ಶುರುವಾಯಿತು ಕಿರಿಕ್: ಬಿಗ್ ಬಾಸ್ ಮನೆಯಲ್ಲಿ ಕಿರುಚಾಡಿದ ಸೋನು ಗೌಡ: ಸ್ಪೂರ್ತಿ ರವರ ನಡುವೆ ಮೊದಲ ಜಗಳ. ಅಷ್ಟಕ್ಕೂ ಸ್ಪೂರ್ತಿ ಅಂದಿದ್ದೇನು ಗೊತ್ತೇ??

ಶುರುವಾಯಿತು ಕಿರಿಕ್: ಬಿಗ್ ಬಾಸ್ ಮನೆಯಲ್ಲಿ ಕಿರುಚಾಡಿದ ಸೋನು ಗೌಡ: ಸ್ಪೂರ್ತಿ ರವರ ನಡುವೆ ಮೊದಲ ಜಗಳ. ಅಷ್ಟಕ್ಕೂ ಸ್ಪೂರ್ತಿ ಅಂದಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಓಟಿಟಿ ಕಾರ್ಯಕ್ರಮ ಇದೇ ಆಗಸ್ಟ್ ಆರರಿಂದ ಕಿಚ್ಚ ಸುದೀಪ್ ರವರ ನಿರೂಪಣೆಯೊಂದಿಗೆ ಪ್ರಾರಂಭವಾಗಿದೆ. ಬೇರೆ ಬೇರೆ ಕ್ಷೇತ್ರಗಳಿಂದ ಬಿಗ್ ಬಾಸ್ ಮನೆಗೆ ಈಗಾಗಲೇ ಹಲವಾರು ಸ್ಪರ್ದಿಗಳು ಕಾಲಿಟ್ಟಿದ್ದು ಸಾಮಾನ್ಯವಾಗಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈ ಬಾರಿಯೂ ಕೂಡ ಕೆಲವು ಜಗಳಗಳ ಹೊಗೆ ಎದ್ದಿದೆ. ಬಿಗ್ ಬಾಸ್ ಅನ್ನು ದೊಡ್ಡ ಮಟ್ಟದ ಪ್ರೇಕ್ಷಕರು ನೋಡುವುದು ಕೂಡ ಇದೆ ಜಗಳದ ಮನೋರಂಜನೆಯ ಸ್ವಾಧವನ್ನು ಪಡೆಯಲು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇನ್ನು ಈ ಬಾರಿಯ ಬಿಗ್ ಬಾಸ್ ನಲ್ಲಿ ಕೂಡ ಇನ್ನೇನು ಕಾರ್ಯಕ್ರಮ ಶುರುವಾಯಿತು ಅನ್ನುವಷ್ಟರಲ್ಲಿ ಜಗಳ ಕೂಡ ಪ್ರಾರಂಭ ಆಗಿದೆ. ಹೌದು ಗೆಳೆಯರೇ ಈ ಬಾರಿ ಜಗಳ ನಡೆದಿರುವುದು ಬೇರೆ ಯಾರೋ ನಡುವೆ ಅಲ್ಲ ಬದಲಾಗಿ ಸೋನು ಗೌಡ ಹಾಗೂ ಸ್ಪೂರ್ತಿಗೌಡ ಅವರ ನಡುವೆ. ಈ ಬಾರಿಯ ಬಿಗ್ ಬಾಸ್ ಪ್ರಾರಂಭವಾಗಿರುವುದು ಜಡೆ ಜಗಳದ ನಡುವೆ ಎಂದು ಹೇಳಬಹುದಾಗಿದೆ. ಹಾಗಿದ್ದರೆ ಸೋನು ಗೌಡ ಹಾಗೂ ಸ್ಪೂರ್ತಿಗೌಡ ಅವರ ನಡುವೆ ಜಗಳ ನಡೆದಿರುವುದಕ್ಕೆ ನಿಜವಾದ ಕಾರಣ ಎಂಬುದನ್ನು ಸಂಪೂರ್ಣ ವಿವರವಾಗಿ ಇಂದಿನ ಲೇಖನಿಯಲ್ಲಿ ತಿಳಿದುಕೊಳ್ಳೋಣ ಬನ್ನಿ.

ಕಿರುತೆರೆಯ ಬಿಗ್ ಮನೆ ಎಂದೇ ಖ್ಯಾತವಾಗಿರುವ ರಿಯಾಲಿಟಿ ಶೋಗಳ ಗಾಡ್ ಫಾದರ್ ಬಿಗ್ ಬಾಸ್ ಈಗಾಗಲೇ ಪ್ರಾರಂಭ ಆಗಿದ್ದು ಮೊದಲು ಎರಡು ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಎಲ್ಲವೂ ಚೆನ್ನಾಗಿತ್ತು ಆದರೆ ನಂತರದ ದಿನಗಳಲ್ಲಿ ಈಗ ಸ್ಪೂರ್ತಿ ಗೌಡ ಹಾಗೂ ಸೋನು ಶ್ರೀನಿವಾಸ ಗೌಡ ಅವರ ನಡುವೆ ಜಗಳ ಮೊದಲಿಟ್ಟಿದೆ. ಇಬ್ಬರೂ ಕೂಡ ಈಗ ಪರಸ್ಪರ ಮುನಿಸಿಕೊಂಡಿದ್ದಾರೆ. ಈ ಜಗಳ ಪ್ರಾರಂಭವಾಗಿದ್ದು ಸ್ಪೂರ್ತಿ ಗೌಡ ಅವರು ಅನಿರೀಕ್ಷಿತವಾಗಿ ಕೋಪ ಮಾಡಿಕೊಂಡಿದ್ದೇ ಕಾರಣ ಎಂಬುದಾಗಿ ತಿಳಿದು ಬಂದಿದೆ.

ಸೋನು ಶ್ರೀನಿವಾಸ ಗೌಡರವರು ಸ್ಪೂರ್ತಿಗೌಡ ಅವರಿಗೆ ಹೇಳಿದ ಒಂದು ಮಾತೇ ಇವರಿಬ್ಬರ ನಡುವೆ ಈಗ ಜಗಳ ಪ್ರಾರಂಭವಾಗಲು ಕಾರಣವಾಗಿದೆ ಎಂಬುದಾಗಿ ತಿಳಿದು ಬಂದಿದ್ದು, ಸ್ಪೂರ್ತಿ ಗೌಡ ಅವರ ಬಳಿ ಬಂದು ಸೋನು ಶ್ರೀನಿವಾಸ ಗೌಡ ಅವರು ಮೇಕಪ್ ಬಗ್ಗೆ ಕೆಲವೊಂದು ಗೊತ್ತಿಲ್ಲದ ಪ್ರಶ್ನೆಯನ್ನು ಕೇಳಿ ತಿಳಿದುಕೊಳ್ಳಲು ಪ್ರಯತ್ನಿಸುತ್ತಾರೆ. ಆ ಸಂದರ್ಭದಲ್ಲಿ ಸ್ಪೂರ್ತಿ ಗೌಡ ಅವರು ಮೇಕಪ್ ಬಗ್ಗೆ ನನಗೆ ಅಷ್ಟೊಂದು ತಿಳಿದಿಲ್ಲ ಎಂಬುದಾಗಿ ಹೇಳಿದಾಗ ಡವ್ ರಾಣಿ ಮೇಕಪ್ ಬಗ್ಗೆ ಎಲ್ಲವನ್ನು ತಿಳಿದುಕೊಂಡಿದ್ದರೂ ಕೂಡ ಏನೂ ಬಿಟ್ಕೊಡ್ತಾಯಿಲ್ಲ ಎಂದು ಸೋನು ಶ್ರೀನಿವಾಸ ಗೌಡ ಸ್ಪೂರ್ತಿಗೌಡ ಅವರಿಗೆ ಹೇಳುತ್ತಾರೆ. ಡವ್ ರಾಣಿ ಎನ್ನುವ ಪದವನ್ನು ಉಪಯೋಗಿಸಿದ ಕಾರಣಕ್ಕಾಗಿ ಸ್ಪೂರ್ತಿಗೌಡ ಅವರು ಸೋನು ಗೌಡ ಅವರ ವಿರುದ್ಧ ಅಸಮಾಧಾನವನ್ನು ಕಾರುತ್ತಾರೆ.

ಆಶ್ಚರ್ಯವೆಂಬಂತೆ ಮೊದಲಿಗೆ ಇದೇ ಪದವನ್ನು ಸೋನು ಶ್ರೀನಿವಾಸ ಗೌಡ ಬಳಸಿದಾಗ ಸ್ಪೂರ್ತಿಗೌಡ ಅವರು ಮುಗುಳ್ನಕ್ಕೂ ಇದರ ಕುರಿತಂತೆ ಯಾವುದೇ ಕೋಪದ ರಿಯಾಕ್ಷನ್ ಅನ್ನು ಬಳಸುವುದಿಲ್ಲ. ಆದರ್ಶ್ ಸ್ವಲ್ಪ ಹೊತ್ತಿನ ನಂತರ ಇದರ ಕುರಿತಂತೆ ಸ್ಪೂರ್ತಿ ಗೌಡ ಅವರು ಸೋನು ಗೌಡ ಅವರ ಬಳಿ ಇಂತಹ ಪದ ಪ್ರಯೋಗವನ್ನು ಮಾಡಬೇಡ ಎನ್ನುವುದಾಗಿ ಕೋಪದಿಂದ ವರ್ತಿಸುತ್ತಾರೆ ಇದೆ ಇವರಿಬ್ಬರ ನಡುವೆ ಜಗಳಕ್ಕೆ ಪ್ರಾರಂಭವಾಗುತ್ತದೆ.

ಹೀಗಾಗಿ ಈ ಡವ್ ರಾಣಿ ಎನ್ನುವ ಪದ ಪ್ರಯೋಗದಿಂದ ಪ್ರಾರಂಭವಾಗಿರುವ ಜಗಳ ಇಬ್ಬರ ನಡುವೆ ಈಗ ದುಶ್ಮನಿಯನ್ನು ಮೂಡುವಂತೆ ಮಾಡಿದೆ. ಜಗಳದ ಸಂದರ್ಭದಲ್ಲಿ ಇವರಿಬ್ಬರನ್ನು ಶಾಂತಿಯಾಗಿ ಇರುವಂತೆ ಮನೆಯವರು ಪ್ರಯತ್ನಿಸಿದ್ದು ಸಫಲವಾಗಿದೆ ನಿಜ ಆದರೆ ಇಬ್ಬರೂ ಕೂಡ ಈಗ ಪರಸ್ಪರ ಮಾತನಾಡಿಕೊಳ್ಳುತ್ತಿಲ್ಲ. ವಾರಾಂತ್ಯದಲ್ಲಿ ನಡೆಯುವ ಪಂಚಾಯಿತಿ ದಿನದಂದು ಇವರಿಬ್ಬರ ಜಗಳ ಯಾವ ಮಟ್ಟಿಗೆ ಶಮನವಾಗುತ್ತದೆ ಅಥವಾ ಕಿಚ್ಚ ಸುದೀಪ್ ಅವರಿಂದ ಯಾವ ಮಟ್ಟಿಗೆ ಪನಿಷ್ಮೆಂಟಿಗೆ ಒಳಗಾಗುತ್ತಿದೆ ಎಂಬುದನ್ನು ಕಾದು ನೋಡಬೇಕಾಗಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.