯಕ್ತಿಕ ಜೀವನದ ಬಗ್ಗೆ ಮಾತನಾಡುವುದಾದರೆ ನಟಿ ನಜರಿಯಾನ್ ರವರನ್ನು ಮದುವೆ ಆಗಿರುವುದು ನಿಮಗೆಲ್ಲ ಗೊತ್ತೇ. ಒಟ್ಟಾರೆಯಾಗಿ ಇವರ ಬಗ್ಗೆ ಹೇಳುವುದಾದರೆ ಇವರ ನಟನೆಗೆ ಯಾವುದೇ ಭಾಷೆ ಯಾವುದೇ ಚಿತ್ರರಂಗದ ಎಲ್ಲೆಗಳಿಲ್ಲ ಎಂದು ಹೇಳಬಹುದಾಗಿದೆ.