ಬೆಂಗಳೂರು ಬುಲ್ಸ್ ತಂಡಕ್ಕೆ ಆಯ್ಕೆಯಾಗಿರುವ ಈ ನೀರಜ್ ನರ್ವಾಲ್ ನಿಜಕ್ಕೂ ಯಾರು ಗೊತ್ತೇ?? ಈತನ ಹಿನ್ನೆಲೆ ಏನು ಗೊತ್ತೇ?
ಬೆಂಗಳೂರು ಬುಲ್ಸ್ ತಂಡಕ್ಕೆ ಆಯ್ಕೆಯಾಗಿರುವ ಈ ನೀರಜ್ ನರ್ವಾಲ್ ನಿಜಕ್ಕೂ ಯಾರು ಗೊತ್ತೇ?? ಈತನ ಹಿನ್ನೆಲೆ ಏನು ಗೊತ್ತೇ?
ನಮಸ್ಕಾರ ಸ್ನೇಹಿತರೆ ಈಗಾಗಲೇ ಈ ಬಾರಿ ಪ್ರೊ ಕಬಡ್ಡಿ ಲೀಗ್ ನ ಭರ್ಜರಿ ಆಕ್ಷನ್ ಮುಗಿದಿದ್ದು ಬೆಂಗಳೂರು ಬುಲ್ಸ್ ತಂಡದ ಅಭಿಮಾನಿಗಳಿಗೆ ಒಂದು ಬೇಸರದ ವಿಚಾರವೂ ಕೂಡ ಈಗಾಗಲೇ ಬಂದು ತಲುಪಿದೆ ಎಂಬುದಾಗಿ ನಿಮಗೆ ತಿಳಿದಿದೆ. ಹೌದು ಹಲವಾರು ಸೀಸನ್ ಗಳಿಂದ ಬೆಂಗಳೂರು ಬುಲ್ಸ್ ತಂಡದ ನಾಯಕನಾಗಿ ತಂಡ ಗೆಲುವಿನ ಮೂಲ ಗುರುತಾಗಿ ಕಾಣಿಸಿಕೊಂಡಿದ್ದ ಪ್ರೊ ಕಬಡ್ಡಿ ಲೀಗ್ ನ ಅತ್ಯಂತ ಬಲಿಷ್ಠ ರೈಡರ್ ಆಗಿ ಕಾಣಿಸಿಕೊಂಡಿದ್ದ ಪವನ್ ಶಹ್ರಾವತ್ ಬೆಂಗಳೂರು ಬುಲ್ಸ್ ತಂಡದಿಂದ ಹೊರ ಹೋಗಿದ್ದು ಈಗಾಗಲೇ ತಮಿಳು ತಲೈವಾಸ್ ತಂಡದ ಆಟಗಾರನಾಗಿ ದಾಖಲೆಯ ಮೊತ್ತಕ್ಕೆ ಸೇಲ್ ಆಗಿದ್ದಾರೆ.
ಇನ್ನು ಇದನ್ನು ಬೇಸರದಿಂದ ತಂಡದ ಕೋಚ್ ಕೂಡ ಕಣ್ಣೀರು ಹಾಕಿಕೊಂಡು ಹೇಳಿದ್ದರು. ಸದ್ಯಕ್ಕೆ ಬೆಂಗಳೂರು ಬುಲ್ಸ್ ತಂಡದ ಕುರಿತಂತೆ ಗಮನವನ್ನು ಹರಿಸುವುದಾದರೆ ತಂಡದಲ್ಲಿ ಸ್ಟಾರ್ ರೈಡರ್ ಆಗಿರುವ ವಿಕಾಸ್ ಖಂಡೋಲಾ ಅವರ ಸೇರ್ಪಡೆಯಾಗಿದೆ. ಇವರೊಬ್ಬ ಅತ್ಯುತ್ತಮ ಲೆಫ್ಟ್ ರೈಡರ್ ಆಗಿದ್ದಾರೆ. ಇವರ ಜೊತೆಗೆ ಮತ್ತೊಬ್ಬ ಸ್ಟಾರ್ ಆಟಗಾರ ತಂಡದಲ್ಲಿ ಆಯ್ಕೆಯಾಗಿದ್ದಾರೆ ಅವರೇ ನೀರಜ್ ನರ್ವಾಲ್. ನೀರಜ್ ನರ್ವಾಲ್ ರವರು ಕಳೆದ ಬಾರಿ ಚಾಂಪಿಯನ್ ಆಗಿರುವ ಡೆಲ್ಲಿ ತಂಡದಲ್ಲಿ 19 ಪಂದ್ಯಗಳನ್ನು ಆಡಿದ್ದಾರೆ ಹಾಗೂ ಗೆಲುವಿನ ರೂವಾರಿಗಳಲ್ಲಿ ಕೂಡ ಒಬ್ಬರಾಗಿದ್ದಾರೆ. ಹೀಗಾಗಿ ಅವರನ್ನು ಈ ಬಾರಿ ಬೆಂಗಳೂರು ಬುಲ್ಸ್ ತಂಡದಲ್ಲಿ ಖರೀದಿಸಲಾಗಿದೆ.
ವಿಕಾಸ್ ಖಂಡೋಲಾ ಅವರ ಹಾಗೆ ನೀರಜ್ ನರ್ವಾಲ್ ಕೂಡ ಎಡಬದಿಯ ರೈಡರ್ ಆಗಿದ್ದಾರೆ. ಕಳೆದ ಬಾರಿ ದಬಾಂಗ್ ಡೆಲ್ಲಿ ತಂಡದಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿರುವ ಇವರು ಬಿಹಾರ್ ಮೂಲದ ಆಟಗಾರನಾಗಿದ್ದಾರೆ. ಖಂಡಿತವಾಗಿ ಈ ಬಾರಿ ಪವನ್ ಅವರ ಸ್ಥಾನವನ್ನು ತುಂಬಲು ಈ ಆಟಗಾರ ಪ್ರಯತ್ನ ಪಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ಹೇಳಲಾಗುತ್ತಿದೆ. ಬೆಂಗಳೂರು ಬುಲ್ಸ್ ತಂಡದ ಅತ್ಯಂತ ಪ್ರಮುಖ ಭಾಗವಾಗಿ ಇವರು ಕಾಣಿಸಿಕೊಳ್ಳಲಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ.