ಏಷ್ಯಾ ಕಪ್ ಗೆಲ್ಲಲ್ಲು ದ್ರಾವಿಡ್ ಮಾಡಿಕೊಂಡಿರುವ ಮಾಸ್ಟರ್ ಪ್ಲಾನ್ ಏನು ಗೊತ್ತೇ?? ತಂಡದಲ್ಲಿ ಅವರನ್ನೇ ಹೆಚ್ಚಾಗಿ ಸೇರಿಸಿಕೊಂಡಿದ್ದು ಯಾಕೆ ಗೊತ್ತೇ??
ಏಷ್ಯಾ ಕಪ್ ಗೆಲ್ಲಲ್ಲು ದ್ರಾವಿಡ್ ಮಾಡಿಕೊಂಡಿರುವ ಮಾಸ್ಟರ್ ಪ್ಲಾನ್ ಏನು ಗೊತ್ತೇ?? ತಂಡದಲ್ಲಿ ಅವರನ್ನೇ ಹೆಚ್ಚಾಗಿ ಸೇರಿಸಿಕೊಂಡಿದ್ದು ಯಾಕೆ ಗೊತ್ತೇ??
ನಮಸ್ಕಾರ ಸ್ನೇಹಿತರೆ ಈಗಾಗಲೇ ಆಗಸ್ಟ್ 8ರಂದು ಏಷ್ಯಾಕಪ್ಗಾಗಿ ಭಾರತೀಯ ಕ್ರಿಕೆಟ್ ತಂಡವನ್ನು ಬಿಸಿಸಿಐ ಅಧಿಕೃತವಾಗಿ ಘೋಷಣೆ ಮಾಡಿದೆ. ಯು ಏ ಇ ನಲ್ಲಿ ನಡೆಯಲಿರುವ ಈ ಬಾರಿಯ ಏಷ್ಯಾ ಕಪ್ ಆಗಸ್ಟ್ 27ರಿಂದ ಪ್ರಾರಂಭವಾಗಲಿದೆ. ಕೋಚ್ ರಾಹುಲ್ ದ್ರಾವಿಡ್ ರವರ ಮಾರ್ಗದರ್ಶನದಲ್ಲಿ ಹಾಗೂ ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಭಾರತೀಯ ಕ್ರಿಕೆಟ್ ತಂಡ ಏಷ್ಯಾ ಕಪ್ ಟೂರ್ನಮೆಂಟ್ ಅನ್ನು ಆಗಸ್ಟ್ 28ರಂದು ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವು ತಂಡವನ್ನು ಎದುರಿಸುವ ಮೂಲಕ ಪ್ರಾರಂಭಿಸಲಿದೆ.
ಇನ್ನು ಈ ಬಾರಿಯ ಏಷ್ಯಾ ಕಪ್ ತಂಡವನ್ನು ಅಳೆದು ತೂಗಿ ಸರಿಯಾಗಿ ಪರಿಶೀಲಿಸಿದ ನಂತರವೇ ಆಯ್ಕೆ ಮಾಡಲಾಗಿದ್ದು ಕೆಲವರಿಗೆ ಅದರಲ್ಲಿಯೂ ಕೂಡ ವಲ್ಲದ ಗಂಡನಿಗೆ ಮೊಸರಿನಲ್ಲಿ ಕಲ್ಲು ಎಂಬಂತಾಗಿದೆ. ಈ ತಂಡದಲ್ಲಿಯೂ ಕೂಡ ಕೆಲವರು ಕೊರತೆಗಳನ್ನು ಹಿಡಿಯಲು ಹೊರಟಿದ್ದಾರೆ. ಇನ್ನು ಈ ಬಾರಿಯ ಏಷ್ಯಾ ಕಪ್ ಯುಎಇ ನಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೋಚ್ ರಾಹುಲ್ ದ್ರಾವಿಡ್ ರವರ ಒಂದು ಮಾಸ್ಟರ್ ಪ್ಲಾನ್ ಮಾಡಿದ್ದು ಖಂಡಿತವಾಗಿ ಈ ಬಾರಿ ಏಷ್ಯಾ ಕಪ್ ಅನ್ನು ಭಾರತೀಯ ಕ್ರಿಕೆಟ್ ತಂಡವೇ ಗೆಲ್ಲಲಿದೆ ಎಂಬುದಾಗಿ ಕ್ರಿಕೆಟ್ ಪಂಡಿತರು ಮಾತನಾಡಲು ಆರಂಭಿಸಿದ್ದಾರೆ. ಹೌದು ಸ್ನೇಹಿತರೆ ಈ ಬಾರಿ ಸ್ಪಿನ್ನರ್ ಗಳನ್ನು ಹೆಚ್ಚಾಗಿ ತಂಡದಲ್ಲಿ ವಿಶೇಷ ಆದ್ಯತೆಯನ್ನು ನೀಡಿ ಆಯ್ಕೆ ಮಾಡಿದ್ದಾರೆ. ಚುಟುಕು ಕ್ರಿಕೆಟ್ ನಲ್ಲಿ ಬ್ಯಾಟ್ಸ್ಮನ್ ಗಳು ಹೆಚ್ಚಾಗಿ ಮಿಂಚುವುದು ಸಾಮಾನ್ಯ ಆದರೆ ಯುಎಇ ನ ಪಿಚ್ ನಲ್ಲಿ ಸ್ಪಿನ್ನರ್ ಗಳು ಮೋಡಿ ಮಾಡುವುದು ವಿಶೇಷವಾಗಿದೆ.
ಹೀಗಾಗಿ ಈ ಬಾರಿ ಕೋಚ್ ರಾಹುಲ್ ದ್ರಾವಿಡ್ ಹಾಗೂ ನಾಯಕ ರೋಹಿತ್ ಶರ್ಮ ವಿಶೇಷ ಸ್ಪಿನ್ನರ್ ಗಳನ್ನು ತಂಡದಲ್ಲಿ ಸೇರಿಸಿಕೊಂಡಿದ್ದಾರೆ. ಅದರಲ್ಲೂ ಯಜುವೇಂದ್ರ ಚಹಾಲ್ ರವರು ಅರಬ್ಬರ ನಾಡಿನಲ್ಲಿ ಆಡಿರುವ 28 ಟಿ 20 ಪಂದ್ಯಗಳಲ್ಲಿ ಕೇವಲ 6.49 ರ ಎಕಾನಮಿಯಲ್ಲಿ 42 ವಿಕೆಟ್ ಕಬಳಿಸಿದ್ದಾರೆ ಹಾಗೂ ಇವರ ಜೊತೆಗೆ ರವಿ ಬಿಷ್ಣೋಯ್ ರವೀಂದ್ರ ಜಡೇಜಾ ಹಾಗೂ ಆರ್ ಅಶ್ವಿನ್ ಕೂಡ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಜಡೇಜಾ ಕೂಡ ಸ್ಪಿನ್ ಬೌಲಿಂಗ್ ವಿಭಾಗದಲ್ಲಿ ಮಾತ್ರವಲ್ಲದೆ ಅತ್ಯುತ್ತಮ ಫಿನಿಷ್ ಜವಾಬ್ದಾರಿಯನ್ನು ಕೂಡ ಅರಬ್ಬರ ನೆಲದಲ್ಲಿ ಭಾರತೀಯ ಕ್ರಿಕೆಟ್ ತಂಡದ ಪರವಾಗಿ ನಡೆಸಿಕೊಡಲಿದ್ದಾರೆ.