ಏಷ್ಯಾ ಕಪ್ ಗೆ ಆಯ್ಕೆಯಾಗಿದ್ದರೂ ಕೂಡ ಭಾರತ ತಂಡದಲ್ಲಿ ರಾಹುಲ್ ಗೆ ಕಾದಿದೆ ಶಾಕ್: ಆಡುವುದು ಅನುಮಾನ ಯಾಕೆ ಗೊತ್ತೇ??
ಏಷ್ಯಾ ಕಪ್ ಗೆ ಆಯ್ಕೆಯಾಗಿದ್ದರೂ ಕೂಡ ಭಾರತ ತಂಡದಲ್ಲಿ ರಾಹುಲ್ ಗೆ ಕಾದಿದೆ ಶಾಕ್: ಆಡುವುದು ಅನುಮಾನ ಯಾಕೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಆಗಸ್ಟ್ ತಿಂಗಳ ಕೊನೆಯ ವಾರದಲ್ಲಿ ಪ್ರಾರಂಭವಾಗಲಿರುವ ಏಷ್ಯಾ ಕಪ್ ಟೂರ್ನಮೆಂಟ್ ನಲ್ಲಿ ಯಾರೆಲ್ಲ ಆಡಲಿದ್ದಾರೆ ಎಂಬುದು ಈಗಾಗಲೇ ನಿಮಗೆ ಇತ್ತೀಚಿಗಷ್ಟೇ ಬಿಸಿಸಿಐ ಅಧಿಕೃತವಾಗಿ ಘೋಷಣೆ ಮಾಡಿರುವ ಅನೌನ್ಸ್ಮೆಂಟ್ ನಲ್ಲಿ ತಿಳಿದಿರಬಹುದಾಗಿದೆ. ಈಗಾಗಲೇ ಏಷ್ಯಾ ಕಪ್ ನಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ಆಡುವಂತಹ 15 ಆಟಗಾರರ ಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ.
ಇದು ಸಾಕಷ್ಟು ವಿಚಿತ್ರವಾಗಿರುವಂತೆ ಅನಿಸುತ್ತಿದೆ. ಹೌದು ಗೆಳೆಯರೇ ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಟಿ ಟ್ವೆಂಟಿ ಕ್ರಿಕೆಟ್ನಲ್ಲಿ ಕಡಿಮೆ ಆಡಿರುವ ಆರ್ ಅಶ್ವಿನ್ ಹಾಗೂ ಇತ್ತೀಚಿಗಷ್ಟೇ ಭಾರತೀಯ ಕ್ರಿಕೆಟ್ ತಂಡದಲ್ಲಿ ಆಡುವಂತಹ ಅವಕಾಶವನ್ನು ಪಡೆದುಕೊಂಡಿದ್ದರು ಕೂಡ ದುಬಾರಿ ಬೌಲರ್ ಆಗಿ ಕಾಣಿಸಿಕೊಂಡಿರುವ ಆವೇಶ್ ಖಾನ್ ಆಯ್ಕೆಯಾಗಿದ್ದಾರೆ. ಟಿ ಟ್ವೆಂಟಿ ವಿಶ್ವಕಪ್ ಹಿನ್ನೆಲೆಯಲ್ಲಿ ಈ ಬಾರಿಯ ಏಷ್ಯಾ ಕಪ್ ಅನ್ನು ಟಿ ಟ್ವೆಂಟಿ ಮಾದರಿಯಲ್ಲಿ ಆಡಿಸಲಾಗುತ್ತಿದೆ. ಹೀಗಾಗಿ ತಂಡದ ಅತ್ಯಂತ ಪ್ರಮುಖ ಬೌಲರ್ ಆಗಿರುವ ಜಸ್ಪ್ರೀತ್ ಬುಮ್ರಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಿಲ್ಲ. ಇದರಿಂದಾಗಿಯೇ ಬಿಸಿಸಿಐ ನ ಆಯ್ಕೆ ಸಮಿತಿಯ ಆಟಗಾರರು ಯಾವ ಲೆಕ್ಕಚಾರದಲ್ಲಿ ತಂಡವನ್ನು ನಿಗದಿಪಡಿಸಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ ಎಂಬುದಾಗಿ ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನು ಈ ಬಾರಿ ಇಂಜುರಿಯಿಂದಾಗಿ ತಂಡವನ್ನು ಈ ವರ್ಷದ ಪ್ರಾರಂಭದಿಂದಲೂ ಕೂಡ ಬಿಟ್ಟಿರುವ ಕೆಎಲ್ ರಾಹುಲ್ ರವರು ಕೂಡ ಈ ಟೂರ್ನಮೆಂಟ್ ಗೆ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ.
ಹೀಗಿದ್ದರೂ ಕೂಡ ಅವರಿಗೆ ಈ ಅತ್ಯಂತ ಪ್ರಮುಖ ಸಿಗುವುದು ಅನುಮಾನವೇ ಸರಿ ಎಂಬುದಾಗಿ ಹೇಳಲಾಗುತ್ತಿದೆ. ಕೆ ಎಲ್ ರಾಹುಲ್ ರವರು ತಂಡದಲ್ಲಿ ಉಪನಾಯಕನಾಗಿ ಆಯ್ಕೆಯಾಗಿದ್ದರು ಕೂಡ ಫಿಟ್ನೆಸ್ ಸಾಬೀತು ಪಡಿಸದ ಹೊರತು ಅವರಿಗೆ ತಂಡದಲ್ಲಿ ಸ್ಥಾನ ಸಿಗುವುದು ಸಂಪೂರ್ಣ ಅಸಾಧ್ಯವಾದ ಮಾತು. ಹೀಗಾಗಿ ಅವರು ಫಿಟ್ನೆಸ್ ಅನ್ನು ಸಾಬೀತುಪಡಿಸಿದರೆ ಮಾತ್ರ ತಂಡದಲ್ಲಿ ಆಡುವ ಬಳಗದಲ್ಲಿ ಸ್ಥಾನವನ್ನು ಪಡೆಯಲಿದ್ದಾರೆ ಇಲ್ಲದಿದ್ದರೆ ಅವರ ಬದಲಿ ಆಟಗಾರ ಆಗಿರುವ ಶ್ರೇಯಸ್ ಅಯ್ಯರ್ ರವರು ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಾಗಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.