Big Breaking News: ಐಪಿಎಲ್ ವಿರುದ್ಧ ಗಂಭೀರ ಆರೋಪ ಮಾಡಿದ ರಾಸ್ ಟೇಲರ್: ರಾಜಸ್ತಾನದ ತಂಡ ಮಾಲೀಕ ಏನು ಮಾಡಿದ್ದರಂತೆ ಗೊತ್ತೇ??

Big Breaking News: ಐಪಿಎಲ್ ವಿರುದ್ಧ ಗಂಭೀರ ಆರೋಪ ಮಾಡಿದ ರಾಸ್ ಟೇಲರ್: ರಾಜಸ್ತಾನದ ತಂಡ ಮಾಲೀಕ ಏನು ಮಾಡಿದ್ದರಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕಳೆದ ಎರಡು ಮೂರು ದಿನಗಳಿಂದ ರಾಸ್ ಟೇಲರ್ ರವರು ತಮ್ಮ ಜೀವನ ಚರಿತ್ರೆಯಲ್ಲಿ ಹಲವಾರು ವಿಷಯಗಳನ್ನು ಬಹಿರಂಗಪಡಿಸುವ ಮೂಲಕ ಕ್ರಿಕೆಟ್ ಲೋಕದಲ್ಲಿ ಏನೆಲ್ಲಾ ನಡೆಯುತ್ತಿದೆ ಎಂಬುದನ್ನು ಬಹಳ ಸೂಕ್ಷ್ಮವಾಗಿ ಹಾಗೂ ನೇರವಾಗಿ ವಿವರಣೆ ನೀಡಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಕೂಡ ಇಡೀ ಜಗತ್ತೇ ಮೆಚ್ಚಿಕೊಂಡಿರುವ ನ್ಯೂಜಿಲ್ಯಾಂಡ್ ತಂಡದಲ್ಲಿ ತಂಡದ ಆಯ್ಕೆಯಲ್ಲಿ ಎಷ್ಟೆಲ್ಲಾ ಮೋಸ ನಡೆಯುತ್ತದೆ ಎಂಬುದನ್ನು ತಿಳಿಸಿದ್ದರು. ಈ ಕುರಿತು ತಿಳಿಯಬೇಕು ಎಂದರೆ ಈ ಲೇಖನ ಓದಿ. ಕ್ರಿಕೆಟ್ ಲೋಕವನ್ನೇ ಬೆಚ್ಚಿ ಬೀಳಿಸಿದ ರಾಸ್ ಟೇಲರ್: ಎಲ್ಲರ ಮನೆಗೆದ್ದಿರುವ ನ್ಯೂಜಿಲೆಂಡ್ ತಂಡದ ಕರಾಳ ಮುಖವನ್ನು ತೆರೆದಿಟ್ಟು ಹೇಳಿದ್ದೇನು ಗೊತ್ತೇ??

ಇನ್ನು ಈಗ ತಮ್ಮ ಜೀವನ ಚರಿತ್ರೆಯಲ್ಲಿ ಮತ್ತೊಂದು ಶಾಕಿಂಗ್ ವಿಚಾರವನ್ನು ಬಹಿರಂಗಪಡಿಸಿರುವ ರಾಸ್ ಟೈಲರ್ ರವರು ಐಪಿಎಲ್ ನಲ್ಲಿ ತಾವು ಎದುರಿಸಿದ ಅತಿ ಕರಾಳ ದಿನಗಳನ್ನು ವಿವರವಾಗಿ ಬಿಚ್ಚಿಟ್ಟಿದ್ದಾರೆ. ಹೌದು ಸ್ನೇಹಿತರೆ, ನಿಮಗೆಲ್ಲರಿಗೂ ತಿಳಿದಿರುವಂತೆ ರಾಸ್ ಟೇಲರ್ ಅವರು ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ತಂಡ ಸೇರಿದಂತೆ ವಿವಿಧ ತಂಡಗಳಲ್ಲಿ ಕಾಣಿಸಿಕೊಂಡು ಹಲವಾರು ವರ್ಷಗಳ ಕಾಲ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅದೇ ರೀತಿ ರಾಜಸ್ಥಾನ ತಂಡದ ಪರವಾಗಿ ಕೂಡ ರಾಸ್ ಟೇಲರ್ ರವರು ಆಟವಾಡಿದ್ದರು. ಆದರೆ ಹೀಗೆ ರಾಜಸ್ಥಾನ ತಂಡದ ಪರವಾಗಿ ಆಟವಾಡುವಾಗ ಏನು ನಡೆಯಿತು ಎಂಬ ಶಾಕಿಂಗ್ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಹೌದು ಸ್ನೇಹಿತರೇ ತಮ್ಮ ಆತ್ಮ ಚರಿತ್ರೆಯಲ್ಲಿ ಬರೆದುಕೊಂಡಿರುವ ರಾಸ್ ಟೇಲರ್ ರವರು ರಾಜಸ್ಥಾನ ತಂಡದಲ್ಲಿ ನಾನು ಆಟವಾಡುತ್ತಿರುವಾಗ ಮೋಹಲಿ ಕ್ರೀಡಾಂಗಣದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧ ಪಂದ್ಯ ನಡೆಯುತ್ತಿತ್ತು. ಈ ಸಮಯದಲ್ಲಿ 195 ರನ್ಗಳ ಟಾರ್ಗೆಟ್ ಅನ್ನು ನಮ್ಮ ತಂಡಕ್ಕೆ ನೀಡಲಾಗಿತ್ತು, ಆದರೆ ಆ ಪಂದ್ಯದಲ್ಲಿ ನಾನು ಯಾವುದೇ ರನ್ ಗಳಿಸಲು ಸಾಧ್ಯವಾಗಲಿಲ್ಲ ಒಂದು ರನ್ನು ಗಳಿಸದೆ ಔಟ್ ಆಗಿ ಬಿಟ್ಟಿದೆ.

ಈ ಸಮಯದಲ್ಲಿ ಪಂದ್ಯ ಮುಗಿದ ಬಳಿಕ ತಂಡದ ಸಹಾಯ ಸಿಬ್ಬಂದಿ ಹಾಗೂ ಮ್ಯಾನೇಜ್ಮೆಂಟ್ ಹೋಟೆಲ್ ನ ಕೊನೆಯ ಮೇಲಿನ ಮಡಿಯಲ್ಲಿ ಬಾರ್ ನಲ್ಲಿ ಕುಳಿತಿದ್ದರು. ಈ ಸಮಯದಲ್ಲಿ ರಾಜಸ್ಥಾನ ತಂಡದ ಮಾಲೀಕರು ನೀನು ಸೊನ್ನೆಗೆ ಔಟ್ ಆಗಲು ನಾನು ನಿನಗೆ ಮಿಲಿಯನ್ ಲೆಕ್ಕದಲ್ಲಿ ದುಡ್ಡು ಕೊಡುತ್ತಿಲ್ಲ ಎಂದು ಕಪಾಳಕ್ಕೆ ಮೂರು ನಾಲ್ಕು ಬಾರಿ ಬಾರಿಸಿದರು, ಈ ಸಮಯದಲ್ಲಿ ಅವರು ನಗುತ್ತಿದ್ದರೂ ಅದೇ ಸಮಯದಲ್ಲಿ ಜೋರಾಗಿ ಹೊಡೆದಿರಲಿಲ್ಲ. ಆದ ಕಾರಣ ಇವರು ನಟನೆ ಮಾಡುತ್ತಿದ್ದಾರೆಯೇ ಅಥವಾ ನಿಜವಾಗಲೂ ನನಗೆ ಕಪಾಳ ಮೋಕ್ಷ ಮಾಡಬೇಕು ಎಂದು ಮಾಡಿದ್ದಾರೆಯೇ ಎಂದು ಅರ್ಥವಾಗಲಿಲ್ಲ. ಇಂತಹ ಸಮಯದಲ್ಲಿ ನಾನು ದೊಡ್ಡದು ಮಾಡಿದರೆ ಸರಿ ಇರುವುದಿಲ್ಲ ಎಂದು ಸುಮ್ಮನಾಗಿ ಬಿಟ್ಟೆ, ಆದರೆ ಆ ರೀತಿಯ ಪ್ರಸಂಗಗಳು ಹಲವಾರು ಟೂರ್ನಿಗಳಲ್ಲಿ ನಡೆಯುತ್ತಿವೆ ಎಂದು ಹೇಳಿಕೆ ನೀಡಿದ್ದಾರೆ. ಇದೇ ಅವರು ಕೊನೆಯ ಬಾರಿ ರಾಜಸ್ಥಾನ ತಂಡದಲ್ಲಿ ಕಾಣಿಸಿಕೊಂಡಿದ್ದು ನಂತರ ಮುಂದಿನ ವರ್ಷ ಆರ್ಸಿಬಿ ತಂಡಕ್ಕೆ ಸೇರಿಕೊಂಡು ತಂಡಕ್ಕೆ ತಮ್ಮದೇ ಆದ ಕೊಡುಗೆ ನೀಡುವಲ್ಲಿ ಯಶಸ್ವಿಯಾದರು. ನಾಲ್ಕನೇ ಕ್ರಮಾಂಕಕ್ಕೆ ದಿನೇಶ್ ಗಿಂತ ಬೆಸ್ಟ್ ಯಾರು ಅಂತೇ ಗೊತ್ತೇ??