ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಪದೇ ಪದೇ ಎಡವಟ್ಟು, ಮತ್ತೊಮ್ಮೆ ಏಷ್ಯಾ ಕಪ್ ಆಯ್ಕೆಯಲ್ಲಿ ಬಿಸಿಸಿಐ ಮಾಡಿರುವ ಮಹಾ ತಪ್ಪು ಏನು ಗೊತ್ತೇ?? ರೋಹಿತ್, ದ್ರಾವಿಡ್ ಮಧ್ಯೆ ಏನಾಗಿದೆ??

7,610

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಈಗಾಗಲೇ ಬಿಸಿಸಿಐ ಇದೆ ಆಗಸ್ಟ್ ತಿಂಗಳ ಕೊನೆಯಲಿ ಯು ಎ ಇ ನಲ್ಲಿ ಪ್ರಾರಂಭವಾಗಲಿರುವ ಏಷ್ಯಾಕಪ್ ಗೆ ಭಾರತೀಯ ಕ್ರಿಕೆಟ್ ತಂಡವನ್ನು ಅಧಿಕೃತವಾಗಿ ಘೋಷಿಸಿದೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಭಾರತೀಯ ಕ್ರಿಕೆಟ್ ತಂಡ ಈ ಬಾರಿ ಏಷ್ಯಾ ಕಪ್ ನಲ್ಲಿರೋಹಿತ್ ಶರ್ಮಾ ರವರ ನಾಯಕತ್ವದಲ್ಲಿ ಹಾಗೂ ಹಾರ್ದಿಕ್ ಪಾಂಡ್ಯ ರವರ ಉಪನಾಯಕತ್ವದಲ್ಲಿ ಕಣಕ್ಕಿಳಿಯಲಿದೆ.

ಇನ್ನು ಬಿಸಿಸಿಐ ಈ ಬಾರಿ ತಂಡವನ್ನು ಆಯ್ಕೆ ಮಾಡಲು ಉಪಯೋಗಿಸಿರುವ ಫಾರ್ಮುಲಾ ಎಂದರೆ ಐದು ಸ್ಪೆಷಲ್ ಬ್ಯಾಟ್ಸ್ಮನ್ ಗಳು ಇಬ್ಬರು ವಿಕೆಟ್ ಕೀಪರ್ಗಳು ಇಬ್ಬರು ಆಲ್ರೌಂಡರ್ ಗಳು ಮೂವರು ಸ್ಪಿನ್ನರ್ ಹಾಗೂ 3 ವೇಗಿಗಳನ್ನು ಆಯ್ಕೆ ಮಾಡಿದೆ. ಯು ಎ ಇ ಪಿಚ್ ಗೆ ತಕ್ಕಂತೆ ಭಾರತೀಯ ಕ್ರಿಕೆಟ್ ತಂಡವನ್ನು ಬಿಸಿಸಿಐ ಆಯ್ಕೆ ಮಾಡಿದ್ದಾರೆ ನಿಜ ಅದರಲ್ಲಿ ಯಾವುದೇ ಅನುಮಾನವಿಲ್ಲ ಆದರೆ, ಇಲ್ಲಿಯೂ ಕೂಡ ಕೆಲವೊಂದು ಎಡವಟ್ಟುಗಳು ನಡೆದಿವೆ ಎಂಬುದು ತಿಳಿದು ಬರುತ್ತದೆ. ಮೊದಲನೇದಾಗಿ ವೇದಿಗಳ ಪೈಕಿಯಲ್ಲಿ ಭುವನೇಶ್ವರ್ ಕುಮಾರ್ ಹಾಗೂ ಅರ್ಷದೀಪ್ ಸಿಂಗ್ ರವರ ಜೊತೆಗೆ ಆವೇಶ್ ಖಾನ್ ಅವರನ್ನು ಸೇರಿಸಲಾಗಿದೆ. ಆವೇಶ್ ಖಾನ್ ರವರ ಹಿಂದಿನ ಸರಣಿಗಳ ಪ್ರದರ್ಶನವನ್ನು ಗಮನಿಸಿದರೆ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತ್ಯಂತ ಕಳಪೆ ಪ್ರದರ್ಶನವನ್ನು ನೀಡಿದ್ದಾರೆ. ಅವರ ಬದಲಿಗೆ ಕೊನೆಪಕ್ಷ ಮೊಹಮ್ಮದ್ ಶಮಿ ಅವರನ್ನು ತಂಡದಲ್ಲಿ ಹಾಕಿಕೊಂಡಿದ್ದರು ಕೂಡ ಅವರ ಅನುಭವ ತಂಡದ ನೆರವಿಗೆ ಬರುತ್ತಿತ್ತು.

ಇನ್ನು ಮತ್ತೊಂದು ಎಡವಟ್ಟು ಏನೆಂದರೆ, ರೋಹಿತ್ ಶರ್ಮ ಹಾಗೂ ಬಹುಕಾಲದ ನಂತರ ತಂಡಕ್ಕೆ ಮರಳುತ್ತಿರುವ ಕೆಎಲ್ ರಾಹುಲ್ ರವರು ತಂಡದ ಓಪನಿಂಗ್ ಬ್ಯಾಟ್ಸ್ಮನ್ ಅನ್ನು ನಿರ್ವಹಿಸಬಹುದು. ಆದರೆ ಒಂದು ವೇಳೆ ಇವರಿಬ್ಬರಲ್ಲಿ ಒಬ್ಬರು ಇಂಜುರಿಯಾದರೂ ಕೂಡ ತಂಡದ ಸ್ಪೆಷಲಿಸ್ಟ್ ಓಪನ್ ಬ್ಯಾಟ್ಸ್ಮನ್ ಮತ್ತೊಬ್ಬರಿಲ್ಲ. ಈ ಜವಾಬ್ದಾರಿಯನ್ನು ವಿರಾಟ್ ಕೊಹ್ಲಿ ಸೂರ್ಯ ಕುಮಾರ್ ಯಾದವ್ ಅಥವಾ ದೀಪಕ್ ಹೂಡ ನಿರ್ವಹಿಸಬಹುದು ಆದರೆ ಸ್ಪೆಷಲಿಸ್ಟ್ ಓಪನಿಂಗ್ ಬ್ಯಾಟ್ಸ್ಮನ್ ಇದ್ದಿದ್ದರೆ ಭಾರತೀಯ ಕ್ರಿಕೆಟ್ ತಂಡಕ್ಕೆ ಯಾವುದೇ ಚಿಂತೆಗಳು ಇರುತ್ತಿರಲಿಲ್ಲ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕೂಡ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Get real time updates directly on you device, subscribe now.