ಕರುನಾಡ ವಾಣಿ
ಇದು ನಿಮ್ಮ ಧ್ವನಿ

ದಿನೇ ದಿನೇ ರಾಹುಲ್ ಮೇಲೆ ಅನುಮಾನ: ಇಂಜುರಿ ಫಿಕ್ಸ್ ಆಗುತ್ತಾ?? ಈತ ಭಾರತದ ಆರಂಭಿಕನಾಗಲಿ ಎಂದ ಕ್ರಿಕೆಟ್ ತಜ್ಞ. ರಾಹುಲ್ ಬದಲು ಯಾರಂತೆ ಗೊತ್ತೇ??

ದಿನೇ ದಿನೇ ರಾಹುಲ್ ಮೇಲೆ ಅನುಮಾನ: ಇಂಜುರಿ ಫಿಕ್ಸ್ ಆಗುತ್ತಾ?? ಈತ ಭಾರತದ ಆರಂಭಿಕನಾಗಲಿ ಎಂದ ಕ್ರಿಕೆಟ್ ತಜ್ಞ. ರಾಹುಲ್ ಬದಲು ಯಾರಂತೆ ಗೊತ್ತೇ??

2,498

ನಮಸ್ಕಾರ ಸ್ನೇಹಿತರೆ ವಿರಾಟ್ ಕೊಹ್ಲಿ ಅವರ ನಂತರ ಭಾರತೀಯ ಕ್ರಿಕೆಟ್ ತಂಡದ ನಾಯಕನಾಗಿ ರೋಹಿತ್ ಶರ್ಮ ರವರು ಆಯ್ಕೆಯಾಗಿದ್ದಾರೆ ಉಪನಾಯಕನಾಗಿ ಕೆಎಲ್ ರಾಹುಲ್ ರವರು ಆಯ್ಕೆಯಾಗಿದ್ದರು. ಆದರೆ ಈ ವರ್ಷ ಕೆಎಲ್ ರಾಹುಲ್ ರವರು ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಯಾವುದೇ ಸರಣಿಗಳಲ್ಲಿ ಕೂಡ ಆಡಲು ಸಾಧ್ಯವಾಗಿಲ್ಲ.

Follow us on Google News

ಒಂದು ಕಾಲದಲ್ಲಿ ತಂಡದ ಪರವಾಗಿ ಸತತವಾಗಿ ಅದ್ಭುತ ಪ್ರದರ್ಶನವನ್ನು ನೀಡುತ್ತಾ ಬರುತ್ತಿದ್ದ ಕೆ ಎಲ್ ರಾಹುಲ್ ರವರು ಈ ವರ್ಷ ಸಂಪೂರ್ಣವಾಗಿ ಐಪಿಎಲ್ ಅನ್ನು ಹೊರತುಪಡಿಸಿ ಇಂಜುರಿಯ ಕಾರಣದಿಂದಾಗಿ ತಂಡದಿಂದ ಹೊರಗೆ ಉಳಿದುಕೊಂಡಿದ್ದು ಮುಂದಿನ ಏಷ್ಯಾ ಕಪ್ ಹಾಗೂ ಟಿ20 ವಿಶ್ವಕಪ್ ನಲ್ಲಿ ಕೂಡ ಸ್ಥಾನವನ್ನು ಪಡೆಯುತ್ತಾರೋ ಇಲ್ಲವೋ ಎಂಬುದು ಅನುಮಾನವಾಗಿಬಿಟ್ಟಿದೆ. ತಂಡದ ಆರಂಭಿಕ ಆಟಗಾರನಾಗಿ ಜವಾಬ್ದಾರಿಯನ್ನು ವಹಿಸಿಕೊಂಡಿದ್ದ ಕೆ ಎಲ್ ರಾಹುಲ್ ರವರು ತಮ್ಮ ಜವಾಬ್ದಾರಿಯನ್ನು ಫಿಟ್ನೆಸ್ ಹೊಂದಿದ್ದ ಸಂದರ್ಭದಲ್ಲಿ ತಂಡದಲ್ಲಿ ಅತ್ಯುತ್ತಮವಾಗಿ ನಿಭಾಯಿಸಿದ್ದಾರೆ. ಆದರೆ ಈಗ ಅವರ ಸ್ಥಾನಕ್ಕೆ ಪರ್ಯಾಯ ಆಟಗಾರನನ್ನು ಹುಡುಕಬೇಕಾಗಿರುವುದು ಭಾರತೀಯ ಕ್ರಿಕೆಟ್ ತಂಡದ ಅನಿವಾರ್ಯತೆಯಾಗಿದೆ. ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಆಗಿರುವ ದೀಪ್ ದಾಸ್ ಗುಪ್ತ ಅವರು ಕೆ ಎಲ್ ರಾಹುಲ್ ರವರ ಆರಂಭಿಕ ಆಟಗಾರನ ಸ್ಥಾನಕ್ಕೆ ಅತ್ಯಂತ ಪರಿಪಕ್ವವಾದ ಪರ್ಯಾಯ ಆಟಗಾರನನ್ನು ಸೂಚಿಸಿದ್ದಾರೆ.

ಹೌದು ಗೆಳೆಯರೇ ಬ್ಯಾಕಪ್ ಓಪನಿಂಗ್ ಬ್ಯಾಟ್ಸ್ಮನ್ ಆಗಿ ಪ್ರಥ್ವಿ ಶಾ ಅವರನ್ನು ತಂಡ ಆಯ್ಕೆ ಮಾಡುವುದು ಉತ್ತಮ ಎಂಬುದಾಗಿ ಅವರು ಹೇಳಿದ್ದಾರೆ. ಈಗಾಗಲೇ ಐಪಿಎಲ್ ಸೇರಿದಂತೆ ಹಲವಾರು ಪಂದ್ಯಗಳಲ್ಲಿ ತಮ್ಮನ್ನು ತಾವು ಸಾಬೀತುಪಡಿಸಿಕೊಂಡಿರುವ ಪೃಥ್ವಿ ಶಾ ಕೆ ಎಲ್ ರಾಹುಲ್ ರವರ ಸ್ಥಾನಕ್ಕೆ ಉತ್ತಮ ರಿಪ್ಲೇಸ್ಮೆಂಟ್ ಎಂಬುದಾಗಿ ಹೇಳಬಹುದಾಗಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.