ಪವನ್ ಶೆರಾವತ್ ರವರ ಬದಲಿಗೆ ಬೆಂಗಳೂರು ಬುಲ್ಸ್ ತಂಡ ಸೇರಿಸಿಕೊಂಡಿರುವ ವಿಕಾಸ್ ಕಂಡೋಲ, ಪವನ್ ಬಗ್ಗೆ ಹೇಳಿದ್ದೇನು ಗೊತ್ತೇ??

ಪವನ್ ಶೆರಾವತ್ ರವರ ಬದಲಿಗೆ ಬೆಂಗಳೂರು ಬುಲ್ಸ್ ತಂಡ ಸೇರಿಸಿಕೊಂಡಿರುವ ವಿಕಾಸ್ ಕಂಡೋಲ, ಪವನ್ ಬಗ್ಗೆ ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೆ ಕ್ರಿಕೆಟ್ ನಲ್ಲಿ ಐಪಿಎಲ್ ಹಾಗೆ ಕಬ್ಬಡಿನಲ್ಲಿ ಪ್ರೊ ಕಬಡ್ಡಿ ಲೀಗ್ ಇಡೀ ವಿಶ್ವದ್ಯಂತ ಕಬ್ಬಡಿ ಕ್ರೀಡೆಯ ಜನಪ್ರಿಯತೆಯನ್ನು ಹೆಚ್ಚಿಸುವಂತೆ ಮಾಡಿದೆ. ಇನ್ನು ಐಪಿಎಲ್ ನಲ್ಲಿ ನಾವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಹೊಂದಿರುವಂತೆ ಪ್ರೊ ಕಬಡ್ಡಿ ಲೀಗ್ ನಲ್ಲಿ ಬೆಂಗಳೂರು ಬುಲ್ಸ್ ತಂಡವನ್ನು ಕೂಡ ಹೊಂದಿದ್ದೇವೆ.

ಇನ್ನು ಹಲವಾರು ಅಂದರೆ ಮೂರು ನಾಲ್ಕು ಸೀಸನ್ ಗಳಿಂದಲೂ ಕೂಡ ಪ್ರೊ ಕಬಡ್ಡಿ ಲೀಗ್ ನಲ್ಲಿ ಬೆಂಗಳೂರು ಬುಲ್ಸ್ ತಂಡದ ಕತ್ತಾನ ಹಾಗೂ ಪ್ರಮುಖ ಆಟಗಾರನಾಗಿ ಪವನ್ ಶೆಹ್ರಾವತ್ ರವರು ಕಾಣಿಸಿಕೊಂಡಿದ್ದಾರೆ. ಹೇಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ವಿರಾಟ್ ಕೊಹ್ಲಿ ಅವರು ಇದ್ದಾರೆ ಕಳೆಯೊ ಅದೇ ರೀತಿ ಬೆಂಗಳೂರು ಬುಲ್ಸ್ ತಂಡದಲ್ಲಿ ಪವನ್ ಇದ್ದರೆ ಅದೊಂದು ಬಲಿಷ್ಠ ತಂಡವಾಗಿ ಕಾಣಿಸಿಕೊಳ್ಳುತ್ತಿತ್ತು. ಹಲವಾರು ಪಂದ್ಯಗಳನ್ನು ಸೋಲುವ ಪರಿಸ್ಥಿತಿಯಲ್ಲಿ ಇದ್ದಿದ್ದನ್ನು ಕೂಡ ಗೆದ್ದು ಕೊಟ್ಟಿದ್ದಾರೆ ಪವನ್. ಆದರೆ ಈ ಬಾರಿಯ ಆಕ್ಷನ್ ಸಂದರ್ಭದಲ್ಲಿ ಅವರು ಬಜೆಟ್ ನಿಂದ ಹೊರಗೆ ಹೋದ ಕಾರಣದಿಂದಾಗಿ ಬೆಂಗಳೂರು ಬುಲ್ಸ್ ತಂಡಕ್ಕೆ ಅವರನ್ನು ಮತ್ತೆ ತಂಡದಲ್ಲಿ ಖರೀದಿಸಲು ಸಾಧ್ಯವಾಗಲಿಲ್ಲ. ಅವರು ಈ ಬಾರಿ ಪ್ರೊ ಕಬಡ್ಡಿ ಲೀಗ್ ನ ಆಕ್ಷನ್ ನಲ್ಲಿ ದಾಖಲೆಯ 2.20 ಕೋಟಿಗೊ ಅಧಿಕ ಬೆಲೆಗೆ ಮಾರಾಟವಾಗಿದ್ದಾರೆ. ಹೀಗಾಗಿ ಪ್ರತಿಯೊಬ್ಬ ಬೆಂಗಳೂರು ಬುಲ್ಸ್ ತಂಡದ ಸಮರ್ಥಕರು ಹಾಗೂ ಕೋಚ್ ಸೇರಿದಂತೆ ಎಲ್ಲರೂ ಕೂಡ ಪವನ್ ಅವರನ್ನು ಕಳೆದುಕೊಂಡಿರುವ ನಿಟ್ಟಿನಲ್ಲಿ ಬೇಸರದಿಂದಿದ್ದಾರೆ.

ಇನ್ನು ಅವರ ಬದಲಿಗೆ ಈ ಬಾರಿ ಲೆಫ್ಟ್ ಸೈಡ್ ಬಲಿಷ್ಠ ರೈಡರ್ ಆಗಿರುವ ವಿಕಾಸ್ ಖಂಡೋಲ ಅವರನ್ನು ಬೆಂಗಳೂರು ಬುಲ್ಸ್ ತಂಡ ಖರೀದಿಸಿದೆ. ಅವರು ಕೂಡ ಪವನ್ ಅವರ ಕುರಿತಂತೆ ಮಾತನಾಡುತ್ತಾ ಅವರ ನಾಯಕತ್ವದಲ್ಲಿ ನಾನು ರೈಲ್ವೆ ಪರವಾಗಿ ಆಡಿದ್ದೇನೆ ಹೀಗಾಗಿ ಅವರನ್ನು ನಾನು ಚೆನ್ನಾಗಿ ಬಲ್ಲೆ. ಇಬ್ಬರೂ ಕೂಡ ಒಂದೇ ತಂಡದಲ್ಲಿ ಅಂದರೆ ಬೆಂಗಳೂರು ಬುಲ್ಸ್ ಪರವಾಗಿ ಆಡಬೇಕು ಎಂಬುದಾಗಿ ಅಂದುಕೊಂಡಿದ್ದೆವು ಆದರೆ ಆಕ್ಷನ್ ನಲ್ಲಿ ತಮಿಳ್ ತಲೈವಾಸ್ ತಂಡ ಅವರನ್ನು ಖರೀದಿಸಿರುವ ಕಾರಣದಿಂದಾಗಿ ಅವರು ನಮ್ಮೊಂದಿಗೆ ಆಡಲು ಸಾಧ್ಯವಿಲ್ಲ. ಆದರೂ ಈ ಬಾರಿ ನಾನು ಬೆಂಗಳೂರು ಬುಲ್ಸ್ ತಂಡಕ್ಕೆ ಸೇರಿರುವುದು ನಿಜಕ್ಕೂ ಸಂತೋಷ ನೀಡಿದೆ ತಂಡಕ್ಕಾಗಿ ಉತ್ತಮ ಫಲಿತಾಂಶವನ್ನು ನೀಡಲು ಎಲ್ಲಾ ಪ್ರಯತ್ನವನ್ನು ಮಾಡುತ್ತೇನೆ ಎಂಬುದಾಗಿ ವಿಕಾಸ್ ಖಂಡೋಲಾ ಹೇಳಿದ್ದಾರೆ.