ಯಾರಾದ್ರೂ ಇರಲಿ ಬಿಡಲಿ, ಆತನೊಬ್ಬನಿಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡಿರಿ ಎಂದ ರವಿಶಾಸ್ತ್ರಿ. ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ??
ಯಾರಾದ್ರೂ ಇರಲಿ ಬಿಡಲಿ, ಆತನೊಬ್ಬನಿಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡಿರಿ ಎಂದ ರವಿಶಾಸ್ತ್ರಿ. ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಈಗಾಗಲೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಏಷ್ಯಾಕಪ್ ತಂಡವನ್ನು ಬಿಸಿಸಿ ಅಧಿಕೃತವಾಗಿ ಘೋಷಣೆ ಮಾಡಿದೆ. ಈ ಬಾರಿ ತಂಡದಲ್ಲಿ ವಿರಾಟ್ ಕೊಹ್ಲಿ ಕೆ ಎಲ್ ರಾಹುಲ್ ಸೇರಿದಂತೆ ಹಲವಾರು ಅನುಭವಿ ಆಟಗಾರರ ಕಮ್ ಬ್ಯಾಕ್ ಆಗಿದೆ. ಇನ್ನು ಇದೇ ಸಂದರ್ಭದಲ್ಲಿ ತಂಡದ ಮಾಜಿ ಕೋಚ್ ಆಗಿರುವ ರವಿಶಾಸ್ತ್ರಿ ರವರು ಒಂದು ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ.
ಒಬ್ಬ ಕೋಚ್ ಆಗಿ ರವಿ ಶಾಸ್ತ್ರಿ ರವರ ಮಾರ್ಗದರ್ಶನದಲ್ಲಿ ವಿರಾಟ್ ಕೊಹ್ಲಿ ರವರ ನಾಯಕತ್ವದಲ್ಲಿ ಭಾರತೀಯ ಕ್ರಿಕೆಟ್ ತಂಡ ಸಾಕಷ್ಟು ವಿದೇಶಿ ಸರಣಿಗಳಲ್ಲಿ ಗೆಲುವನ್ನು ಸಾಧಿಸಿದೆ ಎಂಬುದನ್ನು ನಾವೆಲ್ಲರೂ ಒಪ್ಪಿಕೊಳ್ಳಲೇ ಬೇಕಾಗಿರುವ ಒಂದು ವಿಚಾರ. ಹೀಗಾಗಿ ಅವರು ಹೇಳುವ ಮಾತುಗಳನ್ನು ಕೂಡ ಪ್ರಾಮುಖ್ಯತೆಯಲ್ಲಿ ಇರಿಸಿಕೊಳ್ಳಬೇಕಾಗುತ್ತದೆ. ಟಿ20 ವಿಶ್ವಕಪ್ ತಂಡದಲ್ಲಿ ಈ ಒಬ್ಬ ಯುವ ಬೌಲರ್ ಇರಲೇಬೇಕು ಎಂಬುದಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅವರು ಇನ್ಯಾರೂ ಅಲ್ಲ ಐಪಿಎಲ್ ನಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡುವ ಮೂಲಕ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿರುವ ಯುವ ಬೌಲರ್ ಅರ್ಷದೀಪ್ ಸಿಂಗ್.
ಅರ್ಷದೀಪ್ ಸಿಂಗ್ ಕೊನೆಯ ಓವರ್ ಗಳಲ್ಲಿ ವಿಕೆಟ್ ಪಡೆಯಲು ಹಾಗೂ ರನ್ ಅನ್ನು ನಿಯಂತ್ರಿಸಲು ಅತ್ಯಂತ ಪರಿಣಾಮಕಾರಿಯಾದ ಬೌಲರ್ ಆಗಿದ್ದಾರೆ. ಹೀಗಾಗಿ ಅವರು ಟಿ20 ವಿಶ್ವಕಪ್ ತಂಡದಲ್ಲಿರಲೇಬೇಕು ಯಾಕೆಂದರೆ ಆಸ್ಟ್ರೇಲಿಯಾದ ಪಿಚ್ ಲೆಫ್ಟ್ ಹ್ಯಾಂಡ್ ವೇಗಿಗಳಿಗೆ ಬೌನ್ಸ್ ಪಡೆಯಲು ಅತ್ಯಂತ ಸಹಾಯಕಾರಿಯಾಗಿದೆ. ಹಾರ್ದಿಕ್ ಪಾಂಡ್ಯ ಅವರ ಜೊತೆಗೆ ಜಸ್ಪ್ರೀತ್ ಬುಮ್ರಾ ಭುವನೇಶ್ವರ್ ಕುಮಾರ್ ಶಮಿ ರವರ ಜೊತೆಗೆ ಅರ್ಷದೀಪ್ ಸಿಂಗ್ ಕೂಡ ಭಾರತ ತಂಡಕ್ಕೆ ನೆರವಾಗ ಬಲ್ಲರು ಎಂಬುದಾಗಿ ರವಿಶಾಸ್ತ್ರಿ ಪ್ರತಿಪಾದಿಸಿದ್ದು ಇದೇ ಕಾರಣಕ್ಕಾಗಿ ಈ ಹೇಳಿಕೆಯನ್ನು ನೀಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ರವಿ ಶಾಸ್ತ್ರಿ ರವರ ಹೇಳಿಕೆಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ಹಂಚಿಕೊಳ್ಳಿ.