ಏಷ್ಯಾ ಕಪ್ ತಂಡ ಪ್ರಕಟಣೆ ಮಾಡಿದ ಬಿಸಿಸಿಐ: ತಂಡದಿಂದ ಸ್ಟಾರ್ ಆಟಗಾರ ಔಟ್: ತಂಡ ಹೇಗಿದೆ ಗೊತ್ತೇ??

ಏಷ್ಯಾ ಕಪ್ ತಂಡ ಪ್ರಕಟಣೆ ಮಾಡಿದ ಬಿಸಿಸಿಐ: ತಂಡದಿಂದ ಸ್ಟಾರ್ ಆಟಗಾರ ಔಟ್: ತಂಡ ಹೇಗಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಕೊನೆಗೂ ಕೂಡ ಆಗಸ್ಟ್ 8 ಏಷ್ಯಾ ಕಪ್ ತಂಡವನ್ನು ಅನೌನ್ಸ್ ಮಾಡಲು ಕೊನೆಯ ದಿನವಾದ ಕಾರಣ ಬಿಸಿಸಿಐ ಏಷ್ಯಾ ಕಪ್ ಆಡುವಂತಹ ತಂಡದ ಆಟಗಾರರ ಪಟ್ಟಿಯನ್ನು ಈಗಾಗಲೇ ಅಧಿಕೃತವಾಗಿ ಪ್ರಕಟಿಸಿದೆ. ಆಶ್ಚರ್ಯ ಎನ್ನುವಂತೆ ಏಷ್ಯಾ ಕಪ್ ತಂಡದಿಂದ ತಂಡದ ಸ್ಟಾರ್ ಆಟಗಾರರೊಬ್ಬರು ತಂಡದಿಂದ ಹೊರಗೆ ಬಿದ್ದಿದ್ದಾರೆ. ತಂಡದ ಅತ್ಯಂತ ಪ್ರಮುಖ ಬೌಲರ್ ಎಂದೆನಿಸಿಕೊಂಡಿರುವ ಕೊನೆಯ ಓವರ್ ಗಳ ಪ್ರಮುಖ ಬೌಲರ್ ಆಗಿರುವ ಜಸ್ಪ್ರೀತ್ ಬುಮ್ರಾ. ಬಿಸಿಸಿಐ ಇದಕ್ಕೆ ಬೂಮ್ರ ಫಿಟ್ನೆಸ್ ಹಾಗೂ ಇಂಜುರಿ ಕಾರಣದಿಂದಾಗಿ ಬೆಂಗಳೂರಿನ ಎನ್ ಸಿ ಎ ನಲ್ಲಿ ತರಬೇತಿ ಪಡೆದುಕೊಳ್ಳುತ್ತಿದ್ದಾರೆ ಎಂಬ ಕಾರಣವನ್ನು ನೀಡಿದೆ.

ಹಾಗಿದ್ದರೆ ಏಷ್ಯಾ ಕಪ್ ಟೂರ್ನಮೆಂಟ್ ಗೆ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆ ಆಗಿರುವ ಆಟಗಾರರು ಯಾರು ಎಂಬುದನ್ನು ಸವಿವರವಾಗಿ ತಿಳಿದುಕೊಳ್ಳೋಣ ಬನ್ನಿ. ಏಷ್ಯಾಕಪ್ ನಲ್ಲಿ 15 ಆಟಗಾರರು ಆಯ್ಕೆಯಾಗಿದ್ದಾರೆ ಹಾಗಿದ್ದರೆ ಯಾರೆಲ್ಲಾ ಆಯ್ಕೆಯಾಗಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ. ರೋಹಿತ್ ಶರ್ಮಾ ನಾಯಕನಾಗಿ ತಂಡವನ್ನು ಮುನ್ನಡೆಸಿದರೆ ಉಪನಾಯಕನಾಗಿ ಹಾರ್ದಿಕ್ ಪಾಂಡ್ರ ಕಾಣಿಸಿಕೊಳ್ಳಲಿದ್ದಾರೆ. ಕೆ ಎಲ್ ರಾಹುಲ್ ವಿರಾಟ್ ಕೊಹ್ಲಿ ಅವರು ಕೂಡ ತಂಡಕ್ಕೆ ವಾಪಸ್ ಆಗಿದ್ದಾರೆ.

ಇಬ್ಬರಿಗೂ ತಮ್ಮನ್ನು ಸಾಬೀತುಪಡಿಸಿಕೊಳ್ಳಲು ಇದೊಂದು ಅತ್ಯುತ್ತಮ ವೇದಿಕೆ. ರಿಷಬ್ ಪಂತ್ ಹಾಗೂ ದಿನೇಶ್ ಕಾರ್ತಿಕ್ ವಿಕೆಟ್ ಕೀಪರ್ಗಳಾಗಿ ಆಯ್ಕೆಯಾಗಿದ್ದಾರೆ. ಅತ್ಯುತ್ತಮ ಪ್ರದರ್ಶನದ ನಂತರ ದೀಪಕ್ ಹೂಡಾ ಕೂಡ ಏಷ್ಯಾಕಪ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇನ್ನು ಬಹುಕಾಲಗಳಿಂದ ತಂಡದಿಂದ ಹೊರಗಿದ್ದ ರವಿಚಂದ್ರನ್ ಅಶ್ವಿನ್ ಕೂಡ ಏಷ್ಯಾ ಕಪ್ ತಂಡದಲ್ಲಿ ಸೇರಿಕೊಂಡಿದ್ದಾರೆ. ಪ್ರಮುಖ ಆಲ್ರೌಂಡರ್ ಜಡೇಜಾ ಚಹಾಲ್ ರವಿ ಬಿಷ್ಣೋಯ್ ಭುವನೇಶ್ವರ್ ಕುಮಾರ್ ಅರ್ಷದೀಪ್ ಸಿಂಗ್ ಹಾಗೂ ಆವೇಶ್ ಖಾನ್ 15ರ ಬಳಗದಲ್ಲಿದ್ದಾರೆ. ಈ ತಂಡದ ಮೂಲಕ ಈ ಬಾರಿಯ ಏಷ್ಯಾ ಕಪ್ ನಲ್ಲಿ ಕೋಚ್ ರಾಹುಲ್ ದ್ರಾವಿಡ್ ಹಾಗೂ ನಾಯಕ ರೋಹಿತ್ ಶರ್ಮ ಯಾವ ಫಲಿತಾಂಶವನ್ನು ತಂದುಕೊಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.