ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಮಾಧ್ಯಮಗಳು ಪ್ರಮೋಷನ್ ನೆಪದಲ್ಲಿ ಹಣ ತಿಂದು ಸುಳ್ಳು ಹೇಳುತ್ತಿರುವಾಗ ಅಮಿರ್ ಸಿನಿಮಾ ಗೆ ಬಿಗ್ ಶಾಕ್: ಬಾಲಿವುಡ್, ಮಾಧ್ಯಮಗಳು ಬೆಂಬಲಕ್ಕೆ ನಿಂತರೂ ಏನಾಗಿದೆ ಗೊತ್ತಾ??

154

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಬಾಲಿವುಡ್ ಚಿತ್ರರಂಗದಲ್ಲಿ ಹಲವಾರು ದಿನಗಳಿಂದ ಹಲವಾರು ಚಿತ್ರಗಳನ್ನು ಬಾಯ್ಕಾಟ್ ಮಾಡುವ ಮೂಲಕ ವಿವಿಧ ಕಾರಣಗಳನ್ನು ನೀಡಿ ಬಾಲಿವುಡ್ ಚಿತ್ರಗಳಿಗೆ ಸೋಲಿನ ರುಚಿ ತೋರಿಸಲಾಗುತ್ತಿದೆ. ಅದರಲ್ಲಿಯೂ ಸುಶಾಂತ್ ಸಿಂಗ್ ರಜಪೂತ್ರ ಅವರನ್ನು ನಾವು ಕಳೆದುಕೊಂಡ ಮೇಲೆ ಹಲವಾರು ಚಿತ್ರಗಳು ಸೋಲಿನ ರುಚಿ ಕಂಡಿವೆ. ಇನ್ನು ದೇಶದ ವಿಚಾರಕ್ಕೆ ಬಂದ ಹಲವಾರು ಸೆಲಬ್ರೆಟಿಗಳಿಗೆ ಬಿಸಿ ಮುಟ್ಟಿಸಲು ಟ್ವಿಟರ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬಾಯ್ಕಾಟ್ ಮಾಡುವ ಮೂಲಕ ಹಲವಾರು ಸಿನಿಮಾಗಳಿಗೆ ಈಗಾಗಲೇ ಚೆಕ್ ಮೇಟ್ ನೀಡಿ ಸೆಲೆಬ್ರೆಟಿ ಗಳಿಗೆ ಇನ್ನಾದ್ರೂ ಬುದ್ದಿ ಕಲಿಯುವಂತೆ ಮಾಡಲಾಗಿದೆ.

ಇನ್ನು ಹಲವಾರು ದಿನಗಳಿಂದ ಸಾಕಷ್ಟು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದ ಅಮೀರ್ ಖಾನ್ ರವರ ಬಹು ನಿರೀಕ್ಷಿತ ಚಿತ್ರ ಲಾಲ್ ಸಿಂಗ್ ಚಡ್ಡ ಚಿರಕ್ಕೆ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಜನ ಚಿತ್ರ ನೋಡ ಬೇಡಿ, ದೇಶದ ಕುರಿತಾದ ವಿವಾದಾತ್ಮಕ ಹೇಳಿಕೆಗಳನ್ನು ನೀಡಿರುವ ಇವರಿಗೆ ಬುದ್ಧಿ ಕಲಿಸುವ ಸಮಯ ಬಂದಿದೆ ಎಂದು ಅಭಿಯಾನಗಳನ್ನು ಆರಂಭಿಸಿದ್ದರು. ಈ ಅಭಿಯಾನ ಎಷ್ಟರ ಮಟ್ಟಕ್ಕೆ ದೊಡ್ಡದಾಗಿತ್ತು ಎಂದರೆ ಖುದ್ದು ಅಮೀರ್ ಖಾನ್ ರವರು ಕೂಡ ತಮ್ಮ ಹೇಳಿಕೆಗಳ ಕುರಿತು ಸ್ಪಷ್ಟನೆ ನೀಡಿ ಚಿತ್ರವನ್ನು ನೋಡುವಂತೆ ಮನವಿ ಮಾಡಿದ್ದರು. ಆದರೂ ಯಾರು ಕೂಡ ಚಿತ್ರ ನೋಡುವುದಿಲ್ಲ ಎಂದು ತಮ್ಮ ಅಭಿಯಾನವನ್ನು ಮುಂದುವರಿಸಿದರು. ಹೀಗೆ ಬಾಯ್ಕಾಟ್ ಟ್ರೆಂಡಿಂಗ್ ನಲ್ಲಿ ಇರುವಾಗಲೇ ಕೆಲವು ಮಾಧ್ಯಮಗಳು ಅಮೀರ್ ಖಾನ್ ಚಿತ್ರ ಮುಂಗಡ ಬುಕ್ಕಿಂಗ್ ನಲ್ಲಿ ದಾಖಲೆಯಲ್ಲಿ ನಿರ್ಮಿಸಿದೆ ಎಂದು ಹಲವಾರು ಸುದ್ದಿಗಳನ್ನು ಹಬ್ಬಿಸಿದ್ದರು.

ಆದರೆ ಕಳೆದ ಸಿನಿಮಾಗಳಿಗೆ ಹೋಲಿಸಿದರೆ ಶೇಕಡ 85ಕ್ಕೂ ಹೆಚ್ಚು ಮುಂಗಡ ಬುಕಿಂಗ್ ನಡೆದೇ ಇರಲಿಲ್ಲ, ಹೌದು ಅಂದಾಜು ಕೇವಲ 15 ರಿಂದ 20 ರಷ್ಟು ಸೀಟುಗಳು ಭರ್ತಿಯಾಗಿದ್ದವು. ಆದರೂ ಕೂಡ ಈ ಸಿನಿಮಾದ ಬೆಂಬಲಕ್ಕೆ ಹಲವಾರು ಬಾಲಿವುಡ್ ಸೆರೆಬ್ರೆಟಿಗಳು ನಿಂತು ಚಿತ್ರವನ್ನು ಗೆಲ್ಲಿಸುವ ಪಣ ತೊಟ್ಟಿದ್ದರು. ಹಾಗೂ ವಿವಿಧ ರೀತಿಯಲ್ಲಿ ಉತ್ತಮ ವಿಮರ್ಶೆಗಳನ್ನು ನೀಡುವ ಮೂಲಕ ಜನರು ಚಿತ್ರವನ್ನು ನೋಡುವಂತೆ ಪ್ರೋತ್ಸಾಹಿಸುವ ಪ್ರಯತ್ನ ಮಾಡಿದ್ದರು. ಆದರೆ ಕೆಲವೇ ವರ್ಷಗಳ ಹಿಂದೆ ಬಿಡುಗಡೆಯಾದ ಮೊದಲ ದಿನವೇ ನೂರಾರು ಕೋಟಿ ಬಾಚುತ್ತಿದ್ದ ಅಮೀರ್ ಖಾನ್ ರವರ ಚಿತ್ರ ಇಂದು ಬಿಡುಗಡೆಯಾದ ಮೊದಲ ದಿನ ಕೇವಲ ಬಾಕ್ಸ್ ಆಫೀಸ್ ಲೆಕ್ಕಾಚಾರದ ಪ್ರಕಾರ 12 ಕೋಟಿ ಗಳಿಸಿರುವ ಸಾಧ್ಯತೆ ಇದೆ. ನೂರಾರು ಕೋಟಿ ಬಜೆಟ್ ಹಾಕಿ ನಿರ್ಮಾಣ ಮಾಡಿರುವ ಈ ಸಿನಿಮಾ ಮೊದಲ ದಿನವೇ ಫ್ಲಾಪ್ ಲಿಸ್ಟಿಗೆ ಸೇರಿಕೊಂಡಿದೆ. ಇನ್ನು ಹೆಚ್ಚು ಎಂದರೆ ಈ ಚಿತ್ರ 50 ರ ಗಡಿ ದಾಟುವುದು ಕೂಡ ಇದೀಗ ಅನುಮಾನವಾಗಿದೆ.

Get real time updates directly on you device, subscribe now.