ಅದ್ಯಾವ ಕ್ಷಣದಲ್ಲಿ ಕಾಲಿಟ್ಟರೋ ಗೊತ್ತಿಲ್ಲ, ಬಿಗ್ ಬಾಸ್ ಮನೆಗೆ ಹೋಗುತ್ತಿದ್ದಂತೆ ಬೆಂಕಿ ಇಟ್ಟ ಸೋನು, ಆರ್ಯವರ್ಧನ್. ಏನಾಗುತ್ತಿದೆ ಗೊತ್ತೇ??
ಅದ್ಯಾವ ಕ್ಷಣದಲ್ಲಿ ಕಾಲಿಟ್ಟರೋ ಗೊತ್ತಿಲ್ಲ, ಬಿಗ್ ಬಾಸ್ ಮನೆಗೆ ಹೋಗುತ್ತಿದ್ದಂತೆ ಬೆಂಕಿ ಇತ್ತ ಸೋನು, ಆರ್ಯವರ್ಧನ್. ಏನಾಗುತ್ತಿದೆ ಗೊತ್ತೇ??
ನಮಸ್ಕಾರ ಸ್ನೇಹಿತರೆ ಅರಮನೆಯ ಒಳಗೆ ಕ್ಯಾಮೆರಾ ಮುಂದೆ ನಡೆಯುವ ನೈಜ ಜೀವನದ ಹಂಗಾಮವನ್ನು ಬಿಗ್ ಬಾಸ್ ಅನ್ನುವುದಾಗಿ ಕರೆಯುತ್ತಾರೆ ಅದೇ ಬಿಗ್ ಬಾಸ್ ಈಗ 24 ಗಂಟೆಗಳ ಕಾಲ ಕ್ಯಾಮರಾ ಮುಂದೆ ವೂಟ್ ಎನ್ನುವ ಓ ಟಿ ಟಿ ಆಪ್ಲಿಕೇಶನ್ ನಲ್ಲಿ ಈಗಾಗಲೇ ಪ್ರಸಾರವನ್ನು ಮೊದಲ ಸೀಸನ್ ರೂಪದಲ್ಲಿ ಪ್ರಾರಂಭಿಸಿದೆ.
ಆದರೆ ಪ್ರತಿ ಬಾರಿ ಕೂಡ ಪ್ರೇಕ್ಷಕರು ಬಿಗ್ ಬಾಸ್ ಮನೆಗೆ ಬರುವಂತಹ ಕಂಟೆಸ್ಟೆಂಟ್ಗಳ ಕುರಿತಂತೆ, ಅವರ ಸಾಧನೆಯನ್ನು ವಾಹಿನಿ ಗುರುತಿಸಿ ಅವರಿಗೆ ಒಂದು ವೇದಿಕೆ ಮೇಲೆ ಜೀವನವನ್ನು ರೂಪಿಸಿಕೊಳ್ಳುವ ಅವಕಾಶವನ್ನು ನೀಡುತ್ತಿದೆ ಎಂಬುದಾಗಿ ಭಾವಿಸುತ್ತಿತ್ತು ಆದರೆ ಈ ಬಾರಿ ಮಾತ್ರ ಕೆಲವೊಂದು ಸ್ಪರ್ಧಿಗಳ ಕುರಿತಂತೆ ಪ್ರೇಕ್ಷಕರು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಪ್ರೇಕ್ಷಕರು ಈ ಬಾರಿಯ ಬಿಗ್ ಬಾಸ್ ಕಂಟೆಸ್ಟೆಂಟ್ಗಳಲ್ಲಿ ಇಬ್ಬರ ವಿರುದ್ಧ ಸಾಕಷ್ಟು ಗರಂ ಆಗಿದ್ದಾರೆ ಎಂದು ಹೇಳಬಹುದಾಗಿದೆ. ಅವರಿಬ್ಬರನ್ನು ಸ್ಪರ್ಧಿಗಳಾಗಿ ಆಯ್ಕೆ ಮಾಡಿರುವುದಕ್ಕೆ ವಾಹಿನಿಯ ವಿರುದ್ಧ ಕಿಡಿ ಕಾರುತ್ತಿದ್ದಾರೆ ಎಂದರು ಕೂಡ ತಪ್ಪಾಗಲಾರದು. ಹೌದು ವೀಕ್ಷಕರು ಕೋಪಗೊಂಡಿರುವುದು ಮೊದಲ ಹಾಗೂ ಎರಡನೇ ಸ್ಪರ್ಧಿಗಳ ವಿರುದ್ಧ.
ಸಂಖ್ಯಾ ಶಾಸ್ತ್ರದ ಪರಿಣಿತ ಎಂದೆನಿಸಿಕೊಂಡಿರುವ ಆರ್ಯವರ್ಧನ್ ಗುರೂಜಿ ಹಾಗೂ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿರುವ ಸೋನು ಗೌಡ ಅವರ ಆಯ್ಕೆಯ ವಿರುದ್ಧ ವಾಹಿನಿಗೆ ಸೋಶಿಯಲ್ ಮೀಡಿಯಾದಲ್ಲಿ ಬಾಯಿಗೆ ಬಂದಂತೆ ಪ್ರೇಕ್ಷಕರು ಬಯ್ಯುತ್ತಿದ್ದಾರೆ. ಕೆಲವರು ಐಫೋನ್ನಲ್ಲಿ ಕಳೆದುಕೊಂಡ ಮಾನ ಟಿವಿಯಲ್ಲಿ ಪಡೆದುಕೊಳ್ಳಲು ಬಂದಿದ್ದಾರೆ ಎಂಬುದಾಗಿ ಸೋನು ಗೌಡ ಅವರ ವಿರುದ್ಧ ಕಾಮೆಂಟ್ ಮಾಡಿದರೆ ಇನ್ನು ಕೆಲವರು ಈ ಕಾರ್ಯಕ್ರಮದ ಮೇಲೆ ಗೌರವ ಕಳೆದುಹೋಗಿದೆ ಎಂಬುದಾಗಿ ಕೂಡ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಇಲ್ಲಿಗೆ ಬರಬೇಕಾದರೆ ಸಾಧಕರು ಆಗಿರಬೇಕಾಗಿಲ್ಲ ಬೆರೆಕೆ ಕೆಲಸ ಮಾಡಿದವರು ಕೂಡ ಬರಬಹುದು ಎಂಬುದಾಗಿ ಕೂಡ ಕಿಡಿ ಕಾರಿದ್ದಾರೆ. ಒಟ್ಟಾರೆಯಾಗಿ ಆರ್ಯವರ್ಧನ್ ಗುರೂಜಿ ಹಾಗೂ ಸೋನು ಗೌಡ ಅವರ ಆಯ್ಕೆ ಎಲ್ಲರ ಅಸಮಾಧಾನಕ್ಕೆ ಕಾರಣವಾಗಿದ್ದು ಮನೆಯಿಂದ ಬೇಗ ಹೊರ ಬರುತ್ತಾರೆ ಎಂಬುದಾಗಿ ಕೂಡ ಸೋಶಿಯಲ್ ಮೀಡಿಯಾದಲ್ಲಿ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ.