ಹಲವಾರು ವರ್ಷಗಳ ಪರಿಶ್ರಮಕ್ಕೆ ಕೊನೆಗೂ ಸಿಕ್ಕಿತು ಫಲ: ಟೀಮ್ ಇಂಡಿಯಾಗೆ ಮತ್ತೊಬ್ಬ ಬಲಾಢ್ಯ ಬ್ಯಾಟ್ಸಮನ್ ಎಂಟ್ರಿ. ಯಾರು ಗೊತ್ತೇ?

ಹಲವಾರು ವರ್ಷಗಳ ಪರಿಶ್ರಮಕ್ಕೆ ಕೊನೆಗೂ ಸಿಕ್ಕಿತು ಫಲ: ಟೀಮ್ ಇಂಡಿಯಾಗೆ ಮತ್ತೊಬ್ಬ ಬಲಾಢ್ಯ ಬ್ಯಾಟ್ಸಮನ್ ಎಂಟ್ರಿ. ಯಾರು ಗೊತ್ತೇ?

ನಮಸ್ಕಾರ ಸ್ನೇಹಿತರೆ ಈಗಾಗಲೇ ಆಗಸ್ಟ್ 27ರಿಂದ ಯುಎಇ ನಲ್ಲಿ ಪ್ರಾರಂಭವಾಗಲಿರುವ ಏಷ್ಯಾಕಪ್ ಗೆ ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧಿಕೃತವಾಗಿ ಘೋಷಿಸಿದೆ. ಅದಕ್ಕೂ ಮುನ್ನ ಭಾರತೀಯ ಕ್ರಿಕೆಟ್ ತಂಡ ಆಗಸ್ಟ್ 18ರಂದು ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯನ್ನು ಆಡಲಿದೆ. ಇದಕ್ಕಾಗಿ ಕೂಡ ತಂಡವನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಏಷ್ಯಾಕಪ್ ತಂಡದ ಉಪನಾಯಕನಾಗಿ ಮತ್ತೊಮ್ಮೆ ತಂಡಕ್ಕೆ ವಾಪಸ್ ಆಗಿರುವ ಕೆಎಲ್ ರಾಹುಲ್ ರವರಿಗೆ ಅಭ್ಯಾಸ ಪಂದ್ಯ ಎನ್ನುವಂತೆ ಜಿಂಬಾಬ್ವೆ ವಿರುದ್ಧದ ಸರಣಿಗೆ ಅವರನ್ನು ನಾಯಕನನ್ನಾಗಿ ನೇಮಿಸಲಾಗಿದೆ ಎಂದು ಹೇಳಬಹುದು.

ಹಲವಾರು ತಿಂಗಳುಗಳಿಂದ ಇಂಜುರಿ ಅನಾರೋಗ್ಯ ಹಾಗೂ ಫಿಟ್ನೆಸ್ ವಿಚಾರದಿಂದ ತಂಡದಿಂದ ಹೊರಗಿದ್ದ ಕೆ ಎಲ್ ರಾಹುಲ್ ರವರಿಗೆ ನಾಯಕನಾಗಿ ಜಿಂಬಾಬ್ವೆ ವಿರುದ್ಧ ಸರಣಿ ಒಂದೊಳ್ಳೆ ಉತ್ತಮ ಅಭ್ಯಾಸವಾಗಿ ಏಷ್ಯಾ ಕಪ್ ಟೂರ್ನಮೆಂಟ್ ಮುನ್ನಾ ಪರಿಣಮಿಸಲಿದೆ ಎಂಬುದಾಗಿ ಹೇಳಬಹುದಾಗಿದೆ. ಎಲ್ಲದಕ್ಕಿಂತ ವಿಶೇಷವಾಗಿ ಈ ತಂಡದಲ್ಲಿ ಒಬ್ಬ ಅತ್ಯಂತ ಪ್ರತಿಭಾನ್ವಿತ ಆಟಗಾರನಿಗೆ ಹಲವಾರು ವರ್ಷಗಳ ಪರಿಶ್ರಮದ ನಂತರ ಸ್ಥಾನ ದೊರಕಿದೆ ಎಂದು ಹೇಳಬಹುದಾಗಿದೆ. ಹೌದು ನಾವು ಮಾತನಾಡಲು ಹೊರಟಿರುವುದು ರಾಹುಲ್ ತ್ರಿಪಾಠಿ ಅವರ ಕುರಿತಂತೆ. ಈ ಬಾರಿ ಐಪಿಎಲ್ ನಲ್ಲಿ 14 ಪಂದ್ಯಗಳಿಂದ 414 ರನ್ನುಗಳನ್ನು ಬಾರಿಸುವ ಮೂಲಕ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇದಕ್ಕೂ ಮುನ್ನ ಇಂಗ್ಲೆಂಡ್ ಹಾಗೂ ಐರ್ಲೆಂಡ್ ವಿರುದ್ಧದ ಸರಣಿಗೂ ಕೂಡ ತಂಡದಲ್ಲಿ ಆಯ್ಕೆಯಾಗಿದ್ದರು.

ಆದರೆ ತ್ರಿಪಾಠಿ ಆಡುವ ಬಳಗದಲ್ಲಿ ಇದುವರೆಗೂ ಕೂಡ ಅವಕಾಶ ಪಡೆದುಕೊಂಡಿರಲಿಲ್ಲ. ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿ ರಾಹುಲ್ ತ್ರಿಪಾಠಿ ಅವರಿಗೆ ತಮ್ಮನ್ನು ತಾವು ಸಾಬೀತು ಪಡಿಸಿಕೊಳ್ಳಲು ಇರುವಂತಹ ಒಂದು ಅತ್ಯಮೂಲ್ಯ ಅವಕಾಶ ಆಗಿದೆ. ಈ ಸರಣಿಯಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದರೆ ತಂಡದ ಏಕದಿನ ಫಾರ್ಮ್ಯಾಟ್ ನಲ್ಲಿ ಓಪನಿಂಗ್ ಬ್ಯಾಟ್ಸ್ಮನ್ ಆಗಿ ಕಾಣಿಸಿಕೊಳ್ಳುವ ಲಿಸ್ಟಿನಲ್ಲಿ ಪ್ರಬಲ ಸ್ಪರ್ಧೆಯನ್ನು ಒಡ್ಡಿದಂತಾಗುತ್ತದೆ. ಇದರ ಮೂಲಕ ಭಾರತೀಯ ಕ್ರಿಕೆಟ್ ತಂಡಕ್ಕೆ ಒಬ್ಬ ಒಳ್ಳೆಯ ಬಲಿಷ್ಠ ರೈಟ್ ಹ್ಯಾಂಡ್ ಬ್ಯಾಟ್ಸ್ಮನ್ ಸಿಕ್ಕಿದಂತಾಗುತ್ತದೆ.