ದಿನೇಶ್ ಕಾರ್ತಿಕ್ ಕುರಿತು ಕಾಲ್ಕೆರೆದು ಬಂದ ಸಂಜು ಸ್ಯಾಮ್ಸನ್ ಅಭಿಮಾನಿಗಳು. ಯಾಕೆ ಅಂತೇ ಗೊತ್ತೇ?? ನೆನಪಿರಲಿ ಈತ ಆರ್ಸಿಬಿಯವ.

ದಿನೇಶ್ ಕಾರ್ತಿಕ್ ಕುರಿತು ಕಾಲ್ಕೆರೆದು ಬಂದ ಸಂಜು ಸ್ಯಾಮ್ಸನ್ ಅಭಿಮಾನಿಗಳು. ಯಾಕೆ ಅಂತೇ ಗೊತ್ತೇ?? ನೆನಪಿರಲಿ ಈತ ಆರ್ಸಿಬಿಯವ.

ನಮಸ್ಕಾರ ಸ್ನೇಹಿತರೆ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ವೆಸ್ಟ್ ಇಂಡೀಸ್ ಪ್ರವಾಸದ ನಂತರ ಬಿಸಿಸಿಐ ಅಧಿಕೃತವಾಗಿ ಈ ತಿಂಗಳ 27 ನೇ ತಾರೀಕಿನಂದು ಪ್ರಾರಂಭ ಆಗಲಿರುವ ಏಷ್ಯಾಕಪ್ ತಂಡವನ್ನು ಅಧಿಕೃತವಾಗಿ ಘೋಷಿಸಿದೆ. ಆಗಸ್ಟ್ 28 ರಂದು ಏಷ್ಯಾ ಕಪ್ ಟೂರ್ನಮೆಂಟ್ ನ ಪ್ರಥಮ ಪಂದ್ಯವಾಗಿ ಭಾರತ ತಂಡ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಇನ್ನು ಈ ತಂಡದಲ್ಲಿ ರಿಷಬ್ ಪಂತ್ ಅವರ ಜೊತೆಗೆ ಮತ್ತೊಬ್ಬ ವಿಕೆಟ್ ಕೀಪರ್ ಹಾಗೂ ಫಿನಿಶರ್ ಜವಾಬ್ದಾರಿಯ ಸಲುವಾಗಿ ದಿನೇಶ್ ಕಾರ್ತಿಕ್ ರವರನ್ನು ಕೂಡ ಆಯ್ಕೆ ಮಾಡಿದ್ದಾರೆ.

ಆದರೆ ಇದು ಮತ್ತೊಬ್ಬ ಸ್ಟಾರ್ ಕ್ರಿಕೆಟಿಗನ ಅಭಿಮಾನಿಗಳಿಗೆ ಅಸಮಾಧಾನವನ್ನು ವ್ಯಕ್ತಪಡಿಸಿದೆ. ಹೌದು ಅದಿನ್ಯಾರು ಅಲ್ಲ ಸಂಜು ಸ್ಯಾಮ್ಸನ್ ಅವರ ಅಭಿಮಾನಿಗಳಿಗೆ. ಹೌದು ಸಂಜು ಸ್ಯಾಮ್ಸನ್ ಒಬ್ಬ ಪ್ರತಿಭಾನ್ವಿತ ಕ್ರಿಕೆಟಿಗ ಅನ್ನೋದರಲ್ಲಿ ಯಾವ ಅನುಮಾನವೂ ಇಲ್ಲ. ಆದರೆ ಸಂಜು ಸ್ಯಾಮ್ಸನ್ ಅವರಿಗೆ ಇತ್ತೀಚಿನ ದಿನಗಳಲ್ಲಿ ಬಿಸಿಸಿಐ ಅವಕಾಶ ನೀಡುವುದು ಕಡಿಮೆಯಾಗಿಬಿಟ್ಟಿದೆ ಆದರೆ ನೀಡಿರುವಂತಹ ಅವಕಾಶವನ್ನು ಕೂಡ ಅವರ ಸದುಪಯೋಗಪಡಿಸಿಕೊಂಡಿದ್ದಾರೆ ಆದರೂ ಕೂಡ ತಂಡದಲ್ಲಿ ಅವಕಾಶವನ್ನು ನೀಡುತ್ತಿಲ್ಲ ಎಂಬುದಾಗಿ ಅವರ ಅಭಿಮಾನಿಗಳು ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ.

ಅದರಲ್ಲೂ ಇತ್ತೀಚಿಗಷ್ಟೇ ದಿನೇಶ್ ಕಾರ್ತಿಕ್ ಹಾಗೂ ಸಂಜು ಸ್ಯಾಮ್ಸನ್ ಇಬ್ಬರು ಕೂಡ ಆಡಿರುವ ಪಂದ್ಯಗಳ ಪರ್ಫಾಮೆನ್ಸ್ ನ ಅಂಕಿ ಅಂಶಗಳನ್ನು ಗಮನಿಸುವುದಾದರೆ 2022ರಲ್ಲಿ ದಿನೇಶ್ ಕಾರ್ತಿಕ್ ರವರು 21 ರನ್ ಪ್ರತಿ ಮ್ಯಾಚಿನ ಆವರೇಜ್ ನಲ್ಲಿ 133 ರನ್ನುಗಳನ್ನು ಗಳಿಸಿದ್ದಾರೆ. ಅದೇ ಇತ್ತ ಸಂಜು ಸಾಮ್ಸನ್ ರವರು 44ರ ಪ್ರತಿ ಮ್ಯಾಚ್ ಆವರೇಜ್ ನಲ್ಲಿ 160 ರನ್ನುಗಳನ್ನು ಗಳಿಸಿದ್ದಾರೆ. ಇಷ್ಟಿದ್ದರೂ ಕೂಡ ಸಂಜು ಅವರನ್ನು ತಂಡದಿಂದ ಹೊರಹಾಕಿ ದಿನೇಶ್ ಕಾರ್ತಿಕ್ ರವರನ್ನು ಆಯ್ಕೆ ಮಾಡಿದ್ದಾರೆ ಎಂಬುದಾಗಿ ಅಭಿಮಾನಿಗಳು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಇಷ್ಟು ಮಾತ್ರವಲ್ಲದೆ ಔಟ್ ಆಫ್ ಫಾರ್ಮ್ ನಲ್ಲಿರುವ ಶ್ರೇಯಸ್ ಅಯ್ಯರ್ ಅವರನ್ನು ತಂಡದ ಬ್ಯಾಕಪ್ ಆಟಗಾರನಾಗಿ ಆಯ್ಕೆ ಮಾಡಿದ್ದಾರೆ ಆದರೆ ಸಂಜು ಅವರಿಗೆ ಅಲ್ಲಿ ಕೂಡ ಸ್ಥಾನವಿಲ್ಲ ಎಂಬುದು ಮತ್ತೊಂದು ಬೇಸರದ ವಿಚಾರವಾಗಿದೆ.