ಬಹು ನಿರೀಕ್ಷಿತ ಏಷ್ಯಾ ಕಪ್ ತಂಡದಲ್ಲಿ ಭಾರತ ತಂಡ ಎದುರಿಸುತ್ತಿರುವ ಟಾಪ್ ಐದು ಸಮಸ್ಯೆಗಳು ಯಾವ್ಯಾವು ಗೊತ್ತೇ??

ಬಹು ನಿರೀಕ್ಷಿತ ಏಷ್ಯಾ ಕಪ್ ತಂಡದಲ್ಲಿ ಭಾರತ ತಂಡ ಎದುರಿಸುತ್ತಿರುವ ಟಾಪ್ ಐದು ಸಮಸ್ಯೆಗಳು ಯಾವ್ಯಾವು ಗೊತ್ತೇ??

ನಮಸ್ಕಾರ ಸ್ನೇಹಿತರೇ ಆಗಸ್ಟ್ 28 ರಿಂದ ಆರಂಭವಾಗುವ ಬಹು ನಿರೀಕ್ಷಿತ ಏಷ್ಯಾ ಕಪ್ ಗೆ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಆದರೇ ತಂಡದ ಆಯ್ಕೆಯ ಬಗೆ ಈಗಾಗಲೇ ಹಲವಾರು ಅಸಮಾಧಾನಗಳು ಕೇಳಿ ಬರುತ್ತಿವೆ.ತಂಡದ ಅಂತಿಮ ಹನ್ನೊಂದರ ಆಯ್ಕೆಯ ವೇಳೆಯಲ್ಲಿ ಒಬ್ಬ ಆಟಗಾರ ಗಾಯಗೊಂಡರು, ಅವರ ಬದಲಿಗೆ ಸೂಕ್ತ ಆಟಗಾರನಿಲ್ಲ. ಇದು ದೊಡ್ಡ ಟೂರ್ನಿಯಾಗಿರುವ ಏಷ್ಯಾ ಕಪ್ ನಲ್ಲಿ ಖಂಡಿತ ಸಮಸ್ಯೆಯಾಗಲಿದೆ ಎಂದು ಹೇಳಲಾಗಿದೆ. ಬನ್ನಿ ಆಯ್ಕೆಯ ಸಮಯದಲ್ಲಿ ಬಿಸಿಸಿಐ ಮಾಡಿರುವ ತಪ್ಪುಗಳನ್ನು ತಿಳಿಯೋಣ.

1.ಬದಲಿ ಓಪನರ್ ಇಲ್ಲ – ಏಷ್ಯಾ ಕಪ್ ನಲ್ಲಿ ತಂಡದ ಆರಂಭಿಕರಾಗಿ ನಾಯಕ ರೋಹಿತ್ ಶರ್ಮಾ ಹಾಗೂ ಉಪನಾಯಕ ಕೆ.ಎಲ್.ರಾಹುಲ್ ಕಣಕ್ಕಿಳಿಯುವುದು ಪಕ್ಕಾ. ಆದರೇ ಪದೇ ಪದೇ ಗಾಯದ ಸಮಸ್ಯೆಗೆ ಒಳಗಾಗುವ ಇವರಿಬ್ಬರಲ್ಲಿ ಯಾರಾದರೂ ಒಬ್ಬರು ಗಾಯಗೊಂಡು ಹೊರಗುಳಿದರೇ, ಆಗ ತಂಡದಲ್ಲಿ ಮೂರನೇ ಓಪನರ್ ಕೊರತೆ ಕಾಡುತ್ತದೆ. ಇದನ್ನು ತಂಡ ಹೇಗೆ ನಿಭಾಯಿಸುತ್ತದೆ ಎಂಬುದನ್ನು ನೋಡಬೇಕು.

2.ಹೆಚ್ಚು ಸ್ಪಿನ್ನರ್ ಗಳಿಗೆ ಅವಕಾಶ – ಏಷ್ಯಾ ಕಪ್ ನಡೆಯುತ್ತಿರುವುದು ದುಬೈನಲ್ಲಿ. ಸೆಪ್ಟೆಂಬರ್ ಸಮಯದಲ್ಲಿ ಅಲ್ಲಿನ ಪಿಚ್ ಗಳು ವೇಗದ ಬೌಲರ್ ಗೆ ಹೆಚ್ಚಿನ ನೆರವು ನೀಡುತ್ತವೆ. ಆದರೇ ಪ್ರಸ್ತುತ ಟೀಂ ಇಂಡಿಯಾದಲ್ಲಿ ಯುಜವೇಂದ್ರ ಚಾಹಲ್, ರವಿ ಬಿಷ್ಣೋಯಿ, ಆರ್.ಅಶ್ವಿನ್, ರವೀಂದ್ರ ಜಡೇಜಾ ಆಯ್ಕೆಯಾಗಿದ್ದಾರೆ. ಹೆಚ್ಚುವರಿ ಸ್ಪಿನ್ನರ್ ಬದಲು ಒಬ್ಬ ಟಿ 20 ಸ್ಪೆಷಲಿಸ್ಟ್ ವೇಗಿಯನ್ನು ಆಯ್ಕೆ ಮಾಡಬಹುದಿತ್ತು.

3.ಅನನುಭವಿ ಅಶ್ವಿನ್ ಆಯ್ಕೆ – ಆರ್.ಅಶ್ವಿನ್ ಟೀಂ ಇಂಡಿಯಾ ಪರ ಅನುಭವಿ ಸ್ಪಿನ್ನರ್ ಆದರೂ, ಸದ್ಯ ಅವರು ಹೆಚ್ಚು ಟಿ 20 ಕ್ರಿಕೆಟ್ ಆಡುತ್ತಿಲ್ಲ. ಅವರ ಬದಲು ಹೆಚ್ಚು ಟಿ 20 ಕ್ರಿಕೆಟ್ ಆಡಿ ಯಶಸ್ವಿಯಾಗಿರುವ ಅಕ್ಷರ್ ಪಟೇಲ್ ಗೆ ಸ್ಥಾನ ನೀಡಬಹುದಿತ್ತು. ಅಕ್ಷರ್ ಬೌಲಿಂಗ್ ಮಾತ್ರವಲ್ಲದೇ ಬ್ಯಾಟಿಂಗ್ ನಲ್ಲಿಯೂ ಸಹ ಉಪಯುಕ್ತ ಕೊಡುಗೆ ನೀಡುವ ಸಾಮರ್ಥ್ಯ ಹೊಂದಿದ್ದಾರೆ.

4.ದಿನೇಶ್ ಕಾರ್ತಿಕ್ ಗೆ ಕ್ರಮಾಂಕದ ಸಮಸ್ಯೆ – ಹಿರಿಯ ಆಟಗಾರ ದಿನೇಶ್ ಕಾರ್ತಿಕ್ ರನ್ನು ಫಿನೀಶರ್ ಕಾರಣಕ್ಕೆ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಆದರೇ ಇವರು ಆಡುವ ಅಂತಿಮ ಹನ್ನೊಂದರಲ್ಲಿ ಸ್ಥಾನ ಪಡೆಯುವುದು ಅನುಮಾನ. ರೋಹಿತ್ ರಿಂದ ಆರಂಭವಾಗಿ, ಹಾರ್ದಿಕ್ ಪಾಂಡ್ಯ ತನಕ ಅಗ್ರ ಕ್ರಮಾಂಕದ ಯಾವೊಬ್ಬ ಆಟಗಾರರನ್ನು ತಂಡದಿಂದ ಕೈ ಬಿಡಲು ಸಾಧ್ಯವಿಲ್ಲ. ಹೀಗಿದ್ದಾಗ ದಿನೇಶ್ ಕಾರ್ತಿಕ್ ಆಯ್ಕೆ ಮಾಡಿದರೇ ನಾಲ್ವರು ತಜ್ಞ ಬೌಲರ್ ಜೊತೆ ಕಣಕ್ಕಿಳಿಯಬೇಕಾಗುತ್ತದೆ. ಇದು ಸಹ ತಲೆನೋವಿಗೆ ಕಾರಣವಾಗುತ್ತದೆ.

5.ಪಾರ್ಟ್ ಟೈಂ ಬೌಲರ್ ಗಳ ಕೊರತೆ – ಮೊದಲು ಟೀಂ ಇಂಡಿಯಾದಲ್ಲಿ ಹತ್ತು ಜನ ಬೌಲರ್ ಗಳು ಇರುತ್ತಿದ್ದರು. ಆದರೇ ಈಗ ಪಾರ್ಟ್ ಟೈಂ ಬೌಲರ್ ಗಳ ಕೊರತೆ ಎದ್ದು ಕಾಡುತ್ತಿದೆ. ರೋಹಿತ್ ರಿಂದ ಶುರುವಾಗಿ ಸೂರ್ಯ ಕುಮಾರ್ ಯಾದವ್ ತನಕ ಯಾರು ಬೌಲಿಂಗ್ ಮಾಡುತ್ತಿಲ್ಲ. ಹೀಗಾಗಿ ಇದು ಸಹ ಸಮಸ್ಯೆಯಾಗಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.