ಏಷ್ಯಾ ಕಪ್ ಆತನೊಬ್ಬ ಬೇಕೇ ಬೇಕು ಎಂದು ಹಠ ಹಿಡಿದು ಕುಳಿತಿದ್ದ ದ್ರಾವಿಡ್, ಯಾಕೆ ಅಂತೇ ಗೊತ್ತೇ?? ದ್ರಾವಿಡ್ ಪಟ್ಟು ಹಿಡಿದ ಆಟಗಾರ ಯಾರು ಗೊತ್ತೇ?

ಏಷ್ಯಾ ಕಪ್ ಆತನೊಬ್ಬ ಬೇಕೇ ಬೇಕು ಎಂದು ಹಠ ಹಿಡಿದು ಕುಳಿತಿದ್ದ ದ್ರಾವಿಡ್, ಯಾಕೆ ಅಂತೇ ಗೊತ್ತೇ?? ದ್ರಾವಿಡ್ ಪಟ್ಟು ಹಿಡಿದ ಆಟಗಾರ ಯಾರು ಗೊತ್ತೇ?

ನಮಸ್ಕಾರ ಸ್ನೇಹಿತರೇ ಈ ಬಾರಿ ಆಗಸ್ಟ್ 18ರ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯ ನಂತರ ಭಾರತೀಯ ಕ್ರಿಕೆಟ್ ತಂಡ ಅರಬ್ಬರನಾಡಿನಲ್ಲಿ ಏಷ್ಯಾ ಕಪ್ ಟಿ20 ಟೂರ್ನಮೆಂಟ್ ಅನ್ನು ಆಡಲಿದೆ. ಈಗಾಗಲೇ ಅಧಿಕೃತವಾಗಿ ತಂಡವನ್ನು ಕೂಡ ಘೋಷಿಸಲಾಗಿದೆ. ರೋಹಿತ್ ಶರ್ಮಾ ಅವರು ತಂಡದ ನಾಯಕನಾಗಿ ಕಾಣಿಸಿಕೊಂಡರೆ ಕೆ ಎಲ್ ರಾಹುಲ್ ರವರು ತಂಡದ ಉಪನಯಕರಾಗಿ ಕಾಣಿಸಿಕೊಳ್ಳಲಿದ್ದಾರೆ.

ಇನ್ನು ಈ ತಂಡದಲ್ಲಿ ಒಬ್ಬ ಆಟಗಾರ ಇರಲೇಬೇಕು ಎನ್ನುವುದಾಗಿ ತಂಡದ ಕೋಚ್ ಆಗಿರುವ ರಾಹುಲ್ ದ್ರಾವಿಡ್ ರವರು ಪಟ್ಟು ಹಿಡಿದಿದ್ದರು ಎಂಬುದಾಗಿ ತಿಳಿದು ಬಂದಿದೆ. ಹೌದು ಕೋಚ್ ಸಾಹೆಬ್ರು ಈ ಟೂರ್ನಮೆಂಟ್ ನಲ್ಲಿ ತಂಡದಲ್ಲಿ ಇರಲೇಬೇಕು ಎಂದು. ಹೇಳಿರೋ ಪ್ರಮುಖ ಆಟಗಾರ ಬೇರೆ ಯಾರೂ ಅಲ್ಲ ಆಲ್ ರೌಂಡರ್ ರವೀಂದ್ರ ಜಡೇಜಾ. ಯುಎಇ ನಲ್ಲಿ ಸ್ಪಿನ್ನರ್ ಗಳು ಮ್ಯಾಚ್ ವಿನ್ನರ್ ಗಳಾಗುತ್ತಾರೆ ಎಂಬುದು ಈಗಾಗಲೇ ಸಾಬೀತಾಗಿರುವ ವಿಚಾರ. ಇದಕ್ಕಾಗಿ ರಾಹುಲ್ ದ್ರಾವಿಡ್ ರವರು ತಂಡದಲ್ಲಿ ಹೆಚ್ಚಿನ ಸ್ಪಿನ್ನರ್ ಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದನ್ನು ಓದಿ. ಏಷ್ಯಾ ಕಪ್ ಗೆಲ್ಲಲ್ಲು ದ್ರಾವಿಡ್ ಮಾಡಿಕೊಂಡಿರುವ ಮಾಸ್ಟರ್ ಪ್ಲಾನ್ ಏನು ಗೊತ್ತೇ?? ತಂಡದಲ್ಲಿ ಅವರನ್ನೇ ಹೆಚ್ಚಾಗಿ ಸೇರಿಸಿಕೊಂಡಿದ್ದು ಯಾಕೆ ಗೊತ್ತೇ??

ಅದರಲ್ಲೂ ಸ್ಪಿನ್ ವಿಭಾಗದಲ್ಲೇ ಚಹಾಲ್ ಬಿಟ್ಟರೆ ರವೀಂದ್ರ ಜಡೇಜಾ ಪ್ರಮುಖವಾಗಿ ಕಾಣಿಸಿಕೊಳ್ಳುತ್ತಾರೆ. ಇನ್ನು ಯುಎಇ ನಲ್ಲಿ ರವೀಂದ್ರ ಜಡೇಜಾ ಅವರು ಈಗಾಗಲೇ ಹಲವಾರು ಬಾರಿ ಮ್ಯಾಚ್ ವಿನ್ನರಾಗಿ ಕಾಣಿಸಿಕೊಂಡು ತಮ್ಮನ್ನು ತಾವು ಸಾಬೀತುಪಡಿಸಿಕೊಂಡಿದ್ದಾರೆ. ಇದುವರೆಗೂ ರವೀಂದ್ರ ಜಡೇಜಾ ಯುಎಇ ನಲ್ಲಿ 31 ಪಂದ್ಯಗಳನ್ನಾಡಿದ್ದು 7.90ರ ಎಕಾನಮಿಯಲ್ಲಿ 26 ವಿಕೆಟ್ಗಳನ್ನು ಕಬಳಿಸಿದ್ದಾರೆ. ಬ್ಯಾಟಿಂಗ್ ನಲ್ಲಿ ಕೂಡ ತಂಡಕ್ಕೆ ಉತ್ತಮ ಪ್ರದರ್ಶನವನ್ನು ತೋರ್ಪಡಿಸಿದ್ದಾರೆ. ಹೀಗಾಗಿ ರವೀಂದ್ರ ಜಡೇಜಾ ಈ ಟೂರ್ನಮೆಂಟ್ ನಲ್ಲಿ ಯಾಕೆ ಪ್ರಮುಖ ಆಟಗಾರನಾಗಿ ಕಾಣಿಸಿಕೊಳ್ಳುತ್ತಾರೆ ಎಂಬುದಕ್ಕೆ ಯಾವುದೇ ಅನುಮಾನವಿಲ್ಲ. ಇದನ್ನು ಓದಿ. ಹಲವಾರು ವರ್ಷಗಳ ಪರಿಶ್ರಮಕ್ಕೆ ಕೊನೆಗೂ ಸಿಕ್ಕಿತು ಫಲ: ಟೀಮ್ ಇಂಡಿಯಾಗೆ ಮತ್ತೊಬ್ಬ ಬಲಾಢ್ಯ ಬ್ಯಾಟ್ಸಮನ್ ಎಂಟ್ರಿ. ಯಾರು ಗೊತ್ತೇ?