ಎಷ್ಟೇ ವಿಫಲವಾದರೂ ಆವೇಶ್ ಖಾನ್ ಗೆ ಅವಕಾಶ ನೀಡುತ್ತಿರುವ ಬಗ್ಗೆ ಸಂಜಯ್ ಗರಂ: ಯುವ ಬೌಲರ್ ಗೆ ಅವಕಾಶ ನೀಡಿ ಎಂದದ್ದು ಯಾರಿಗೆ ಗೊತ್ತೇ??

ಎಷ್ಟೇ ವಿಫಲವಾದರೂ ಆವೇಶ್ ಖಾನ್ ಗೆ ಅವಕಾಶ ನೀಡುತ್ತಿರುವ ಬಗ್ಗೆ ಸಂಜಯ್ ಗರಂ: ಯುವ ಬೌಲರ್ ಗೆ ಅವಕಾಶ ನೀಡಿ ಎಂದದ್ದು ಯಾರಿಗೆ ಗೊತ್ತೇ??

ನಮಸ್ಕಾರ ಸ್ನೇಹಿತರೆ ಈಗಾಗಲೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ವಿದೇಶಿ ಸರಣಿಗಳಲ್ಲಿ ಯುವ ಬೌಲರ್ ಆಗಿರುವ ಆವೇಷ್ ಖಾನ್ ಅವರಿಗೆ ಮೇಲಿಂದ ಮೇಲೆ ಅವಕಾಶಗಳನ್ನು ನೀಡಲಾಗುತ್ತಿದೆ. ಐಪಿಎಲ್ ನಲ್ಲಿ ತಮ್ಮನ್ನು ತಾವು ಸಾಬೀತುಪಡಿಸಿಕೊಂಡು ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿರುವ ಯುವ ಬೌಲರ್ ಇತ್ತೀಚೆಗೆ ನಡೆದ ನಾಲ್ಕು ಟಿ ಟ್ವೆಂಟಿ ಪಂದ್ಯಗಳಲ್ಲಿ ಆಡಿರುವ ಅವರು ಅತ್ಯಂತ ಕಳಪೆ ಪ್ರದರ್ಶನನ್ನು ದಾಖಲಿಸಿದ್ದಾರೆ. ಆದರೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಆಗಿರುವ ಸಂಜಯ್ ಮಾಂಜ್ರೆಕರ್ ರವರು ಆವಿಷ್ ಖಾನ್ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳುವುದರ ವಿರುದ್ಧವಾಗಿದ್ದಾರೆ ಎಂದು ಹೇಳಬಹುದಾಗಿದೆ.

ಯಾಕೆಂದರೆ ಈ ಏಷ್ಯಾ ಕಪ್ ನಲ್ಲಿ ಕೂಡ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದ್ದು ಮುಂದಿನ ಟಿ20 ವಿಶ್ವಕಪ್ ನಲ್ಲಿ ಕೂಡ ಅವರನ್ನು ಆಯ್ಕೆ ಮಾಡಿಕೊಂಡರೆ ಆಶ್ಚರ್ಯ ಪಡಬೇಕಾಗಿಲ್ಲ ಆದರೆ ಅತ್ಯಂತ ಕಳಪೆ ಪ್ರದರ್ಶನವನ್ನು ನೀಡುತ್ತಿರುವ ಆವೇಷ್ ಖಾನ್ ರವರ ಬದಲಾಗಿ ಹಲವಾರು ಯುವ ಆಟಗಾರರ ಆಯ್ಕೆ ಕೂಡ ನಮ್ಮ ಭಾರತೀಯ ಆಯ್ಕೆಗಾರರ ಮುಂದಿದೆ ಎಂಬುದಾಗಿ ಅವರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಇತ್ತೀಚಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಮತ್ತೊಬ್ಬ ಯುವ ವೇಗಿ ಅತ್ಯದ್ಭುತ ಪ್ರದರ್ಶನವನ್ನು ನೀಡುತ್ತಿದ್ದಾರೆ. ಇವರು ಕೂಡ ಐಪಿಎಲ್ ನಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡಿ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದವರು. ಎಲ್ಲಕ್ಕಿಂತ ಹೆಚ್ಚಾಗಿ ಮೊನ್ನೆಯಷ್ಟು ನಡೆದಿರುವ ವೆಸ್ಟ್ ಇಂಡೀಸ್ ವಿರುದ್ಧದ ಕೊನೆಯ ಟಿ20 ಪಂದ್ಯದಲ್ಲಿ ಮೂರು ವಿಕೆಟ್ಗಳನ್ನು ಕಿತ್ತು ಅಂತರಾಷ್ಟ್ರೀಯ ಪಂದ್ಯದಲ್ಲಿ ಯಾವುದೇ ಒತ್ತಡವಿಲ್ಲದೆ ಆಡಬಲ್ಲೆ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಹೌದು ನಾವು ಮಾತನಾಡುತ್ತಿರುವುದು ಅರ್ಷದೀಪ್ ಸಿಂಗ್ ರವರ ಕುರಿತಂತೆ. ಈಗಾಗಲೇ ಕೊನೆಯ ಓವರ್ ಗಳಲ್ಲಿ ಹೇಗೆ ವಿಕೆಟ್ ಅನ್ನು ಕವಳಿಸಬೇಕು ಮತ್ತು ರನ್ ಅನ್ನು ಹೇಗೆ ನಿಯಂತ್ರಿಸಬೇಕು ಎಂಬುದರ ಕುರಿತಂತೆ ಇತ್ತೀಚಿಗಷ್ಟೇ ನಡೆದಿರುವ ಸರಣಿಯ ಪಂದ್ಯಗಳಲ್ಲಿ ಅರ್ಶದೀಪ್ ಸಿಂಗ್ ಸಾಬೀತುಪಡಿಸಿದ್ದಾರೆ. ಹೀಗಾಗಿ ಮಾಜಿ ಆಟಗಾರ ಸಂಜಯ್ ಮಾಂಜ್ರೆಕರ್ ಅವರ ಪ್ರಕಾರ ಈಗಿರುವ ಎಲ್ಲಾ ಯುವ ಆಟಗಾರರಿಗಿಂತ ಅಂದರೆ ತಂಡದಲ್ಲಿ ಆಯ್ಕೆ ಆಗಿರುವ ಆವೇಷ್ ಖಾನ್ ಅವರಿಗಿಂತ ಅರ್ಷದೀಪ್ ಸಿಂಗ್ ಅವರು ಮುಂದಿದ್ದಾರೆ ಎಂಬುದಾಗಿ ಅಭಿಪ್ರಾಯಪಟ್ಟಿದ್ದಾರೆ.