ಶುರುವಾಯಿತು ದಿನೇಶ್ ಕಾರ್ತಿಕ್ ಸ್ಥಾನದ ಕುರಿತಾದ ಪ್ರಶ್ನೆ: ನಿಜಕ್ಕೂ ದಿನೇಶ್ ಕಾರ್ತಿಕ್ ಭಾರತದಕ್ಕೆ ಬೇಕೇ ಎಂದಿದ್ದು ಯಾಕೆ ಗೊತ್ತೇ??

ಶುರುವಾಯಿತು ದಿನೇಶ್ ಕಾರ್ತಿಕ್ ಸ್ಥಾನದ ಕುರಿತಾದ ಪ್ರಶ್ನೆ: ನಿಜಕ್ಕೂ ದಿನೇಶ್ ಕಾರ್ತಿಕ್ ಭಾರತದಕ್ಕೆ ಬೇಕೇ ಎಂದಿದ್ದು ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೆ ಈಗಾಗಲೇ ಭಾರತೀಯ ಕ್ರಿಕೆಟ್ ತಂಡ ವೆಸ್ಟ್ ಇಂಡೀಸ್ ಸರಣಿಯನ್ನು ಮುಗಿಸಿಕೊಂಡು ಇದೇ ಆಗಸ್ಟ್ ಕೊನೆಯ ವಾರದಲ್ಲಿ ನಡೆಯಲಿರುವ ಏಷ್ಯಾಕಪ್ ಟೂರ್ನಮೆಂಟ್ ಗೆ ಕೂಡ ಸಿದ್ಧವಾಗಿದೆ. ಈಗಾಗಲೇ ಬಿಸಿಸಿಐ ಏಷ್ಯಾ ಕಪ್ ಗೆ ತನ್ನ ತಂಡವನ್ನು ಕೂಡ ಅಧಿಕೃತವಾಗಿ ಘೋಷಿಸಿದೆ. ಈ ತಂಡದಲ್ಲಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಇತ್ತೀಚಿನ ದಿನಗಳಲ್ಲಿ ಫಿನಿಶರ್ ಜವಾಬ್ದಾರಿಯನ್ನು ಅತ್ಯದ್ಭುತವಾಗಿ ನಿರ್ವಹಿಸುತ್ತಿರುವ ದಿನೇಶ್ ಕಾರ್ತಿಕ್ ರವರು ಕೂಡ ಆಯ್ಕೆಯಾಗಿದ್ದಾರೆ.

ದಿನೇಶ್ ಕಾರ್ತಿಕ್ ರವರು ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಅತ್ಯದ್ಭುತ ಪ್ರದರ್ಶನವನ್ನು ನೀಡುವ ಮೂಲಕ ಮೂರು ವರ್ಷಗಳ ನಂತರ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿ ತನ್ನ ಸ್ಥಾನವನ್ನು ಸಾಬೀತುಪಡಿಸಿದ್ದರು. ಇದು ಅವರ ಪರಿಶ್ರಮದ ಯೋಗ್ಯವಾದ ಫಲ ಎಂದರು ಕೂಡ ತಪ್ಪಾಗಲಾರದು. ಆದರೆ ದಿನೇಶ್ ಕಾರ್ತಿಕ್ ರವರ ಕುರಿತಂತೆ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಇತ್ತೀಚಿಗಷ್ಟೇ ಆಶ್ಚರ್ಯಕರ ಹೇಳಿಕೆಯನ್ನು ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ. ಹೌದು ಗೆಳೆಯರೇ ಅಜಯ್ ಜಡೇಜಾ ಅವರ ಪ್ರಕಾರ ದಿನೇಶ್ ಕಾರ್ತಿಕ್ ರವರು ತಂಡದಲ್ಲಿ ಇರಬೇಕಾದ ಅವಶ್ಯಕತೆ ಇಲ್ಲ ಅದರಲ್ಲೂ ಟಿ ಟ್ವೆಂಟಿ ವಿಶ್ವಕಪ್ ಗೆ ಇವರನ್ನು ಆಯ್ಕೆ ಮಾಡುವುದು ಬೇಕಾಗಿಲ್ಲ ಎಂಬುದಾಗಿ ಹೇಳಿದ್ದಾರೆ.

ಸದ್ಯಕ್ಕೆ ತಂಡ ಆಕ್ರಮಣಕಾರಿ ಆಟಗಾರರನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ತನ್ನ ದೃಷ್ಟಿಕೋನವನ್ನು ಹೊಂದಿದೆ ಹೀಗಾಗಿ ಆ ತಂಡದಲ್ಲಿ ನಾನು ದಿನೇಶ್ ಕಾರ್ತಿಕ್ ರವರನ್ನು ನೋಡಲು ಬಯಸುವುದಿಲ್ಲ ಎಂಬುದಾಗಿ ಅಜಯ್ ಜಡೇಜ ಹೇಳಿದ್ದಾರೆ. ಅವರೊಬ್ಬ ಇನ್ಸೂರೆನ್ಸ್ ಆಟಗಾರ ಇದ್ದ ಹಾಗೆ ಎಂಬುದಾಗಿ ದಿನೇಶ್ ಕಾರ್ತಿಕ್ ರವರ ಬಗ್ಗೆ ಅಜಯ್ ಜಡೆಜಾ ಅಭಿಪ್ರಾಯ ಹೇಳಿದ್ದಾರೆ. ನೀವು ಒಂದು ವೇಳೆ ರೋಹಿತ್ ಶರ್ಮ ಹಾಗೂ ವಿರಾಟ್ ಕೊಹ್ಲಿ ಅವರಿಗೆ ಅವಕಾಶ ನೀಡುತ್ತಿದ್ದೀರಿ ಎಂದರೆ ದಿನೇಶ್ ಕಾರ್ತಿಕ್ ಅವರಿಗೆ ಅವಕಾಶ ನೀಡುವುದರಲ್ಲಿ ತಪ್ಪಿಲ್ಲ, ಅದೇ ಒಂದು ವೇಳೆ ನೀವು ಅವರಿಬ್ಬರನ್ನು ನೋಡಲು ಬಯಸುವುದಿಲ್ಲ ಎಂದಾದರೆ ದೇಶ ಕಾರ್ತಿಕ್ ರವರ ಅಗತ್ಯ ಕೂಡ ತಂಡಕ್ಕೆ ಇಲ್ಲ ಎಂಬುದಾಗಿ ಹೇಳಿದ್ದಾರೆ. ಆತನೋರ್ವ ಉತ್ತಮ ಕಾಮೆಂಟೇಟರ್ ಎಂಬುದಾಗಿ ದಿನೇಶ್ ಕಾರ್ತಿಕ್ ರವರ ಬಗ್ಗೆ ಅಜಯ್ ಜಡೇಜ ಹೇಳಿಕೆ ನೀಡಿದ್ದಾರೆ ಇದರ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.