ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಮೊದಲೇ ಸಿನಿಮಾ ಸೋತು ಕೋಟಿ ಕೋಟಿ ಲಾಸ್ ಆಗಿರುವಾಗ ಅಮಿರ್ ಖಾನ್ ರವರಿಗೆ ಮತ್ತೊಂದು ಬಿಗ್ ಶಾಕ್: ಕಂಬಿ ಎಣಿಸುವ ಸಮಯ ಬಂದೆ ಬಿಡ್ತಾ??

1,725

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಬರೋಬ್ಬರಿ ಮೂರರಿಂದ ನಾಲ್ಕು ವರ್ಷಗಳ ನಂತರ ಬಾಲಿವುಡ್ ಚಿತ್ರರಂಗದ ಮಿಸ್ಟರ್ ಪರ್ಫೆಕ್ಟ್ ಎಂದೆನಿಸಿಕೊಂಡಿರುವ ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಆಗಸ್ಟ್ 11ರಂದು ದೇಶವಿದೇಶಗಳಲ್ಲಿ ಸಿನಿಮಾ ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿತ್ತು. ಆದರೆ ಬಿಡುಗಡೆ ಆದ ದಿನದಿಂದಲೂ ಕೂಡ ಸಿನಿಮಾವನ್ನು ನೋಡಿರುವ ಪ್ರತಿಯೊಬ್ಬ ಪ್ರೇಕ್ಷಕರು ಚಿತ್ರದ ಕುರಿತಂತೆ ಮಿಶ್ರ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ ಹೀಗಾಗಿ ಚಿತ್ರದ ಕಲೆಕ್ಷನ್ ಮೇಲೆ ಪ್ರಾರಂಭದಿಂದಲೂ ಕೂಡ ಪೆಟ್ಟು ಬಿದ್ದಿದೆ. ಬಿಡುಗಡೆ ಆಗುವ ಮುನ್ನವೇ ಅಮೆರಿಕಾನ ನಟನೆಯ ಈ ಸಿನಿಮಾ ವಿರುದ್ಧ ಬಾಯಿಕಾಟ್ ಟ್ರೆಂಡ್ ಹಾಗೂ ಸಿನಿಮಾವನ್ನು ಬಹಿಷ್ಕರಿಸುವ ಪ್ರತಿಕ್ರಿಯೆ ಎನ್ನುವುದು ದೇಶದಾದ್ಯಂತ ಜರುಗಿತ್ತು.

ಬಿಡುಗಡೆಯಾದ ಮೇಲೆ ಇದರ ನೈಜ ಚಿತ್ರಣ ಈಗ ನಮ್ಮ ಕಣ್ಣ ಮುಂದೆಯೇ ಇದೆ. ಚಿತ್ರ ಆರಂಭಿಕ ದಿನಗಳಲ್ಲಿ ಪಡೆದುಕೊಳ್ಳುತ್ತಿರುವ ಬಾಕ್ಸ್ ಆಫೀಸ್ ಕಲೆಕ್ಷನ್ ರಿಪೋರ್ಟ್ ನೋಡಿದರೆ ಖಂಡಿತವಾಗಿ ಸಿನಿಮಾ ಸಂಪೂರ್ಣವಾಗಿ ಬಾಕ್ಸಾಫೀಸ್ ಕಲೆಕ್ಷನ್ ವಿಚಾರದಲ್ಲಿ ನೆಲಕಚ್ಚಲಿದೆ ಎಂಬುದಾಗಿ ಸಿನಿಮಾ ಪಂಡಿತರು ಈಗಾಗಲೇ ಲೆಕ್ಕಾಚಾರ ಹಾಕಿದ್ದಾರೆ. ಇಷ್ಟು ಸಾಕಾಗಿಲ್ಲ ಎನ್ನುವಂತೆ ಚಿತ್ರದ ನಾಯಕ ಅಮೀರ್ ಖಾನ್ ಸೇರಿದಂತೆ ನಿರ್ಮಾಪಕರು ಹಾಗೂ ನಿರ್ದೇಶಕರ ವಿರುದ್ಧ ದೂರು ಕೂಡ ದಾಖಲಾಗಿದ್ದು ಇದು ಇನ್ನಷ್ಟು ಮುಂದಿನ ಹಂತಕ್ಕೆ ಹೋಗುವ ಸಾಧ್ಯತೆ ಹೆಚ್ಚಾಗಿದೆ.

ಸಿನಿಮಾದ ಒಂದು ದೃಶ್ಯದಲ್ಲಿ ಬುದ್ಧಿಮಾಂದ್ಯ ಸ್ಥಿತಿಯಲ್ಲಿರುವ ಅಮೀರ್ ಖಾನ್ ರವರು ಕಾರ್ಗಿಲ್ ಸಮರದಲ್ಲಿ ಭಾಗಿಯಾಗುವ ರೀತಿಯಲ್ಲಿ ತೋರಿಸಿದ್ದಾರೆ ಆದರೆ ಇದರ ವಿರುದ್ಧ ವಿನೀತ್ ಜಿಂದಾಲ್ ಎನ್ನುವ ವಕೀಲರು ಭಾರತೀಯ ಸೇನೆಯಲ್ಲಿ ಯಾವುದೇ ವ್ಯಕ್ತಿಯನ್ನು ಸಮರಕ್ಕೆ ಕಳಿಸುವಾಗ ಆತ ದೈಹಿಕ ಹಾಗೂ ಮಾನಸಿಕವಾಗಿ ಸದೃಢನಾಗಿದ್ದರೆ ಮಾತ್ರ ಆತನನ್ನು ಸಮರಕ್ಕೆ ಕಳಿಸುತ್ತಾರೆ ಇಲ್ಲಿ ಸೇನೆಯನ್ನು ತಪ್ಪಾಗಿ ತೋರಿಸಲಾಗಿದೆ ಎಂಬುದಾಗಿ ದೂರವನ್ನು ನೀಡಿದ್ದಾರೆ. ಕೇವಲ ಎಷ್ಟು ಮಾತ್ರವಲ್ಲದೆ ಒಂದು ದೃಶ್ಯದಲ್ಲಿ ಯಾಕೆ ನೀನು ಪೂಜೆ ಮಾಡುವುದಿಲ್ಲ ಎಂಬುದಾಗಿ ಕೇಳಿದ ಪ್ರಶ್ನೆಗೆ ಅಮ್ಮ ಪೂಜೆ ಪುನಸ್ಕಾರಗಳು ಗಲಭೆಯನ್ನು ಎಬ್ಬಿಸುತ್ತವೆ ಎಂಬುದಾಗಿ ಹೇಳಿದ್ದಾಳೆ ಎಂದು ಹೇಳುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುವಂತಹ ಹೇಳಿಕೆ ಇಲ್ಲಿ ಕಾಣಿಸಿಕೊಂಡಿದೆ ಎಂಬುದಾಗಿ ಕೂಡ ದೂರನ್ನು ನೀಡಲಾಗಿದೆ. ಸಿನಿಮಾ ನಿರ್ಮಾಣ ಸಂಸ್ಥೆ ನಿರ್ದೇಶಕ ಹಾಗೂ ಅಮೆರಿಕನ್ ರವರ ವಿರುದ್ಧ ದೆಹಲಿ ಪೊಲೀಸ್ ಆಯುಕ್ತರಿಗೆ ಈಗಾಗಲೇ ದೂರನ್ನು ನೀಡಿದ್ದು ಮುಂದಿನ ದಿನಗಳಲ್ಲಿ ಯಾವ ಪರಿಣಾಮವನ್ನು ಇವರೆಲ್ಲರೂ ಎದುರಿಸಬೇಕಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Get real time updates directly on you device, subscribe now.