ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಬಿಗ್ ನ್ಯೂಸ್: ರಾಹುಲ್ ಗೆ ಕೊನೆಗೂ ಸಿಕ್ತು ಸಿಹಿ ಸುದ್ದಿ: ಕೆ ಎಲ್ ರವರನ್ನು ಕೈ ಬಿಡದ ದ್ರಾವಿಡ್. ಪಾಂಡ್ಯಗೆ ಮತ್ತೊಂದು ಶಾಕ್. ಏನು ಗೊತ್ತೇ??

ಬಿಗ್ ನ್ಯೂಸ್: ರಾಹುಲ್ ಗೆ ಕೊನೆಗೂ ಸಿಕ್ತು ಸಿಹಿ ಸುದ್ದಿ: ಕೆ ಎಲ್ ರವರನ್ನು ಕೈ ಬಿಡದ ದ್ರಾವಿಡ್. ಪಾಂಡ್ಯಗೆ ಮತ್ತೊಂದು ಶಾಕ್. ಏನು ಗೊತ್ತೇ??

3,751

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಏಷ್ಯಾ ಕಪ್ ತಂಡಕ್ಕೆ ಹಲವಾರು ದಿನಗಳಿಂದ ಇಂಜುರಿ ಅನಾರೋಗ್ಯ ಹಾಗೂ ಫಿಟ್ನೆಸ್ ವಿಚಾರದಿಂದಾಗಿ ತಂಡದಿಂದ ಹೊರಗೆ ಉಳಿದಿದ್ದ ಕೆ ಎಲ್ ರಾಹುಲ್ ರವರಿಗೆ ತಂಡದಲ್ಲಿ ಸ್ಥಾನವನ್ನು ನೀಡಲಾಗಿದೆ. ಈ ಮೂಲಕ ಅವರನ್ನು ಟಿ 20 ವಿಶ್ವಕಪ್ ತಂಡಕ್ಕೆ ಕರೆದುಕೊಳ್ಳಲು ಒಂದು ರಹದಾರಿಯನ್ನು ಹಾಕಿದಂತಾಗಿದೆ. ಇನ್ನು ಇದಕ್ಕೂ ಮುಂದೆ ಹೋಗಿ ಕೋಚ್ ರಾಹುಲ್ ದ್ರಾವಿಡ್ ರವರು ಕೆಎಲ್ ರಾಹುಲ್ ರವರಿಗೆ ಏಷ್ಯಾ ಕಪ್ ಪ್ರಾರಂಭ ಆಗುವ ಮುನ್ನವೇ ಒಂದು ಉತ್ತಮ ಜವಾಬ್ದಾರಿಯನ್ನು ನೀಡಿದ್ದಾರೆ ಎಂದು ಹೇಳಬಹುದಾಗಿದೆ.

Follow us on Google News

ಮುಂದಿನ ನಾಯಕ ಆಗುವ ಅಭಿಲಾಷೆಯನ್ನು ವ್ಯಕ್ತಪಡಿಸಿದ್ದ ಪಾಂಡ್ಯ ಅವರಿಗೆ ಇದೊಂದು ಶಾ’ಕಿಂಗ್ ವಿಚಾರದಲ್ಲಿ ತಪ್ಪಾಗಲಾರದು. ಹೌದು ಗೆಳೆಯರೇ ಇದೆ ಆಗಸ್ಟ್ 18 ರಂದು ಪ್ರಾರಂಭವಾಗಲಿರುವ ಜಿಂಬಾಬ್ವೆ ವಿರುದ್ಧದ ಸರಣಿಗೆ ಪಾಂಡ್ಯ ಅವರನ್ನು ತಂಡದಿಂದ ಕೈ ಬಿಡಲಾಗಿದ್ದು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈಗಾಗಲೇ ಈ ಸರಣಿಗೆ ಶಿಖರ್ ಧವನ್ ರವರನ್ನು ನಾಯಕನನ್ನಾಗಿ ನೇಮಿಸಲಾಗಿತ್ತು ಆದರೆ ಈಗ ನಾಯಕನ ಸ್ಥಾನವನ್ನು ಕೆಎಲ್ ರಾಹುಲ್ ರವರಿಗೆ ವರ್ಗಾಯಿಸಲಾಗಿದೆ ಎಂಬುದಾಗಿ ತಿಳಿದು ಬಂದಿದೆ. ಈ ಮೂಲಕ ರಾಹುಲ್ ದ್ರಾವಿಡ್ ರವರು ತಮ್ಮ ಆಟಗಾರನ ಸಂಪೂರ್ಣ ಬೆಂಬಲಕ್ಕೆ ನಿಂತಿದ್ದಾರೆ ಎಂದು ಪಾರದರ್ಶಕ ರೀತಿಯಲ್ಲಿ ಕಂಡುಬರುತ್ತದೆ.

ವೆಸ್ಟ್ ಇಂಡೀಸ್ ಏಕದಿನ ಸರಣಿಯಲ್ಲಿ ನಾಯಕನಾಗಿ ತನ್ನ ಜವಾಬ್ದಾರಿಯನ್ನು ನಿರ್ವಹಿಸಿದ ಶಿಖರ ಧವನ್ ರವರಿಗೆ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಕೂಡ ನಾಯಕನ ಜವಾಬ್ದಾರಿಯನ್ನು ನೀಡಲಾಗಿತ್ತು. ಆದರೆ ಏಷ್ಯಾಕಪ್ ನಲ್ಲಿ ಕೆ ಎಲ್ ರಾಹುಲ್ ರವರಿಗೆ ಉಪನಾಯಕನ ಸ್ಥಾನವನ್ನು ನೀಡಿರುವ ಕಾರಣದಿಂದಾಗಿ ಹಾಗೂ ಇದುವರೆಗೂ ಕೆಎಲ್ ರಾಹುಲ್ ರವರು ಈ ವರ್ಷದಲ್ಲಿ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳನ್ನು ಇಂಜುರಿ ಅನಾರೋಗ್ಯ ಹಾಗೂ ಫಿಟ್ನೆಸ್ ವಿಚಾರದ ಕಾರಣದಿಂದಾಗಿ ಆಡದೇ ಇರುವ ಹಿನ್ನಲೆಯಲ್ಲಿ ಅವರಿಗೆ ಇದೊಂದು ಅಭ್ಯಾಸ ಅಥವಾ ಮತ್ತೆ ತಮ್ಮನ್ನು ತಾವು ಲಯಕೆ ತಂದಿಟ್ಟುಕೊಳ್ಳಲು ಒಂದು ಅವಕಾಶ ಎಂಬ ರೀತಿಯಲ್ಲಿ ನಾಯಕನ ಪಟ್ಟವನ್ನು ಕಟ್ಟಲಾಗಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳೇನು ತಪ್ಪದೆ ತಿಳಿಸಿ.