ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಕೊನೆ ಕ್ಷಣದಲ್ಲಿ ಮಹಾ ಟ್ವಿಸ್ಟ್ ನೀಡಿದ ಬಿಸಿಸಿಐ ಆಯ್ಕೆ ಸಮಿತಿ: ಪಾಂಡ್ಯಗೆ ಶಾಕ್ ನೀಡಿ ಕನ್ನಡಿಗನಿಗೆ ಸಿಹಿ ಸುದ್ದಿ ಕೊಟ್ಟದ್ದು ಹೇಗೆ ಗೊತ್ತೇ??

ಕೊನೆ ಕ್ಷಣದಲ್ಲಿ ಮಹಾ ಟ್ವಿಸ್ಟ್ ನೀಡಿದ ಬಿಸಿಸಿಐ ಆಯ್ಕೆ ಸಮಿತಿ: ಪಾಂಡ್ಯಗೆ ಶಾಕ್ ನೀಡಿ ಕನ್ನಡಿಗನಿಗೆ ಸಿಹಿ ಸುದ್ದಿ ಕೊಟ್ಟದ್ದು ಹೇಗೆ ಗೊತ್ತೇ??

4,629

ನಮಸ್ಕಾರ ಸ್ನೇಹಿತರೆ ಇತ್ತೀಚಿಗಷ್ಟೇ ವೆಸ್ಟ್ ಇಂಡೀಸ್ ಸರಣಿಯ ಕೊನೆಯ ಕ್ಷಣದಲ್ಲಿ ರೋಹಿತ್ ಶರ್ಮಾ ಅವರು ವಿಶ್ರಾಂತಿ ಪಡೆಯುವ ನಿಟ್ಟಿನಲ್ಲಿ ಹಾರ್ದಿಕ್ ಪಾಂಡ್ಯ ರವರಿಗೆ ಭಾರತೀಯ ಕ್ರಿಕೆಟ್ ತಂಡದ ನಾಯಕತ್ವವನ್ನು ನೀಡಲಾಗಿತ್ತು. ಹೀಗಾಗಿ ಹಾರ್ದಿಕ್ ಪಾಂಡ್ಯ ರವರ ನಾಯಕತ್ವದಲ್ಲಿ ಫ್ಲೋರಿಡಾದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಕೊನೆಯ ಟಿ 20 ಪಂದ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡ ಅಧಿಕಾರಯುತವಾಗಿ 88 ರನ್ನುಗಳ ವಿಜಯವನ್ನು ಸಾಧಿಸಿತು.

Follow us on Google News

ಇದೇ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ಅವರಿಗೆ ಸಂದರ್ಶಕರು ಪೂರ್ಣ ಪ್ರಮಾಣದ ನಾಯಕತ್ವದ ಜವಾಬ್ದಾರಿಯನ್ನು ನಿರ್ವಹಿಸುವುದರ ಕುರಿತಂತೆ ನಿಮ್ಮ ಅಭಿಪ್ರಾಯಗಳೇನು ಎಂಬುದಾಗಿ ಕೇಳಿದಾಗ, ಭಾರತೀಯ ಕ್ರಿಕೆಟ್ ತಂಡದ ನಾಯಕನ ಜವಾಬ್ದಾರಿಯನ್ನು ವಹಿಸಿಕೊಳ್ಳುವುದು ನಿಜಕ್ಕೂ ಕೂಡ ಹೆಮ್ಮೆಯ ವಿಚಾರ. ಪೂರ್ಣ ಪ್ರಮಾಣದ ಜವಾಬ್ದಾರಿಯನ್ನು ನೀಡಿದರೆ ನಾನು ನಿರ್ವಹಿಸಲು ಸಿದ್ಧನಾಗಿದ್ದೇನೆ ಎಂಬುದಾಗಿ ಹಾರ್ಧಿಕ್ ಪಾಂಡ್ಯ ಹೇಳಿದ್ದರು. ಇದೇ ಸಂದರ್ಭದಲ್ಲಿ ಮುಂದುವರೆದು ಪಾಂಡ್ಯ ಸದ್ಯಕ್ಕೆ ನಮ್ಮ ಗುರಿ ಇರುವುದು ಏಷ್ಯಾ ಕಪ್ ಹಾಗೂ ಟಿ ಟ್ವೆಂಟಿ ವಿಶ್ವಕಪ್ ಕಡೆಗೆ. ಇದಕ್ಕಾಗಿ ನಾವು ಕೌಶಲ್ಯಗಳನ್ನು ಇನ್ನಷ್ಟು ಹೆಚ್ಚು ಮಾಡಿಕೊಳ್ಳುತ್ತಿದ್ದೇವೆ ಎಂಬುದಾಗಿ ಪಾಂಡ್ಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಕೇವಲ ಭಾರತೀಯ ಕ್ರಿಕೆಟ್ ತಂಡದಲ್ಲಿ ಮಾತ್ರವಲ್ಲದೆ ನಾಯಕನಾಗಿ ಚೊಚ್ಚಲ ಐಪಿಎಲ್ ನಲ್ಲಿಯೇ ಗುಜರಾತ್ ತಂಡದ ನಾಯಕನಾಗಿ ಕಪ್ ಗೆದ್ದಿದ್ದರು. ಆದರೆ ಏಷ್ಯಾ ಕಪ್ ತಂಡವನ್ನು ಅನೌನ್ಸ್ ಮಾಡಿರುವ ಬಿಸಿಸಿಐ ಹಾರ್ದಿಕ್ ಪಾಂಡ್ಯ ರವರಿಗೆ ಆಶ್ಚರ್ಯವನ್ನು ನೀಡಿದೆ ಎಂದು ಹೇಳಬಹುದು.

ಯಾಕೆಂದರೆ ಇಷ್ಟೊಂದು ತನ್ನ ನಾಯಕತ್ವದಲ್ಲಿ ಸಾಧನೆಯನ್ನು ಮಾಡಿರುವ ಹಾರ್ದಿಕ ಪಾಂಡ್ಯ ರವರನ್ನು ಮುಂದಿನ ಏಷ್ಯಾಕಪ್ ತಂಡದಲ್ಲಿ ಉಪನಾಯಕನಾಗಿ ಆಯ್ಕೆ ಮಾಡಬಹುದು ಎಂಬುದಾಗಿ ಎಲ್ಲರೂ ಅಂದುಕೊಂಡಿದ್ದರು. ಆದರೆ ಬಿಸಿಸಿಐ ಪ್ರಕಟಿಸಿರುವ ತಂಡದ ಮಾಹಿತಿಯ ಪ್ರಕಾರ ಇಂಜುರಿಯಿಂದ ಹೊರಬಂದು ತಂಡಕ್ಕೆ ಆಯ್ಕೆಯಾಗಿರುವ ಕೆಎಲ್ ರಾಹುಲ್ ರವರನ್ನು ಇಂತಹ ಪ್ರಮುಖ ಟೂರ್ನಮೆಂಟಿನಲ್ಲಿ ಉಪನಾಯಕನಾಗಿ ಆಯ್ಕೆ ಮಾಡಿದ್ದಾರೆ. ಇದು ಕೊಂಚಮಟ್ಟಿಗೆ ಹಾರ್ದಿಕ್ ಪಾಂಡ್ಯ ರವರಿಗೆ ಬೇಸರದ ವಿಚಾರವಾಗಿರಬಹುದು. ಆದರೆ ಕನ್ನಡಿಗರಿಗೆ ಹಾಗೂ ಕೆ ಎಲ್ ರಾಹುಲ್ ಅವರ ಅಭಿಮಾನಿಗಳಿಗೆ ಇದೊಂದು ಸಂತಸದ ಸುದ್ದಿ ಈ ಅವಕಾಶದ ಮೂಲಕ ತನ್ನನ್ನು ತಾನು ಸಾಬೀತುಪಡಿಸಿಕೊಳ್ಳುವ ಚಾನ್ಸ್ ರಾಹುಲ್ ಅವರಿಗೆ ದೊರಕಿದೆ ಎಂದು ಹೇಳಬಹುದಾಗಿದೆ.