ಏಷ್ಯಾ ಕಪ್ ಗು ಮುನ್ನವೇ ಭಾರತ ತಂಡಕ್ಕೆ ಬಿಗ್ ಶಾಕ್: ಕೊನೆ ಕ್ಷಣದಲ್ಲಿ ಸ್ಟಾರ್ ಆಟಗಾರ ಔಟ್. ಯಾರು ಗೊತ್ತೇ??

ಏಷ್ಯಾ ಕಪ್ ಗು ಮುನ್ನವೇ ಭಾರತ ತಂಡಕ್ಕೆ ಬಿಗ್ ಶಾಕ್: ಕೊನೆ ಕ್ಷಣದಲ್ಲಿ ಸ್ಟಾರ್ ಆಟಗಾರ ಔಟ್. ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೆ ಸದ್ಯದ ಮಟ್ಟಿಗೆ ಭಾರತೀಯ ಕ್ರಿಕೆಟ್ ತಂಡ ವಿದೇಶಿ ಸರಣಿಗಳಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡುತ್ತಿದೆ ಆದರೂ ಕೂಡ ಮುಂದಿನ ಮಹತ್ವದ ಟೂರ್ನಮೆಂಟ್ ಗಳ ದೃಷ್ಟಿಕೋನದಲ್ಲಿ ಭಾರತೀಯ ಅನುಭವಿ ಕ್ರಿಕೆಟಿಗರು ಹಿಂದುರಿಗೆ ಒಳಗಾಗುತ್ತಿರುವುದು ಹಾಗೂ ವಿಶ್ರಾಂತಿ ಪಡೆಯುತ್ತಿರುವುದು ನಿಜಕ್ಕೂ ಕೂಡ ಚಿಂತೆಯ ವಿಷಯವಾಗಿದೆ. ಅದರಲ್ಲಿ ವಿಶೇಷವಾಗಿ ಇತ್ತೀಚಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್ ತಂಡದ ಅತ್ಯಂತ ಅನುಭವಿ ಹಾಗೂ ಮಹತ್ವದ ಪಾತ್ರವನ್ನು ವಹಿಸುತ್ತಿರುವ ಆಟಗಾರರು ಇಂಜುರಿಯಿಂದ ತಂಡದಿಂದ ಹೊರಕ್ಕೆ ಬೀಳುತ್ತಿರುವುದು ನಿಜಕ್ಕೂ ಕೂಡ ಚಿಂತೆಯ ವಿಷಯವಾಗಿದೆ.

ಯಾಕೆಂದರೆ ಇದೇ ತಿಂಗಳ ಕೊನೆಯಲ್ಲಿ ಅಂದರೆ ಆಗಸ್ಟ್ 27ರಿಂದ ಯುಎಇ ನಲ್ಲಿ ಏಷ್ಯಾ ಕಪ್ ಪ್ರಾರಂಭ ಆಗಲಿದ್ದು ಕೆಲವು ತಿಂಗಳುಗಳ ಅಂತರದಲ್ಲಿ ಅಂದರೆ ಅಕ್ಟೋಬರ್ ತಿಂಗಳಿನಲ್ಲಿ ಆಸ್ಟ್ರೇಲಿಯಾದಲ್ಲಿ ಟಿ 20 ವಿಶ್ವಕಪ್ ಕೂಡ ಆರಂಭವಾಗಲಿ. ಹೀಗಾಗಿ ಟಿ20 ವಿಶ್ವಕಪ್ ತಂಡವನ್ನು ಆಯ್ಕೆ ಮಾಡಲು ಏಷ್ಯಾ ಕಪ್ ನಲ್ಲಿ ಯಾರು ಚೆನ್ನಾಗಿ ಆಡುತ್ತಾರೋ ಅವರನ್ನೇ ಆಯ್ಕೆ ಮಾಡುವುದು ಎನ್ನುವುದಾಗಿ ಬಿಸಿಸಿಐ ನಿರ್ಧರಿಸಿರುವುದು ಹಾಗೂ ಇದೇ ಸಂದರ್ಭದಲ್ಲಿ ಏಷ್ಯಾ ಕಪ್ ತಂಡಕ್ಕೆ ಆಯ್ಕೆ ಆಗಲೇ ಬೇಕಾಗಿದ್ದ ಪ್ರಮುಖ ಆಟಗಾರರು ಇಂಜುರಿಯಿಂದ ಹೊರ ಹೋಗುತ್ತಿರುವುದು ತಲೆನೋವಿನ ವಿಚಾರವಾಗಿದೆ. ಅದರಲ್ಲಿ ವಿಶೇಷವಾಗಿ ಕೊನೆಯ ಓವರ್ ಗಳಲ್ಲಿ ಅತ್ಯಂತ ನಿಯಂತ್ರಿತ ಬೌಲಿಂಗ್ ಮಾಡಲು ಹೆಸರುವಾಸಿಯಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೀ ಬೌಲರ್ ಹರ್ಷಲ್ ಪಟೇಲ್ ಅವರ ಪಕ್ಕೆಲುಬಿನ ಇಂಜುರಿಯಿಂದಾಗಿ ಈಗಾಗಲೇ ಪೂರ್ಣ ವೆಸ್ಟ್ ಇಂಡೀಸ್ ಸರಣಿಯನ್ನು ಮಿಸ್ ಮಾಡಿಕೊಂಡಿದ್ದಾರೆ.

ವೈದ್ಯರು ಈಗಾಗಲೇ ಹರ್ಷಲ್ ಪಟೇಲ್ ಅವರಿಗೆ ಈ ಇಂಜುರಿಯಿಂದ ಹೊರಬರಲು ಮೂರು ತಿಂಗಳ ವಿಶ್ರಾಂತಿ ಅತ್ಯಗತ್ಯ ಎಂಬುದಾಗಿ ಸಲಹೆ ನೀಡಿದ್ದಾರೆ. ಈ ಕಾರಣದಿಂದಾಗಿ ಏಷ್ಯಾ ಕಪ್ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ಸರಣಿ ಮತ್ತು ಟಿ20 ವಿಶ್ವಕಪ್ ಅನ್ನು ಕೂಡ ಹರ್ಷಲ್ ಪಟೇಲ್ ಅವರು ಮಿಸ್ ಮಾಡಿಕೊಳ್ಳಲಿದ್ದಾರೆ ಎನ್ನುವುದು ಸುನಿಶ್ಚಿತವಾಗಿದೆ. ಐಸಿಸಿ ಯ ಪ್ರಮುಖ ಟೂರ್ನಮೆಂಟ್ ನಲ್ಲಿ ಪ್ರಮುಖ ಆಟಗಾರನ ಸೇವೆಯನ್ನು ಪಡೆದುಕೊಳ್ಳದೆ ಇರುವುದು ತಂಡದ ಫಲಿತಾಂಶದಲ್ಲಿ ದೊಡ್ಡ ಪರಿಣಾಮವನ್ನು ಬೀರಬಹುದಾಗಿದೆ ಎಂಬುದಾಗಿ ಕ್ರಿಕೆಟ್ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ.