ದಿನೇಶ್ ಕಾರ್ತಿಕ್ ಅಲ್ಲ, ರಿಷಬ್ ಪಂತ್ ಕೂಡ ಅಲ್ಲ, ಕೊಹ್ಲಿ ಆದಮೇಲೆ ನಾಲ್ಕನೇ ಕ್ರಮಾಂಕಕ್ಕೆ ಈತನೇ ಬೆಸ್ಟ್ ಅಂತೇ. ಯಾರು ಗೊತ್ತೇ??

ದಿನೇಶ್ ಕಾರ್ತಿಕ್ ಅಲ್ಲ, ರಿಷಬ್ ಪಂತ್ ಕೂಡ ಅಲ್ಲ, ಕೊಹ್ಲಿ ಆದಮೇಲೆ ನಾಲ್ಕನೇ ಕ್ರಮಾಂಕಕ್ಕೆ ಈತನೇ ಬೆಸ್ಟ್ ಅಂತೇ. ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೆ ಭಾರತೀಯ ಕ್ರಿಕೆಟ್ ತಂಡ ಈಗಾಗಲೇ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಯನ್ನು ಮುಗಿಸಿ ಏಷ್ಯಾ ಕಪ್ ಪ್ರಾರಂಭ ಆಗುವುದಕ್ಕೆ ಮುನ್ನವೇ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯನ್ನು ಆಡಲಿದೆ. ಜಿಂಬಾಬ್ದ ವಿರುದ್ಧ ಕೆಎಲ್ ರಾಹುಲ್ ರವರ ನಾಯಕತ್ವದಲ್ಲಿ ಭಾರತೀಯ ಕ್ರಿಕೆಟ್ ತಂಡ ಏಕದಿನ ಸರಣಿಯನ್ನು ಆಡುವುದು ನಿಮಗೆಲ್ಲರಿಗೂ ಗೊತ್ತೇ ಇದೆ.

ಏಷ್ಯಾಕಪ್ ಪ್ರಾರಂಭ ಆಗುವುದಕ್ಕೆ ಮುನ್ನ ಭಾರತೀಯ ಕ್ರಿಕೆಟ್ ತಂಡ ಬ್ಯಾಟಿಂಗ್ ಕ್ರಮಕದಲ್ಲಿ ಕೆಲವೊಂದು ಗೊಂದಲಗಳನ್ನು ಪರಿಹರಿಸಿಕೊಳ್ಳಬೇಕು ಎಂಬುದಾಗಿ ಮಾಜಿ ಕ್ರಿಕೆಟಿಗ ಸಬಾಕರೀಂ ರವರು ಅಭಿಪ್ರಾಯಪಟ್ಟಿದ್ದಾರೆ. ಹಾಗಿದ್ದರೆ ಟೀಮ್ ಇಂಡಿಯಾದಲ್ಲಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಯಾವ ಸ್ಥಾನದಲ್ಲಿ ಗೊಂದಲ ಇದೆ ಎಂಬುದನ್ನು ನೋಡುವುದಾದರೆ ಅದು ನಾಲ್ಕನೇ ಕ್ರಮಾಂಕ ಎಂಬುದು ನಿಚ್ಚಳವಾಗಿ ಕಾಣಿಸುತ್ತದೆ. ನಾಲ್ಕನೇ ಕ್ರಮಾಂಕದಲ್ಲಿ ರಿಷಬ್ ಪಂತ್ ದಿನೇಶ್ ಕಾರ್ತಿಕ್ ಹಾಗೂ ವಿರಾಟ್ ಕೊಹ್ಲಿ ಸೇರಿದಂತೆ ಹಲವಾರು ಆಟಗಾರರನ್ನು ತಂಡ ಪ್ರಯತ್ನಿಸಬಹುದು ಅಥವಾ ಅವರು ಆಡುವುದಕ್ಕೆ ಮೊರೆ ಹೋಗಬಹುದು ಆದರೆ ಒಬ್ಬ ಆಟಗಾರ ಕಂಡಿತವಾಗಿ ಈ ಕ್ರಮಾಂಕದಲ್ಲಿ ತಂಡಕ್ಕೆ ಟಿ ಟ್ವೆಂಟಿ ಫಾರ್ಮ್ಯಾಟ್ ನಲ್ಲಿ ಏಷ್ಯಾ ಕಪ್ ಸೇರಿದಂತೆ ಪ್ರಮುಖ ಪಂದ್ಯಗಳಲ್ಲಿ ತನ್ನ ಸಂಪೂರ್ಣ ನೈಜ ಬ್ಯಾಟಿಂಗ್ ಪ್ರದರ್ಶನವನ್ನು ನೀಡಲಿದ್ದಾರೆ ಎಂಬುದಾಗಿ ಸಮರ್ಥಿಸಿಕೊಂಡಿದ್ದಾರೆ.

ಸಬಾ ಕರೀಂ ರವರ ಪ್ರಕಾರ ಸೂರ್ಯ ಕುಮಾರ್ ಯಾದವ್ ರವರು ಟಿ ಟ್ವೆಂಟಿ ಫಾರ್ಮ್ಯಾಟ್ ನಲ್ಲಿ ನಾಲ್ಕನೇ ಕ್ರಮಾಂಕಕ್ಕೆ ಭಾರತೀಯ ಕ್ರಿಕೆಟ್ ತಂಡಕ್ಕೆ ಅತ್ಯುತ್ತಮ ಹಾಗೂ ಪರಿಪೂರ್ಣ ಹಾಗೂ ಪರಿಪಕ್ವ ಆಯ್ಕೆ ಎಂಬುದಾಗಿ ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸೂರ್ಯಕುಮಾರ್ ಯಾದವ್ ರವರು ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಅತ್ಯದ್ಭುತ ಫಾರ್ಮ್ ನಲ್ಲಿದ್ದಾರೆ ಹೀಗಾಗಿ ತಂಡದ ಅತ್ಯಂತ ಜವಾಬ್ದಾರಿಯುತ ಬ್ಯಾಟಿಂಗ್ ಕ್ರಮಾಂಕವನ್ನು ನೀಡಿದರು ಕೂಡ ಸೂರ್ಯಕುಮಾರ್ ಯಾದವ್ ರವರು ಯಾವುದೇ ಒತ್ತಡವಿಲ್ಲದೆ ಪ್ರದರ್ಶನವನ್ನು ನೀಡಬಹುದಾಗಿದೆ ಎಂಬುದಾಗಿ ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ.