ರಾಜಸ್ತಾನ ರಾಯಲ್ಸ್ ಮಾಲೀಕ ಕಪಾಳಮೋಕ್ಷದ ಬಗ್ಗೆ ಮಾತನಾಡುವಾಗ ಆರ್ಸಿಬಿ ಕುರಿತು ರಾಸ್ ಟೇಲರ್ ಹೇಳಿದ್ದೇನು ಗೊತ್ತೇ?? ಆರ್ಸಿಬಿಯಲ್ಲಿ ಇದ್ದಿದ್ದರೇ.

ರಾಜಸ್ತಾನ ರಾಯಲ್ಸ್ ಮಾಲೀಕ ಕಪಾಳಮೋಕ್ಷದ ಬಗ್ಗೆ ಮಾತನಾಡುವಾಗ ಆರ್ಸಿಬಿ ಕುರಿತು ರಾಸ್ ಟೇಲರ್ ಹೇಳಿದ್ದೇನು ಗೊತ್ತೇ?? ಆರ್ಸಿಬಿಯಲ್ಲಿ ಇದ್ದಿದ್ದರೇ.

ನಮಸ್ಕಾರ ಸ್ನೇಹಿತರೆ ಇತ್ತೀಚಿನ ವರ್ತಮಾನದಲ್ಲಿ ನ್ಯೂಜಿಲ್ಯಾಂಡ್ ಮೂಲದ ಕ್ರಿಕೆಟಿಗ ಆಗಿರುವ ರಾಸ್ ಟೇಲರ್ ರವರು ಕ್ರಿಕೆಟ್ ಜಗತ್ತಿನಲ್ಲಿ ಒಂದು ಸೆನ್ಸೇಷನಲ್ ಸುದ್ದಿಯನ್ನು ತಮ್ಮ ಆತ್ಮಕಥನದ ಪುಸ್ತಕದ ಮೂಲಕ ಹೊರಹಾಕಿದ್ದಾರೆ ಇದು ದೊಡ್ಡ ಮಟ್ಟದಲ್ಲಿ ಜಾಗತಿಕವಾಗಿ ಸಿದ್ದು ಮಾಡುತ್ತಿದೆ.

ಈ ಆತ್ಮಕಥನದಲ್ಲಿ ರಾಸ್ ಟೇಲರ್ ರವರು ನ್ಯೂಜಿಲ್ಯಾಂಡ್ ರಾಷ್ಟ್ರೀಯ ಕ್ರಿಕೆಟ್ ತಂಡದ ಡ್ರೆಸ್ಸಿಂಗ್ ರೂಮ್ನಲ್ಲಿ ನಡೆಯುವ ವರ್ಣಭೇದದ ಕುರಿತಂತೆ ಹೊರಹಾಕಿ ಎಲ್ಲರೂ ಕೂಡ ಆಶ್ಚರ್ಯ ಪಡುವಂತೆ ಮಾಡಿದ್ದಾರೆ. ಇದಾದ ನಂತರ ರಾಜಸ್ಥಾನ ರಾಯಲ್ಸ್ ತಂಡದ ಮಾಲೀಕ ಚೆನ್ನಾಗಿ ಆಡದಿದ್ದಕ್ಕೆ ಕಪಾಳ ಮೋಕ್ಷ ಮಾಡಿದ ವಿಚಾರವನ್ನು ಕೂಡ ಬೇಸರದಿಂದ ಈ ಪುಸ್ತಕದಲ್ಲಿ ಬರೆದುಕೊಂಡಿರುವುದನ್ನು ಕೂಡ ಹೊರ ಹಾಕಿದ್ದಾರೆ. ಇನ್ನು ಐಪಿಎಲ್ ಆರಂಭದಿಂದ ಎರಡು ಸೀಸನ್ ವರೆಗೂ ಕೂಡ ರಾಸ್ ಟೈಲರ್ ರವರು ನಿಮಗೆ ತಿಳಿದಿರುವ ಹಾಗೆ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದರು. ತಮ್ಮ ಆತ್ಮಕಥನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕುರಿತಂತೆ ಕೂಡ ಬರೆದುಕೊಂಡಿದ್ದಾರೆ. ಎರಡು ಸೀಸನ್ಗಳ ನಂತರ ರಾಸ್ ಟೈಲರ್ ಅವರನ್ನು ಬೆಂಗಳೂರು ತಂಡ ಕೂಡ ಕೈ ಬಿಟ್ಟಿತ್ತು.

ನಂತರ ಅವರು ಡೆಲ್ಲಿ ರಾಜಸ್ಥಾನ ಪುಣೆ ವಾರಿಯರ್ ತಂಡದಲ್ಲಿ ಕೂಡ ಆಡಿದ್ದರು. 2014ರಲ್ಲಿ ರಾಸ್ ಟೇಲರ್ ಅವರಿಗೆ ಐಪಿಎಲ್ ಬಾಗಿಲು ಸಂಪೂರ್ಣವಾಗಿ ಮುಚ್ಚಿತ್ತು. ಇತ್ತೀಚಿಗಷ್ಟೇ ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ಸಂಪೂರ್ಣ ನಿವೃತ್ತಿಯನ್ನು ಕೂಡ ಪಡೆದುಕೊಂಡಿದ್ದಾರೆ. ಆರ್‌ಸಿಬಿ ನಲ್ಲಿ ಆಡಿದ್ದರೆ ನನ್ನ ಐಪಿಎಲ್ ವೃತ್ತಿ ಜೀವನವೂ ಕೂಡ ದೀರ್ಘ ಕಾಲದವರೆಗೆ ಇರುತ್ತಿತ್ತು ಆದರೆ ಆರ್‌ಸಿಬಿ ಯಿಂದ ಹೊರ ಬಂದಿದ್ದು ಕೂಡ ನನಗೆ ಲಾಭವಾಯಿತು ಇಲ್ಲದಿದ್ದರೆ ನಾನು ವೀರೇಂದ್ರ ಸೆಹ್ವಾಗ್ ಯುವರಾಜ್ ಸಿಂಗ್ ಮಹಿಳಾ ಜಯವರ್ಧನ ಅವರಂತಹ ಆಟಗಾರರೊಂದಿಗೆ ಆಡಲು ಸಾಧ್ಯವಾಗುತ್ತಿರಲಿಲ್ಲ ಎಂಬುದಾಗಿ ಹೇಳಿದ್ದಾರೆ. ಆದರೆ ಒಂದು ಫ್ರಾಂಚೈಸಿಗೆ ದೀರ್ಘಕಾಲದ ವರೆಗೆ ಆಡಿದ್ದರೆ ನಾನು ಇಷ್ಟು ಬೇಗ ನನ್ನ ಐಪಿಎಲ್ ಕರಿಯರ್ ಅನ್ನು ಮುಗಿಸಿಕೊಳ್ಳುತ್ತಿರಲಿಲ್ಲ ಎಂಬುದಾಗಿ ಹೇಳಿದ್ದಾರೆ.