ನಾಯಕನ ರೇಸ್ ನಲ್ಲಿ ಎಲ್ಲರನ್ನು ಪಕ್ಕಕ್ಕೆ ಇಟ್ಟು, ರೋಹಿತ್ ನಂತರ ನಾಯಕನಾಗುವನು ಈ ಆಟಗಾರ. ಪಾಂಡ್ಯ, ರಾಹುಲ್ ಕೂಡ ಸೈಡ್ ಗೆ ಹೋಗಲೇ ಬೇಕೇ??
ನಾಯಕನ ರೇಸ್ ನಲ್ಲಿ ಎಲ್ಲರನ್ನು ಪಕ್ಕಕ್ಕೆ ಇಟ್ಟು, ರೋಹಿತ್ ನಂತರ ನಾಯಕನಾಗುವನು ಈ ಆಟಗಾರ. ಪಾಂಡ್ಯ, ರಾಹುಲ್ ಕೂಡ ಸೈಡ್ ಗೆ ಹೋಗಲೇ ಬೇಕೇ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸದ್ಯಕ್ಕೆ ಭಾರತೀಯ ಕ್ರಿಕೆಟ್ ತಂಡ ಆಗಸ್ಟ್ 27ರಿಂದ ಪ್ರಾರಂಭವಾಗಲಿರುವ ಏಷ್ಯಾ ಕಪ್ ಹಾಗೂ ಇದೇ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಿನಲ್ಲಿ ಆಸ್ಟ್ರೇಲಿಯಾದ ನೆಲದಲ್ಲಿ ನಡೆಯಲಿರುವ ಟಿ ಟ್ವೆಂಟಿ ವಿಶ್ವಕಪ್ ಗೆ ತಯಾರಿಯನ್ನು ಸಂಪೂರ್ಣವಾಗಿ ಮಾಡಿಕೊಂಡಿದೆ. ಇವೆರಡು ಪ್ರಮುಖ ಟೂರ್ನಮೆಂಟ್ ಗಳನ್ನು ಗೆಲ್ಲುವುದು ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ಗುರಿಯಾಗಿ ಪರಿಣಮಿಸಿದೆ. ಈ ವರ್ಷ ಹಲವಾರು ಬದಲಾವಣೆಗಳನ್ನು ತಂಡಕ್ಕೆ ತರುವಂತೆ ಮಾಡಿದ್ದು ಕೂಡ ಇದೇ ಕಾರಣಕ್ಕಾಗಿ ಎಂಬುದು ಸ್ಪಷ್ಟವಾಗಿದೆ. ಇನ್ನು ಮುಂದಿನ ವರ್ಷ ಏಕದಿನ ವಿಶ್ವಕಪ್ ಕೂಡ ನಡೆಯಲಿದ್ದು ಒಟ್ಟಾರೆಯಾಗಿ ಸತತವಾಗಿ ಬ್ಯಾಕ್ ಟು ಬ್ಯಾಕ್ ಐಸಿಸಿ ಟೂರ್ನಮೆಂಟ್ ಗಳು ನಡೆಯಲಿವೆ ಎಂದು ಹೇಳಬಹುದಾಗಿದೆ.
ವಿರಾಟ್ ಕೊಹ್ಲಿ ರವರ ನಂತರ ಭಾರತೀಯ ಕ್ರಿಕೆಟ್ ತಂಡದ ಪೂರ್ಣ ಪ್ರಮಾಣದ ನಾಯಕನಾಗಿ ರೋಹಿತ್ ಶರ್ಮ ರವರು ಜವಾಬ್ದಾರಿಯನ್ನು ಪಡೆದುಕೊಂಡಿದ್ದರು. ಅವನ ನಾಯಕತ್ವದ ಅವಧಿಯಲ್ಲಿ ಈಗಾಗಲೇ ಭಾರತೀಯ ಕ್ರಿಕೆಟ್ ತಂಡ ಸತತವಾಗಿ ಗೆಲುವುಗಳನ್ನು ಸಾಧಿಸುವ ಮೂಲಕ ದಾಖಲೆಯನ್ನು ಕೂಡ ಬರೆದಿತ್ತು. ಆದರೆ ಮುಂದಿನ ಐಸಿಸಿ ಏಕದಿನ ವಿಶ್ವಕಪ್ ಸಮಯದಲ್ಲಿ ರೋಹಿತ್ ಶರ್ಮ ರವರ ವಯಸ್ಸು 37 ಆಗಿರಬಹುದು. ಒಬ್ಬ ಆಟಗಾರನ ಫಿಟ್ನೆಸ್ ಮೇಲೆ ಆತನನ್ನು ತಂಡದಲ್ಲಿ ಸೇರಿಸಿಕೊಳ್ಳುವುದು ಹಾಗೂ ಬಿಡುವುದು ಟೀಮ್ ಮ್ಯಾನೇಜ್ಮೆಂಟ್ ನಿರ್ಧಾರ ಆಗಿರುತ್ತದೆ. ಹೀಗಾಗಿ ಮುಂದಿನ ವಿಶ್ವಕಪ್ ನಂತರ ರೋಹಿತ್ ಶರ್ಮಾ ರವರು ತಂಡದಿಂದ ಹೊರಹೋಗುವಂತಹ ಪ್ರಮೇಯ ಬಂದರೂ ಕೂಡ ಬರಬಹುದು. ಹೀಗಾಗಿ ಭಾರತೀಯ ಕ್ರಿಕೆಟ್ ತಂಡಕ್ಕೆ ಒಬ್ಬ ದೀರ್ಘಕಾಲದ ನಾಯಕನನ್ನು ಪಟ್ಟಕ್ಕೇರಿಸಬೇಕಾಗುತ್ತದೆ.
ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್ ಅವರಿಗಿಂತಲೂ ಈ ಆಟಗಾರ ಭವಿಷ್ಯದ ನಾಯಕ ಎಂಬುದಾಗಿ ಎಲ್ಲರೂ ಕೂಡ ಬೆಂಬಲಿಸುತ್ತಿದ್ದಾರೆ. ಅದು ಮತ್ತಿನ್ಯಾರು ಅಲ್ಲ ತಂಡದ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್ಮನ್ ಆಗಿ ಕಾಣಿಸಿಕೊಳ್ಳುತ್ತಿರುವ ರಿಷಬ್ ಪಂತ್. ರಿಷಬ್ ಪಂತ್ ರವರು ಈಗಾಗಲೇ ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರವಾಗಿ ಸೇರಿದಂತೆ ಭಾರತೀಯ ಕ್ರಿಕೆಟ್ ತಂಡದ ನಾಯಕನಾಗಿ ಕೂಡ ಹಲವಾರು ಪಂದ್ಯಗಳಲ್ಲಿ ತಂಡವನ್ನು ಪ್ರತಿನಿಧಿಸಿದ್ದಾರೆ. ಈಗಾಗಲೇ ವಿಕೆಟ್ ಹಿಂದೆ ತಂಡವನ್ನು ಮುನ್ನಡೆಸಿರುವ ಮಹೇಂದ್ರ ಸಿಂಗ್ ಧೋನಿ ಅವರಂತೆ ಮತ್ತೊಬ್ಬ ವಿಕೆಟ್ ಕೀಪರ್ ತಂಡದ ನಾಯಕನಾಗಿ ಭವಿಷ್ಯದಲ್ಲಿ ತಂಡವನ್ನು ಮುನ್ನಡೆಸಬಹುದು ಎಂಬುದಾಗಿ ಎಲ್ಲರೂ ಭಾವಿಸುತ್ತಿದ್ದಾರೆ. ಖಂಡಿತವಾಗಿ ರಿಷಬ್ ಒಬ್ಬ ಅಗ್ರೆಸ್ಸಿವ್ ಕ್ಯಾಪ್ಟನ್ ಆಗಿ ಕಾಣಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ.