ಒಮ್ಮೆಲೇ ನಾಯಕನ ಸ್ಥಾನಕ್ಕೆ ಕರ್ಚಿಫ್ ಹಾಕಿದ ಹಾರ್ಧಿಕ್ ಪಾಂಡ್ಯ: ರಾಹುಲ್ ಹಾಗೂ ರೋಹಿತ್ ಗೆ ಒಮ್ಮೆ ಶಾಕ್. ಮಾಡಿದ್ದೇನು ಗೊತ್ತೇ??
ಒಮ್ಮೆಲೇ ನಾಯಕನ ಸ್ಥಾನಕ್ಕೆ ಕರ್ಚಿಫ್ ಹಾಕಿದ ಹಾರ್ಧಿಕ್ ಪಾಂಡ್ಯ: ರಾಹುಲ್ ಹಾಗೂ ರೋಹಿತ್ ಗೆ ಒಮ್ಮೆ ಶಾಕ್. ಮಾಡಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಈಗಾಗಲೇ ವೆಸ್ಟ್ ಇಂಡೀಸ್ ವಿರುದ್ಧದ 5 t20 ಪಂದ್ಯಗಳ ಸರಣಿಯನ್ನು ಭಾರತೀಯ ಕ್ರಿಕೆಟ್ ತಂಡ ಯಶಸ್ವಿಯಾಗಿ ಸರಣಿಯನ್ನು ಗೆದ್ದು ಬೀಗಿದೆ. ಇದೇ ಸಂದರ್ಭದಲ್ಲಿ ಈ ತಿಂಗಳ ಕೊನೆಯ ವಾರದಲ್ಲಿ ಪ್ರಾರಂಭವಾಗಲಿರುವ ಏಷ್ಯಾ ಕಪ್ ತಂಡವು ಕೂಡ ಘೋಷಣೆಯಾಗಿದೆ.
ಬಿಸಿಸಿಐ ಆಗಸ್ಟ್ 8 ಏಷ್ಯಾ ಕಪ್ ತಂಡವನ್ನು ನಿರ್ಧರಿಸಿ ಪ್ರಕಟಿಸುವ ಕೊನೆಯ ದಿನಾಂಕ ವಾಗಿದ್ದರಿಂದ ಆಗಸ್ಟ್ 8ರಂದು 15 ಆಟಗಾರರು ಇರುವಂತಹ ಭಾರತೀಯ ಕ್ರಿಕೆಟ್ ತಂಡವನ್ನು ಈಗಾಗಲೇ ಏಷ್ಯಾ ಕಪ್ ಗೆ ಅಧಿಕೃತವಾಗಿ ಘೋಷಿಸಲಾಗಿದೆ. ಇದರ ನಡುವಲ್ಲಿ ಹಾರ್ದಿಕ್ ಪಾಂಡ್ಯ ರವರು 5ನೇ ಟಿ ಟ್ವೆಂಟಿ ಪಂದ್ಯವನ್ನು ಗೆದ್ದ ನಂತರ ನೀಡಿರುವ ಹೇಳಿಕೆ ಎನ್ನುವುದು ಈಗಾಗಲೇ ನಾಯಕನಾಗಿರುವ ರೋಹಿತ್ ಶರ್ಮ ಹಾಗೂ ಮುಂದಿನ ಭವಿಷ್ಯದ ನಾಯಕ ಎಂದು ಒಂದು ಸಮಯದಲ್ಲಿ ಗುರುತಿಸಿಕೊಂಡಿದ್ದ ಕೆ ಎಲ್ ರಾಹುಲ್ ರವರಿಗೆ ಎಚ್ಚರಿಕೆಯ ಕರೆಗಂಟೆಯಾಗಿ ಪರಿಣಮಿಸಲಿದೆ ಎಂಬುದಾಗಿ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಕೊನೆಯ ಟಿ 20 ಪಂದ್ಯವನ್ನು ಬರೋಬ್ಬರಿ 88 ರನ್ನುಗಳಿಂದ ಗೆದ್ದ ನಂತರ ಈ ಹೇಳಿಕೆಯನ್ನು ಹಾರ್ದಿಕ್ ಪಾಂಡ್ಯ ನೀಡಿದ್ದಾರೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ರೋಹಿತ್ ಶರ್ಮ ರವರ ಅನುಪಸ್ಥಿತಿಯಲ್ಲಿ ತಂಡದ ನಾಯಕನಾಗಿ ಅತ್ಯುತ್ತಮ ಫಲಿತಾಂಶವನ್ನೇ ಹಾರ್ದಿಕ ಪಾಂಡ್ಯ ರವರು ನಾಯಕನಾಗಿ ನೀಡಿದ್ದಾರೆ.
ಈ ವೇಳೆ ಸಂದರ್ಶಕರು ತಂಡದ ಖಾಯಂ ನಾಯಕನಾಗಿ ತಂಡವನ್ನು ಮುನ್ನಡೆಸಲು ಎದುರು ನೋಡುತ್ತಿದ್ದೀರಾ ಎಂಬುದಾಗಿ ಪ್ರಶ್ನೆ ಕೇಳುತ್ತಾರೆ. ಆಗ ಭಾರತೀಯ ಕ್ರಿಕೆಟ್ ತಂಡವನ್ನು ನಾಯಕನಾಗಿ ಮುನ್ನಡೆಸುವುದು ನಿಜಕ್ಕೂ ಕೂಡ ಹೆಮ್ಮೆಯ ವಿಚಾರ, ಒಂದು ವೇಳೆ ಟೀಂ ಮ್ಯಾನೇಜ್ಮೆಂಟ್ ಪೂರ್ಣಾವಧಿ ನಾಯಕತ್ವವನ್ನು ನನಗೆ ನೀಡುವುದಾದರೆ ಸಂತೋಷದಿಂದ ಒಪ್ಪಿಕೊಳ್ಳಲು ಸಿದ್ಧನಿದ್ದೇನೆ ಎಂಬುದಾಗಿ ಕೂಡ ಹಾರ್ದಿಕ ಪಾಂಡ್ಯ ಹೇಳುತ್ತಾರೆ. ಈ ಮೂಲಕ ತಾನು ಕೂಡ ತಂಡದ ಮುಂದಿನ ನಾಯಕ ಸ್ಥಾನದ ಮಹತ್ವಕಾಂಕ್ಷಿ ಎಂಬುದನ್ನು ಹಾರ್ದಿಕ ಪಾಂಡ್ಯ ಸಾಬೀತುಪಡಿಸಿದ್ದಾರೆ. ಸದ್ಯದ ಮಟ್ಟಿಗೆ ಏಷ್ಯಾ ಕಪ್ ಹಾಗೂ ಟಿ20 ವಿಶ್ವಕಪ್ ಮುಂದಿದ್ದು ಅದರ ಬಗ್ಗೆ ಹೆಚ್ಚಿನ ಗಮನ ವಹಿಸಲಿದ್ದೇವೆ ಎಂಬುದಾಗಿ ಹಾರ್ದಿಕ್ ಪಾಂಡ್ಯ ಈ ಸಂದರ್ಭದಲ್ಲಿ ಹೇಳಿದ್ದಾರೆ.